Advertisement

ಗುರುವಾಯನಕೆರೆ: ಐದು ಕಡೆ ಅಗ್ನಿ ಅವಘಡ

01:35 AM May 06, 2019 | Team Udayavani |

ಬೆಳ್ತಂಗಡಿ: ತಾಲೂಕಿನಾದ್ಯಂತ ಐದು ಕಡೆಗಳಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಳ್ತಂಗಡಿ ಸಮೀಪದ ಮದ್ದಡ್ಕ ಸಬರಬೈಲು ಬಳಿಯ ರಿಯಾಝ್ ಎಂಬವರ ಗುಜರಿ ಅಂಗಡಿಯಲ್ಲಿ ರಾತ್ರಿ ವಿದ್ಯುತ್‌ ಶಾರ್ಟ್‌ಸರ್ಕ್ನೂಟ್‌ನಿಂದ ಗೋಡೌನ್‌ ಬೆಂಕಿಗಾಹುತಿಯಾಗಿ ಅಪಾರ ಹಾನಿ ಉಂಟಾಗಿದೆ.

Advertisement

ರಾತ್ರಿ ಸುಮಾರು 8.30ರ ಬಳಿಕ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ ಕಾರಣದಿಂದ ಬೆಂಕಿ ಕಾಣಿಸಿಕೊಂಡಿತ್ತು. ಅದು ಗೋಡೌನ್‌ ಪೂರ್ತಿ ಅವರಿಸಿ ಕೊಂಡಿತ್ತು. ಸ್ಥಳೀಯರು ಬೆಳ್ತಂಗಡಿ ಹಾಗೂ ಬಂಟ್ವಾಳದ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದರು. ಬೆಳ್ತಂಗಡಿಯಿಂದ ಎರಡು ಹಾಗೂ ಬಂಟ್ವಾಳದಿಂದ ಒಂದು ಅಗ್ನಿಶಾಮಕ ವಾಹನವು ಕಾರ್ಯಾಚರಿಸಿ ಬೆಂಕಿಯನ್ನು ನಂದಿಸಿತು.

ರಾತ್ರಿ ಸುಮಾರು 2.30ರ ವರೆಗೂ ಅಗ್ನಿಶಾಮಕ ಸಿಬಂದಿ ಕಾರ್ಯಾಚರಣೆ ನಡೆಸಿದರು. 20 ಸೆನ್ಸ್‌ ಜಾಗದಲ್ಲಿದ್ದ ಗುಜರಿ ಗೋಡೌನ್‌ನಲ್ಲಿ 15 ಟನ್‌ ಬ್ಯಾಟರಿ ಹಾಗೂ 5 ಟನ್‌ ಪೇಪರ್‌, ರಟ್ಟು, ಕಬ್ಬಿಣ, ಸ್ಟೀಲ್‌ ವಸ್ತುಗಳು ಬೆಂಕಿಗಾಹುತಿಯಾಗಿವೆ. ಒಟ್ಟು 15 ಲ.ರೂ. ಮೌಲ್ಯದ ಗುಜರಿ ಇದ್ದು, 5 ಲ.ರೂ. ಮೌಲ್ಯದ ಸೊತ್ತು ಸಂಪೂರ್ಣ ಸುಟ್ಟು ಕರಕಲಾಗಿದೆ.

ಇತರೆಡೆಗಳಲ್ಲಿ
ಹುಣ್ಸೆಕಟ್ಟೆಯಲ್ಲಿ ಸುನೀಲ್‌ ಎಂಬವರ ಕಾರಿಗೆ ಬೆಂಕಿ ಸ್ಪರ್ಶವಾಗಿ ಹಾನಿಯಾಗಿದೆ. ಉಜಿರೆ ನಿಡಿಗಲ್‌ ಸಮೀಪದ ಖಾಸಗಿ ಶಾಲೆಯೊಂದರ ಹಿಂಭಾಗ 5 ಎಕರೆಗೂ ಹೆಚ್ಚು ಗುಡ್ಡ ಪ್ರದೇಶ ಬೆಂಕಿಗೆ ಸುಟ್ಟು ಕರಕಲಾಗಿದೆ. ನಿಡ್ಲೆ ಗ್ರಾಮದ ಶೇಡಿಮನೆ ರವಿ ಎಂಬವರ ರಬ್ಬರ್‌ ತೋಟಕ್ಕೆ ಬೆಂಕಿ ಬಿದ್ದು 50 ಸಾ. ರೂ. ನಷ್ಟ ಸಂಭವಿಸಿದೆ. ನಡ ಗ್ರಾ.ಪಂ.ನ ಕಿಲ್ಲೂರು ಸಮೀಪ ಮಂಜೆಟ್ಟಿಯಲ್ಲಿ ರವಿವಾರ ಸಂಜೆ 4.30ಕ್ಕೆ ಟ್ರಾನ್ಸ್‌ಫಾರ್ಮರ್‌ನಿಂದ ಕಿಡಿ ಬಿದ್ದು ಎರಡು ಎಕರೆ ಗುಡ್ಡಕ್ಕೆ ಹಾನಿ ಸಂಭವಿಸಿದೆ. ಬೆಳ್ತಂಗಡಿ ಅಗ್ನಿಶಾಮಕ ಸಿಬಂದಿ ಬೆಂಕಿ ನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next