Advertisement

ಫ್ರಾಂಕ್‌ಫ‌ರ್ಟ್‌ನಲ್ಲಿ ಕಂಡ ಗುಟೆನ್‌ಬರ್ಗ್‌ ಮ್ಯೂಸಿಯಂ

07:05 AM Oct 15, 2017 | Team Udayavani |

ಇತ್ತೀಚೆಗೆ ಜರ್ಮನಿ ದೇಶಕ್ಕೆ ಪ್ರವಾಸಿಗಳಾಗಿ ಹೋದಾಗ ಒಂದು ವಿಶಿಷ್ಟವಾದ ವಸ್ತು ಸಂಗ್ರಹಾಲಯವನ್ನು ವೀಕ್ಷಿಸುವ ಅವಕಾಶ ಒದಗಿ ಬಂತು.  ಫ್ರಾಂಕ್‌ಫ‌ರ್ಟ್‌ ನಗರದ ಸಮೀಪ ಇರುವ ಮೆಯಿನ್‌j ಎಂಬಲ್ಲಿರುವ ಗುಟೆನ್‌ಬರ್ಗ್‌ ಸಂಗ್ರಹಾಲಯ ಮುದ್ರಣಕ್ಕೆ ಸಂಬಂಧಿಸಿದ ವಿಷಯಗಳಿಗೆ ಮೀಸಲಾಗಿದೆ.  ಪ್ರಪ್ರಥಮವಾಗಿ ಮುದ್ರಣ ಯಂತ್ರವನ್ನು ಆವಿಷ್ಕರಿಸಿದ ಯೊಹಾನೆಸ್‌ ಗುಟೆನ್‌ಬರ್ಗ್‌ನ ಗೌರವಾರ್ಥ ಇದರ ಸ್ಥಾಪನೆ ಆಯಿತು.

Advertisement

ಗುಟೆನ್‌ಬರ್ಗ್‌ನ ಜೀವನದ ಬಗ್ಗೆ ಹೆಚ್ಚು ವಿವರಗಳು ತಿಳಿದಿಲ್ಲ.  ಇತಿಹಾಸಕಾರರು ಸಾಂದರ್ಭಿಕ ಪುರಾವೆಗಳ ಆಧಾರದಿಂದ ಈತನ ಜೀವನಚರಿತ್ರೆಯನ್ನು ರೂಪಿಸಿ¨ªಾರೆ.

ಮೆಯಿನ್‌j ನಗರದ ಪ್ರಭಾವೀ ಶ್ರೀಮಂತ ವ್ಯಾಪಾರಿ ಕುಟುಂಬದಲ್ಲಿ ಜನಿಸಿದ (ಕ್ರಿ.ಶ. 1394- 1404ರ ನಡುವೆ) ಈತ ಕಬ್ಬಿಣ, ಚಿನ್ನ ಮತ್ತು ಹರಳುಗಳ ಕೆಲಸದಲ್ಲಿ ಪರಿಣಿತನಾಗಿದ್ದ.  ಕ್ರಿ.ಶ. 1411ರಲ್ಲಿ ಆಂತರಿಕ ರಾಜಕೀಯ ಪ್ರಕ್ಷುಬ್ಧತೆಯಿಂದಾಗಿ  ಮೆಯಿನ್‌j ನಗರ ನಿರ್ನಾಮವಾದಾಗ ಇವನ ಕುಟುಂಬ ಆ ಜಾಗವನ್ನು ತೊರೆಯಬೇಕಾಯಿತು.
ಸ್ಟ್ರಾಸ್‌ಬರ್ಗ್‌ನಲ್ಲಿ ಈ ಕುಟುಂಬ ಹೊಸಜೀವನ ಆರಂಭಿಸಿತು. ಇಲ್ಲಿನ ಯೂನಿವರ್ಸಿಟಿ ಆಫ್ ಎಫ‌ìರ್ಟ್‌ ನಲ್ಲಿ ಬಹುಶಃ ಇವನ ವಿದ್ಯಾಭ್ಯಾಸ ಆಯಿತು.  ಕ್ರಿ. ಶ. 1418ರಲ್ಲಿ ಈ ವಿಶ್ವವಿದ್ಯಾಲಯದಲ್ಲಿ ಈತನ ಹೆಸರಿನ ಉÇÉೇಖವಿದೆ.

ಇವನ ಮುಂದಿನ 15 ವರ್ಷಗಳ ಜೀವನ ನಿಗೂಢವಾಗಿ ಉಳಿದಿದೆ.  ಕ್ರಿ. ಶ. 1434ರ ಒಂದು ಪತ್ರದ ಮುಖೇನ ಈತ ಇನ್ನೂ ಸ್ಟ್ರಾಸ್‌ಬರ್ಗ್‌ನ ನಿವಾಸಿಯಾಗಿದ್ದ ಹಾಗೂ ಚಿನಿವಾರನ ಕೆಲಸ ಮಾಡುತ್ತಿದ್ದ ಎಂದು ತಿಳಿಯುತ್ತದೆ.  ಜೊತೆಗೆ ಹರಳುಗಳ ಕೆಲಸದಲ್ಲಿಯೂ ನಿಷ್ಣಾತನಾಗಿದ್ದ.  ಈ ಕಸುಬಿನಲ್ಲಿ ಹೇಗೆ ತರಬೇತಿ ಪಡೆದ ಎಂದು ತಿಳಿದಿಲ್ಲ.  ಕ್ರಿ. ಶ. 1439ರಲ್ಲಿ ಯಾವುದೋ ವ್ಯವಹಾರದಲ್ಲಿ ನಷ್ಟ ಹೊಂದಿ ಇದ್ದುದೆಲ್ಲವನ್ನೂ ಕಳೆದುಕೊಂಡ.  1440ರವರೆಗೆ ಸ್ಟ್ರಾಸ್‌ಬರ್ಗ್‌ನಲ್ಲಿದ್ದ.  ಇಲ್ಲಿಯೇ ಗುಪ್ತವಾಗಿ ತನ್ನ ಮುದ್ರಣ ಯಂತ್ರವನ್ನು ಆವಿಷ್ಕರಿಸಿದನೆಂದು ಹೇಳಲಾಗುತ್ತದೆ.

1448ರಲ್ಲಿ ಮೆಯಿನ್‌j ನಗರಕ್ಕೆ ಮರಳಿ ಬಂದು ಸಾಲ ತೆಗೆದುಕೊಂಡು ಮುದ್ರಣಾಲಯವನ್ನು ಸ್ಥಾಪಿಸಿದ.  ಪ್ರಸಿದ್ಧವಾದ 42 ಸಾಲುಗಳ ಬೈಬಲ್‌ಗ‌ಳು ಮೊತ್ತಮೊದಲಿಗೆ ಇಲ್ಲಿಯೇ ರೂಪ ತಾಳಿದವು (ಕ್ರಿ.ಶ. 1455ರಲ್ಲಿ).  1456ರಲ್ಲಿ ಇವನ ಪಾಲುದಾರ ಹಾಗೂ ಸಾಲಗಾರ ಸಾಲ ಹಿಂದಿರುಗಿಸಲಿಲ್ಲವೆಂದು ನ್ಯಾಯಾಲಯದ ಮೆಟ್ಟಲು ಹತ್ತಿದ. ನ್ಯಾಯವು ಪಾಲುದಾರ ಯೋಹಾನ್‌ ಫ‌ುಸ್ಟ್‌ನ ಕಡೆಗಾಯಿತು.  ಮುದ್ರಿತ ಬೈಬಲ್ಲುಗಳ ಅರ್ಧ ಹಾಗೂ ಮುದ್ರಣಾಲಯ ಫ‌ುಸ್ಟ್‌ನ ಪಾಲಾಯಿತು.

Advertisement

ಮತ್ತೆ ದಿವಾಳಿಯಾದ ಗುಟೆನ್‌ಬರ್ಗ್‌ ಚಿಕ್ಕದೊಂದು ಮುದ್ರಣ ಅಂಗಡಿಯನ್ನು ತೆರೆದು ಮುಂದಿನ ಜೀವನವನ್ನು ಸವೆಸಿದ. ಆ ಕಾಲದಲ್ಲಿ ಮುದ್ರಣಕಾರರ ಹೆಸರು ಮತ್ತು ಮುದ್ರಣ ದಿನಾಂಕವನ್ನು ನಮೂದಿಸುವ ಪರಿಪಾಠ ಇಲ್ಲದೆ ಇರುವ ಕಾರಣ ಏನೆಲ್ಲ ಮುದ್ರಿಸಿದನೆಂದು ತಿಳಿಯುವುದು ಇತಿಹಾಸಕಾರರಿಗೆ ಕಷ್ಟವಾಗಿದೆ.

ಆಚೆ ಬದಿಯಲ್ಲಿ ಯೋಹಾನ್‌ ಫ‌ುಸ್ಟ್‌ ಪ್ರಥಮ ಬಾರಿಗೆ ತನ್ನ ಮುದ್ರಣಾಲಯದ ಹೆಸರನ್ನು ಪ್ರಚುರಪಡಿಸಿ, ಯಂತ್ರದ ಆವಿಷ್ಕಾರಕ್ಕೆ ತಾನೇ ಕಾರಣನೆಂದು ಹೇಳಿಕೊಂಡ.  ಎಲ್ಲಿಯೂ ಗುಟೆನ್‌ಬರ್ಗ್‌ನ ಹೆಸರನ್ನು ಪ್ರಸ್ತಾಪಿಸಲಿಲ್ಲ.
ಕ್ರಿ. ಶ. 1462ರಲ್ಲಿ ಮತ್ತೆ ಮೆಯಿನ್‌j ನಗರವು ನಾಶವಾದಾಗ ಈತ ಅಲ್ಲಿಂದ ಹೊರಬರಬೇಕಾ ಯಿತು.  ಜನವರಿ 1465ರಲ್ಲಿ ಈತನ ಸಾಧನೆಗಳನ್ನು ಗುರುತಿಸಿ ಸ್ಥಳೀಯ ಚರ್ಚ್‌ “ಹೊಫ್ಮಾನ್‌’ ಬಿರುದನ್ನು ನೀಡಿ ಗೌರವಿಸಿತು.  ಬಿರುದಿನ ಜೊತೆಗೆ ಪಿಂಚಣಿ, ಬಟ್ಟೆಬರೆ, ಆಹಾರ ಮತ್ತು ವೈನ್‌ಗಳನ್ನು ಪ್ರತಿವರ್ಷವೂ ಕೊಡಲಾಯಿತು.  ಈ ಆದಾಯವು ತೆರಿಗೆರಹಿತವಾಗಿತ್ತು.  ಇದೇ ಸಮಯದಲ್ಲಿ ಇವನು ಮೆಯಿನ್‌jಗೆ ಮರಳಿದನೋ? ಗೊತ್ತಿಲ್ಲ.  1468 ಫೆ. 3 ರಂದು ಮೆಯಿನ್‌j ನಗರದಲ್ಲಿ ಗುಟೆನ್‌ಬರ್ಗ್‌ ಮೃತಪಟ್ಟ.  

ಈತನ ಆವಿಷ್ಕಾರಗಳು 
1ಸೀಸ, ಸತು ಮತ್ತು ಆಂಟಿಮೊನಿಗಳನ್ನು ಉಪಯೋಗಿಸಿ ತಯಾರಿಸಿದ ಮಿಶ್ರಲೋಹ.
2ಈ ಲೋಹದಿಂದ ತಯಾರಿಸಿದ ಅಕ್ಷರಗಳ ಪಡಿಯಚ್ಚುಗಳು.  ಇವುಗಳನ್ನು ಮರದ ತುಂಡಿನ ಆಧಾರದ ಮೇಲೆ ಹೊಂದಿಸಿ ಉಪಯೋಗಿಸುವ ತಂತ್ರ.  ಈ ಅಕ್ಷರ ಗಳನ್ನು ಬಿಡಿಸಿ ಬಹಳಷ್ಟು ಬಾರಿ ಮರು ಉಪಯೋಗ ಮಾಡಬಹುದು.
3ತೈಲಾಧಾರಿತ ಕಪ್ಪು ಮತ್ತು ಕೆಂಪು ಶಾಯಿಗಳು.
4ಒತ್ತುವಂತಹ ಮುದ್ರಣ ಯಂತ್ರ. (ವೈನ್‌ ತಯಾರಿಕೆ ಯಲ್ಲಿ ಬಳಸುತ್ತಿದ್ದ ಮರದ ಯಂತ್ರವನ್ನು ಹೋಲುವ)
ಇವನ ಆವಿಷ್ಕಾರದಿಂದ ಮುದ್ರಣ ಲೋಕದಲ್ಲಿ ಹೊಸ ಕ್ರಾಂತಿ ಉಂಟಾಯಿತು. ತುಂಬ ಕಡಿಮೆ ಅವಧಿಯಲ್ಲಿ ಬಹಳಷ್ಟು ಸಂಖ್ಯೆಯ ದಾಖಲೆಗಳನ್ನು ಮತ್ತು ಪುಸ್ತಕಗಳನ್ನು ಮುದ್ರಿಸಲಾಯಿತು. ಮುಂದಿನ ನಾಲ್ಕು ಶತಮಾನಗಳ ಕಾಲ ಈ ಪದ್ಧತಿಯ ಮುದ್ರಣ ಯೂರೋಪ್‌ ಹಾಗೂ ಭೂಗೋಳದ ಉಳಿದ ಭಾಗಗಳಲ್ಲಿ ವ್ಯಾಪಕವಾಗಿ ಉಪಯೋಗವಾಯಿತು.
ಈತನ ಆವಿಷ್ಕಾರವನ್ನು ತಮ್ಮದೇ ಎಂದು ಹೇಳಿಕೊಂಡವರು ಹಲವರು.       

ಕ್ರಿ. ಶ. 1900ರಲ್ಲಿ ಗುಟೆನ್‌ಬರ್ಗ್‌ನ ಗೌರವಾರ್ಥ ವಸ್ತು ಸಂಗ್ರಹಾಲಯದ ಸ್ಥಾಪನೆ ಆಯಿತು.  ಈತನ ಸಾಧನೆಯನ್ನು ಜನಸಾಮಾನ್ಯರಿಗೆ ತಿಳಿಸುವುದು ಸ್ಥಾಪಕ ನಾಗರಿಕರ ಉದ್ದೇಶವಾಗಿತ್ತು.  ಪ್ರಕಾಶಕರು, ಮುದ್ರಣ ಯಂತ್ರ ತಯಾರಕರು, ಮುದ್ರಣಕಾರರು ತಮ್ಮಲ್ಲಿರುವ ಪುರಾತನ ವಸ್ತುಗಳನ್ನು ಮನಸೋ ಇಚ್ಛೆಯಿಂದ ಈ ಸಂಗ್ರಹಾಲಯಕ್ಕೆ ದಾನ ನೀಡಿದರು.  ಆರಂಭದಲ್ಲಿ ಇದು ನಗರ ಗ್ರಂಥಾಲಯದ ಭಾಗವಾಗಿತ್ತು.  500 ವರ್ಷಗಳ ಮುದ್ರಣ ಕಲೆಯ ಚರಿತ್ರೆಯನ್ನು ತೋರಿಸುತ್ತಿತ್ತು.  ಕಾಲಕ್ರಮೇಣ ಬೇರೆ ಭಾಗಗಳೂ ಇದಕ್ಕೆ ಸೇರಿಕೊಂಡವು.

1925ರಲ್ಲಿ ಗುಟೆನ್‌ಬರ್ಗ್‌ನ ಪ್ರಸ್ಸಿನ ಮಾದರಿಯಲ್ಲಿ ಒಂದು ನಿರ್ದೇಶನ ಕೊಠಡಿಯು ಸಂಗ್ರಹಾಲಯದ ಭಾಗವಾಯಿತು. ಇಲ್ಲಿನ ಪ್ರಾತ್ಯಕ್ಷಿಕ ನಿದರ್ಶನ ಸಾರ್ವಜನಿಕರಲ್ಲಿ ಪ್ರಸಿದ್ಧವಾ ಯಿತು. 1927ರಲ್ಲಿ ಒಂದು ಸುಂದರವಾದ ಪುರಾತನ ಕಟ್ಟಡಕ್ಕೆ ಸ್ಥಳಾಂತರವಾ ಯಿತು. ಈಗ ಅದರಲ್ಲಿ ಆಡಳಿತ ಕಛೇರಿ, ಗ್ರಂಥಾಲಯ ಮತ್ತು ಗುಟೆನ್‌ಬರ್ಗ್‌ ಸೊಸೈಟಿ ಕಾರ್ಯ ನಿರ್ವಹಿಸುತ್ತವೆ. ಇದರ ಪಕ್ಕದಲ್ಲಿ ನೂತನ ಕಟ್ಟಡಕ್ಕೆ ಸಂಗ್ರಹಾಲಯ ಸ್ಥಳಾಂತರಗೊಂಡಿದೆ.

– ಉಮಾಮಹೇಶ್ವರಿ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next