Advertisement

ಗುರುವಾಯನಕೆರೆ-ಉಪ್ಪಿನಂಗಡಿ ಮುಖ್ಯರಸ್ತೆ: ಹಲೇಜಿ ಬಳಿ ಅಪಾಯದ ಸ್ಥಿತಿ

09:01 PM Feb 12, 2021 | Team Udayavani |

ಬೆಳ್ತಂಗಡಿ: ಗ್ರಾಮೀಣ ಭಾಗದ ರಸ್ತೆಗಳು ಹೆದ್ದಾರಿಯಂತಾಗಿತ್ತಿದೆ. ಮತ್ತೂಂದೆಡೆ ಈಗಾಗಲೇ ಇರುವ ರಸ್ತೆಗಳ ಆಯುಷ್ಯ ಕ್ಷೀಣಿಸುತ್ತಿದೆ. ಇತ್ತ ಗುರುವಾ ಯನಕೆರೆ- ಉಪ್ಪಿನಂಗಡಿ ಮುಖ್ಯ ರಸ್ತೆಯ ಹಲೇಜಿ ಸಮೀಪ ರಸ್ತೆ ಅಂಚಿನಲ್ಲಿ ಕುಸಿತ ಉಂಟಾಗಿದ್ದು, ಅಪಾಯ ಎದುರಾಗಿದೆ.

Advertisement

ಗುರುವಾಯನಕೆರೆಯಿಂದ ಉಪ್ಪಿ ನಂಗಡಿ ರಸ್ತೆಯಾಗಿ 15 ಕಿ.ಮೀ. ಸಾಗಿದಾಗ ಹಲೇಜಿ ಸುಧೀರ್‌ ಕುಮಾರ್‌ ಎಂಬುವರ ಜಮೀನಿನ ಅಂಚಿನಲ್ಲಿ ರಸ್ತೆಯಿದ್ದು, ಕಲ್ಲಿನಿಂದ ಕಟ್ಟಿದ ತಡೆಗೋಡೆ ಸುಮಾರು 20 ಮೀಟರ್‌ ನಷ್ಟು ಕುಸಿದು ಬಿದ್ದಿದೆ. ಬಸ್‌ ಸಹಿತ ಘನ ವಾಹನಗಳು ರಸ್ತೆ ಅಂಚಿಗೆ ಬಂದಲ್ಲಿ ಕಂದಕಕ್ಕೆ ಉರುಳುವ ಸಾಧ್ಯತೆ ಇದೆ.

ಈ ಹಿಂದೆ ಲಾರಿ ಸಹಿತ ಅನೇಕ ವಾಹನಗಳು ಈ ಸ್ಥಳದಲ್ಲಿ ಅಪಘಾತ ಉಂಟಾಗಿದ್ದರಿಂದ 30 ವರ್ಷಗಳ ಹಿಂದೆ ಜಾಗದ ಮಾಲಕರೇ ಕಲ್ಲಿನಿಂದ ತಡೆಗೋಡೆ ರಚಿಸಿದ್ದರು. ಕಳೆದ ಕೆಲವು ವರ್ಷಗಳ ಹಿಂದೆ ಮುಖ್ಯ ರಸ್ತೆ ನಿರ್ಮಾಣದ ಬಳಿಕ ಇಲ್ಲಿ ಕಾಂಕ್ರೀಟ್‌ ತಡೆಗೋಡೆ ನಿರ್ಮಿಸದೆ ಇದ್ದುದರಿಂದ ಪ್ರಸಕ್ತ ಅಪಾಯ ಎದುರಾಗಿದೆ ಎಂದು ಸ್ಥಳೀಯರಾದ ಸುಧೀರ್‌ ಕುಮಾರ್‌ ತಿಳಿಸಿದ್ದಾರೆ.

ರಸ್ತೆ ಅಂಚು ಕುಸಿತಗೊಂಡಿರುವ ಕುರಿತು ಗಮನಕ್ಕೆ ಬಂದಿರಲಿಲ್ಲ. ತತ್‌ಕ್ಷಣವೇ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಶಿವಪ್ರಸಾದ್‌, ಎಇಇ, ಲೋಕೋಪಯೋಗಿ ಇಲಾಖೆ ಬೆಳ್ತಂಗಡಿ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next