ಗುತ್ತಿಗಾರು: ಕೃಷಿಕರಿಗೆ ಹೈನು ಗಾರಿಕೆ, ಪಶುಪಾಲನೆ ಅತೀ ಅಗತ್ಯ ವಾಗಿದೆ. ಹೀಗಾಗಿ ಪಶುಪಾಲನೆಯ ಜತೆಗೆ ಗೋತಳಿಗಳನ್ನು ಉಳಿಸಿ ಬೆಳೆಸುವ ಕಾರ್ಯ ವೂ ನಡೆಯ ಬೇಕಿದೆ ಎಂದು ಶಾಸಕ ಎಸ್. ಅಂಗಾರ ಅವರು ಹೇಳಿದರು.
ಅವರು ಮಂಗಳವಾರ ಸುಳ್ಯ ತಾಲೂಕಿನ ಗುತ್ತಿಗಾರಿನ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ದೇಸಿ ಹಾಗೂ ಮಿಶ್ರತಳಿ ಹೆಣ್ಣು ಕರು ಮತ್ತು ಕಡಸುಗಳ ಪ್ರದರ್ಶನ, ಕಿಸಾನ್ ಸಂಪರ್ಕ ಸಭೆ ಹಾಗೂ ರೈತರಿಗೆ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇಲಾಖೆಗಳು ಕ್ರಿಯಾಶೀಲವಾದರೆ ಸರಕಾ ರದ ಎಲ್ಲ ಯೋಜನೆಗಳೂ ಯಶಸ್ಸು ಕಾಣಲು ಸಾಧ್ಯ. ಇದಕ್ಕೆ ಇಂತಹ ಕಾರ್ಯ ಕ್ರಮವೇ ಸಾಕ್ಷಿಯಾಗಿದೆ ಎಂದ ಅವರು, ದೇಸಿ ಗೋತಳಿಗಳನ್ನು ಉಳಿಸಿ, ಬೆಳೆಸುವ ಕೆಲಸವೂ ಆಗಬೇಕಿದೆ ಎಂದರು.
ಅತಿಥಿಯಾಗಿದ್ದ ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ಗುತ್ತಿಗಾರು ಗ್ರಾ. ಪಂ. ಅಧ್ಯಕ್ಷ ಅಚ್ಯುತ ಗುತ್ತಿಗಾರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಸದಸ್ಯೆ ಯಶೋದಾ ಬಾಳೆಗುಡ್ಡೆ, ಪಶುಪಾಲನ ಇಲಾಖೆಯ ಉಪನಿರ್ದೇಶಕ ಡಾ| ಎಸ್. ಮೋಹನ್, ಗುತ್ತಿಗಾರು ಪ್ರಾ.ಕೃಷಿ ಪತ್ತಿನ ಸ. ಸಂಘದ ಅಧ್ಯಕ್ಷ ಮುಳಿಯ ಕೇಶವ ಭಟ್, ಕೇಶವ ಹೊಸೋಳಿಕೆ, ಭಾರತೀ ಯ ಕಿಸಾನ್ ಸಂಘದ ಉಪಾಧ್ಯಕ್ಷ ದೇವಿ ಪ್ರಸಾದ್ ಚಿಕ್ಮುಳಿ, ಸದಾಶಿವ ಆಚಾರ್, ವಿಜಯ ಗ್ರಾಮ ಸಮಿತಿಯ ಅಧ್ಯಕ್ಷ ಉದಯ ಕುಮಾರ್ ಡಿ.ಆರ್. ಭಾಗವಹಿಸಿದ್ದರು.
ಸುಳ್ಯ ಪಶುಪಾಲನ ಇಲಾಖೆಯ ಡಾ| ಗುರುಮೂರ್ತಿ ಸ್ವಾಗತಿಸಿ, ಪ್ರಸ್ತಾವ ನೆಗೈದರು. ಪಶುವೈದ್ಯಾಧಿಕಾರಿ ಡಾ| ನಿತಿನ್ ಪ್ರಭು ವಂದಿಸಿದರು. ಪಶುವೈದ್ಯಾಧಿಕಾರಿ ಡಾ| ವೆಂಕಟಾಚಲಪತಿ ಸಹಕರಿಸಿದರು. ಶಿವ ಪ್ರಸಾದ್ ಹಾಲೆಮಜಲು ನಿರ್ವ ಹಿಸಿದರು. ಡಾ| ಪಿ. ಮನೋಹರ ಉಪಾಧ್ಯಾಯ, ಡಾ| ಸಿದ್ದವಿರೇಶ್, ಸಚಿನ್ ಮಾಹಿತಿ ನೀಡಿದರು.