Advertisement

Guwahati; ಇಂದು 3ನೇ ಟಿ20, ಭಾರತಕ್ಕೆ ಸರಣಿ ಗೆಲುವಿನ ಗುರಿ

11:58 PM Nov 27, 2023 | Team Udayavani |

ಗುವಾಹಟಿ: ಆಸ್ಟ್ರೇಲಿಯ ವಿರುದ್ಧ ಅನುಭವಿಸಿದ ಏಕದಿನ ವಿಶ್ವಕಪ್‌ ಫೈನಲ್‌ ಸೋಲಿನ ಬಳಿಕ ಭಾರತವೀಗ ಟಿ20 ಸರಣಿಯಲ್ಲಿ ತಿರುಗಿ ಬೀಳುವ ಯೋಜನೆಯಲ್ಲಿ ಯಶಸ್ಸು ಕಾಣಲಾರಂಭಿಸಿದೆ. ಮೊದ ಲೆರಡೂ ಪಂದ್ಯಗಳನ್ನು ಗೆದ್ದಿರುವ ಸೂರ್ಯಕುಮಾರ್‌ ಪಡೆಯೀಗ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದು, ಮಂಗಳವಾರದ ಗುವಾಹಟಿ ಪಂದ್ಯ ವನ್ನೂ ವಶಪಡಿಸಿಕೊಳ್ಳಲು ಯೋಜನೆ ರೂಪಿಸುತ್ತಿದೆ.

Advertisement

ಇದೇ ವೇಳೆ ಆಸ್ಟ್ರೇಲಿಯದ ಮೇಲೆ ಒತ್ತಡ ತೀವ್ರಗೊಂಡಿದೆ. ಸರಣಿಯನ್ನು ಉಳಿಸಿಕೊಳ್ಳಬೇಕಾದರೆ ಮ್ಯಾಥ್ಯೂ ವೇಡ್‌ ಬಳಗ ಗೆಲ್ಲಬೇಕಾದುದು ಅನಿವಾರ್ಯ. ಆದರೆ ಒಮ್ಮೆ ಸರಣಿಗೆ ಮರಳಿತೆಂದರೆ ಕಾಂಗರೂ ಪಡೆಯನ್ನು ಕಟ್ಟಿಹಾಕುವುದು ಕಷ್ಟವಾಗಬಹುದು. ಹೀಗಾಗಿ ಗುವಾಹಟಿ ಕ್ರಿಕೆಟ್‌ ಕದನವನ್ನು ಗೆದ್ದು ಸರಣಿ ಗೆಲುವಿನ ಗುರಿಯನ್ನು ಈಡೇರಿಸಿಕೊಳ್ಳುವುದರಲ್ಲಿ ನಮ್ಮವರ ಜಾಣತನ ಅಡಗಿದೆ.

ವಿಶಾಖಪಟ್ಟಣ ಹಾಗೂ ತಿರುವ ನಂತಪುರದಲ್ಲಿ ನಡೆದ ಮೊದಲೆರಡೂ ಪಂದ್ಯಗಳು ಬ್ಯಾಟರ್‌ಗಳ ಮೇಲಾ ಟವಾಗಿ ಪರಿಣಮಿಸಿದ್ದವು. ಬೌಲರ್‌ಗಳು ಭಾರೀ ದಂಡನೆಗೆ ಒಳಗಾಗಿದ್ದರು. ಗುವಾಹಟಿ ಟ್ರ್ಯಾಕ್‌ ಕೂಡ ಇದಕ್ಕಿಂತ ಭಿನ್ನವಿರಲಾರದು.
ಮೊದಲೆರಡು ಪಂದ್ಯಗಳ 4 ಇನ್ನಿಂಗ್ಸ್‌ಗಳಲ್ಲಿ 3 ಸಲ ತಂಡಗಳ ಮೊತ್ತ ಇನ್ನೂರರ ಗಡಿ ದಾಟಿತ್ತೆಂಬುದನ್ನು ಮರೆಯುವಂತಿಲ್ಲ. ಉರುಳಿದ್ದು 24 ವಿಕೆಟ್‌ ಮಾತ್ರ. ದ್ವಿತೀಯ ಮುಖಾಮುಖಿಯ ಚೇಸಿಂಗ್‌ ವೇಳೆ ಮುನ್ನುಗ್ಗಿ ಬಂದ ಆಸೀಸ್‌ 9 ವಿಕೆಟಿಗೆ 191ರ ತನಕ ಬ್ಯಾಟಿಂಗ್‌ ವಿಸ್ತರಿಸಿತ್ತು. ಇಲ್ಲಿ ಆಸೀಸ್‌ ಮುಂದೆ 236 ರನ್ನುಗಳ ಕಠಿನ ಟಾರ್ಗೆಟ್‌ ಇದ್ದಿತ್ತು.

ತಿಲಕ್‌ಗೆ ಲಾಸ್ಟ್‌ ಚಾನ್ಸ್‌
ಎರಡೂ ಪಂದ್ಯಗಳಲ್ಲಿ ಬ್ಯಾಟರ್‌ಗಳೇ ಮೇಲುಗೈ ಸಾಧಿಸಿದರೂ ಭಾರತ ಬ್ಯಾಟಿಂಗ್‌ ಸಮಸ್ಯೆಯಿಂದ ಸಂಪೂರ್ಣ ಮುಕ್ತವಾಗಿಲ್ಲ ಎಂಬುದನ್ನು ಗಮನಿಸಬೇಕು. ಇಲ್ಲಿ ತಿಲಕ್‌ ವರ್ಮ ಅಷ್ಟೇನೂ ಯಶಸ್ಸು ಕಂಡಿಲ್ಲ. ಮಂಗಳವಾರ ಇವರ ಮುಂದಿರುವುದು ಅಂತಿಮ ಅವಕಾಶ. ರಾಯ್‌ಪುರ ಹಾಗೂ ಬೆಂಗಳೂರಿನಲ್ಲಿ ಆಡಲಾಗುವ ಕೊನೆಯ 2 ಪಂದ್ಯಗಳಿಗೆ ಶ್ರೇಯಸ್‌ ಅಯ್ಯರ್‌ ಪ್ರವೇಶವಾಗಲಿದೆ. ಅವರು ನೇರವಾಗಿ ತಿಲಕ್‌ ವರ್ಮ ಸ್ಥಾನಕ್ಕೆ ಲಗ್ಗೆ ಹಾಕುವುದು ಖಚಿತ.

ಉಳಿದಂತೆ ಯಶಸ್ವಿ ಜೈಸ್ವಾಲ್‌, ರುತುರಾಜ್‌ ಗಾಯಕ್ವಾಡ್‌, ಇಶಾನ್‌ ಕಿಶನ್‌, ನಾಯಕ ಸೂರ್ಯಕುಮಾರ್‌ ಯಾದವ್‌, ರಿಂಕು ಸಿಂಗ್‌ ಅವರೆಲ್ಲ ಭಾರತದ ಬ್ಯಾಟಿಂಗ್‌ ಸರದಿಗೆ ಸ್ಫೋಟಕ ಸ್ಪರ್ಶ ಕೊಟ್ಟಿದ್ದಾರೆ. ಜೈಸ್ವಾಲ್‌ ತಿರುವನಂತಪುರ ಪಂದ್ಯದ ಪವರ್‌ ಪ್ಲೇಯಲ್ಲಿ ಅಬ್ಬರಿಸಿದ ರೀತಿ ಕಂಡಾಗ ಯಾವುದೇ ಎದುರಾಳಿ ದಿಗಿಲುಗೊಳ್ಳಲೇಬೇಕು. ಮೊದಲ ಪಂದ್ಯದಲ್ಲಿ ಚೆಂಡನ್ನು ಎದುರಿಸುವ ಮೊದಲೇ ರನೌಟ್‌ ಆಗಿ ನಿರ್ಗಮಿಸಿದ ಗಾಯಕ್ವಾಡ್‌, ದ್ವಿತೀಯ ಮುಖಾ ಮುಖಿಯಲ್ಲಿ ಸಾವಧಾನದ ಬ್ಯಾಟಿಂಗ್‌ ನಡೆಸಿದರು. ಇಶಾನ್‌ ಕಿಶನ್‌ ಅವರದು ಎರಡೂ ಪಂದ್ಯಗಳಲ್ಲಿ ಅರ್ಧ ಶತಕದ ಸಾಹಸ.

Advertisement

ಸೂರ್ಯಕುಮಾರ್‌ ಅವರ ವಿಶ್ವಕಪ್‌ ಬ್ಯಾಟಿಂಗ್‌ ವೈಫ‌ಲ್ಯ ಕಂಡಾಗ ಅವರ ನಾಯಕತ್ವಕ್ಕೆ ತೀವ್ರ ವಿರೋಧ ವ್ಯಕ್ತವಾದದ್ದು ಸಹಜ. ಆದರೆ ಟಿ20 ಮಾದರಿಯಲ್ಲಿ ತಾನು ಪಕ್ಕಾ 360 ಡಿಗ್ರಿ ಪ್ಲೇಯರ್‌ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಮೊದಲ ಪಂದ್ಯದ ಚೇಸಿಂಗ್‌ ವೇಳೆ ಸರ್ವಾ ಧಿಕ 80 ರನ್‌ ಬಾರಿಸಿದ ಸೂರ್ಯ, ತಿರುವನಂತಪುರದಲ್ಲಿ ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟಿದರು. ಸತತ 2 ಜಯದಿಂದಾಗಿ ನಾಯಕತ್ವದಲ್ಲೂ ಅವರು ಯಶಸ್ಸು ಸಾಧಿಸಿದಂತಾಯಿತು. ಸರಣಿ ಗೆದ್ದರೆ ದೊಡ್ಡ ಹೀರೋ ಆಗಲಿದ್ದಾರೆ.

ರಿಯಲ್‌ ಸ್ಟಾರ್‌ ರಿಂಕು
ರಿಂಕು ಸಿಂಗ್‌ ಈ ಸರಣಿಯ ರಿಯಲ್‌ ಸ್ಟಾರ್‌ ಆಗಿ ಮೂಡಿಬರುವ ಎಲ್ಲ ಸಾಧ್ಯತೆ ಇದೆ. ಕೊನೆಯ ಕ್ಷಣದಲ್ಲಿ 8-10 ಎಸೆತ ಸಿಕ್ಕಿದರೂ ಇವೆಲ್ಲವನ್ನೂ ಸೀಮಾರೇಖೆಯಾಚೆ ದಾಟಿಸುವ ಕೌಶಲ ಇವರಿಗೆ ಸಿದ್ಧಿಸಿದೆ. ಇವರದು ಎರಡೂ ಅಜೇಯ ಇನ್ನಿಂಗ್ಸ್‌. 14 ಎಸೆತಗಳಿಂದ 22 ರನ್‌, 9 ಎಸೆತಗಳಿಂದ 31 ರನ್‌! ಉತ್ತಮ ಫಿನಿಶರ್‌ ಹಾಗೂ ಮ್ಯಾಚ್‌ ವಿನ್ನರ್‌ ಆಗುವ ಮೂಲಕ ರಿಂಕು ಎಲ್ಲರ ಕಣ್ಮಣಿ ಆಗಿದ್ದಾರೆ.

ಬೌಲರ್‌ಗಳದ್ದು ವೈಫ‌ಲ್ಯ ಎಂದು ಹೇಳುವಂತಿಲ್ಲ. ಟ್ರ್ಯಾಕ್‌ ಸಂಪೂರ್ಣ ವಾಗಿ ಬ್ಯಾಟರ್‌ಗಳ ಪರವಾಗಿದೆ. ಭಾರತದ ಅಂಕಿಅಂಶವನ್ನೇ ಉಲ್ಲೇಖೀಸ ಬೇಕೆಂದಿದ್ದರೆ, ಮೊದಲೆರಡು ಪಂದ್ಯ ಗಳಲ್ಲಿ ನಮ್ಮ ಯಂಗ್‌ ಗನ್ಸ್‌ 36 ಬೌಂಡರಿ, 24 ಸಿಕ್ಸರ್‌ ಸಿಡಿಸಿದ್ದಾರೆ. ಆದರೂ ತಿರುವನಂತಪುರದಲ್ಲಿ ಭಾರತ ಪ್ರವಾಸಿಗರ 9 ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾದುದನ್ನು ಉಲ್ಲೇಖಿಸದೆ ಇರುವಂತಿಲ್ಲ. ಬಿಷ್ಣೋಯಿ, ಮುಕೇಶ್‌ ಕುಮಾರ್‌, ಅರ್ಷದೀಪ್‌, ಪ್ರಸಿದ್ಧ್ ಕೃಷ್ಣ, ಅಕ್ಷರ್‌ ಪಟೇಲ್‌ ಗರಿಷ್ಠ ಪ್ರಯತ್ನ ಮಾಡಿದ್ದಾರೆ.

ಸೀನಿಯರ್‌ ಆಟಗಾರರು
ಆಸ್ಟ್ರೇಲಿಯ ಬಹಳಷ್ಟು ಸೀನಿಯರ್‌ ಆಟಗಾರರನ್ನು ಹೊಂದಿದೆ. ಸ್ಮಿತ್‌, ಅಬೋಟ್‌, ಮ್ಯಾಕ್ಸ್‌ವೆಲ್‌, ಸ್ಟೋಯಿನಿಸ್‌, ಝಂಪ ಈಗಾಗಲೇ ಈ ಸರಣಿಯಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಆದರೆ ಇನ್ನೂ ಗೆಲು ವಿನ ಮುಖ ಕಾಣಲಾಗಿಲ್ಲ. ಮಂಗಳವಾ ರದ ಅವಕಾಶ ಬಿಟ್ಟುಕೊಟ್ಟರೆ ಉಳಿಗಾಲವಿಲ್ಲ ಎಂಬುದರ ಸ್ಪಷ್ಟ ಅರಿವು ಇದೆ. ಹೀಗಾಗಿ ಕಾಂಗರೂ ಪಾಲಿಗೆ ಇದು ಮಾಡು-ಮಡಿ ಮುಖಾಮುಖೀ. ಇಂಥ ಸಂದರ್ಭದಲ್ಲಿ ಅವರು ಎಲ್ಲಿಲ್ಲದ ಜೋಶ್‌ನಲ್ಲಿರುತ್ತಾರೆ. ಯಂಗ್‌ ಇಂಡಿಯಾ ಹೆಚ್ಚು ಎಚ್ಚರ ವಹಿಸಬೇಕಿದೆ.

ಆರಂಭ: ರಾ. 7.00
ಪ್ರಸಾರ: ಸ್ಪೋರ್ಟ್ಸ್ 18

Advertisement

Udayavani is now on Telegram. Click here to join our channel and stay updated with the latest news.

Next