Advertisement

ಹಾರಾಡಿ ಸರ್ವೋತ್ತಮ ಗಾಣಿಗರಿಗೆ ಗುರುವಂದನೆ

07:06 PM May 09, 2019 | mahesh |

ಹಾರಾಡಿ ಮನೆತನದ ಪರಂಪರೆಯ ಕೊನೆಯ ಕೊಂಡಿಯಂತಿರುವ ಹಾರಾಡಿ ಸರ್ವೋತ್ತಮ ಗಾಣಿಗರಿಗೆ ಅವರ ಶಿಷ್ಯ ಪರಂಪರೆಯಲ್ಲಿ ಒಬ್ಬರಾಗಿರುವ ಸದ್ಯ ಮಂದಾರ್ತಿ ಮೇಳದ ಎರಡನೇ ವೇಷದಾರಿ ಬೆದ್ರಾಡಿ ನರಸಿಂಹ ನಾಯ್ಕರ ನೇತೃತ್ವದಲ್ಲಿ ಗುರುವಂದನೆ ಕಾರ್ಯಕ್ರಮ ಬೆದ್ರಾಡಿಯಲ್ಲಿ ಮೇ 15ರಂದು ನೆರವೇರಲಿದೆ. ಹಾರಾಡಿ ಸರ್ವೋತ್ತಮ ಗಾಣಿಗರು ಹಾರಾಡಿ ಕುಟುಂಬದ ಕೊನೆಯ ಕಲಾವಿ ದರಾಗಿ ಇಂದು ರಂಗದಲ್ಲಿ ಗುರುತಿಸಲ್ಪಡು ತ್ತಾರೆ.ಎಲ್ಲಾ ಹಿರಿಯ ಹಾರಾಡಿ ಕಲಾವಿದರ ಹಾಗೆ ಮಂದಾರ್ತಿ ಮೇಳದ ಪ್ರಧಾನ ಕಲಾವಿದರಾಗಿ ಈಗ ಸೇವೆ ಸಲ್ಲಿಸುತಿದ್ದಾರೆ.

Advertisement

ಗಾಣಿಗರು ಬಾಲಗೋಪಾಲರಾಗಿ ಕಾಣಿಸಿಕೊಳುವ ಕಾಲವೇ ಯಕ್ಷಗಾನದ ಸುವರ್ಣ ಯುಗವಾಗಿತ್ತು. ಖ್ಯಾತಿವೆತ್ತ ವೇಷಧಾರಿಗಳಿದ್ದ ಬಡಗುತಿಟ್ಟು ಎರಡು ಪ್ರಬಲ ಶೈಲಿಗಳಿಂದ ಕಂಗೊಳಿಸುತಿತ್ತು.ಒಂದು ಹಾರಾಡಿ ತಿಟ್ಟು ಮತ್ತೂಂದು ಮಟಾ³ಡಿ ತಿಟ್ಟು. ಮಾವನ ಪ್ರೇರಣೆಯಿಂದ ರಂಗದೀಕ್ಷೆ ಪಡೆದು ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿ ಸೇರಿಕೊಂಡ ಇವರು ವೀರಭದ್ರ ನಾಯಕರು,ನೀಲಾವರ ರಾಮಕೃಷ್ಣಯ್ಯ,ಹಿರಿಯಡ್ಕ ಗೋಪಾಲ ರಾಯರಿಂದ ಶಾಸ್ತ್ರೋಕ್ತ ರಂಗ ಶಿಕ್ಷಣ ಪಡೆದು ಕೊಂಡರು. 14ನೇ ವಯಸ್ಸಿಗೆ ರಂಗ ಪ್ರವೇಶ ಮಾಡಿದ ಇವರು ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿದರು.ಅನಂತರ ಮಾರಣ ಕಟ್ಟೆ,ಅಮೃತೇಶ್ವರಿ,ಸಾಲಿಗ್ರಾಮ, ಸೌಕೂರು ಮುಂತಾದ ಮೇಳಗಳಲ್ಲಿ ಕಲಾ ವ್ಯವಸಾಯ ಮಾಡಿದ್ದಾರೆ.ಆಕರ್ಷಕವಾದ ವೇಷಾಲಂಕಾರ,ಪರಿಶುದ್ಧವಾದ ಭಾಷಾ ಪ್ರೌಢಿಮೆ.ರಂಗಾನುಭವ,ಪುರಾಣ ಪ್ರಜ್ಞೆ, ಖಚಿತ ಲಯಗಾರಿಕೆ,ಸಂಪ್ರದಾಯದ ಪರಿಪೂರ್ಣ ಹೆಜ್ಜೆಗಾರಿಕೆಯಿಂದ ಶ್ರೇಷ್ಠ ಮಟ್ಟದ ಕಲಾವಿದನೆಂದು ಗುರುತಿಸಲ್ಪಟ್ಟ ಇವರ ಅರ್ಜುನ , ಕೃಷ್ಣ ಮುಂತಾದ ಪುರುಷವೇಷವಲ್ಲದೆ ಭೀಮ, ಕೌರವ, ರಾವಣ, ಸುಧನ್ವ, ಬಲರಾಮ ಮುಂತಾದ ಪಾತ್ರಗಳು ಸಹ ಅಷ್ಟೇ ಪರಿಪೂರ್ಣ.ಹೊಸ ಪ್ರಸಂಗದಲ್ಲೂ ಸಹಜ ಅಭಿನಯ ನೀಡುವ ಇವರ ರತ್ನಶ್ರಿ ,ರೂಪಶ್ರಿ,ಬನಶಂಕರಿ ಪ್ರಸಂಗಗಳ ಪಾತ್ರಗಳು ಅಪಾರ ಜನಮನ್ನಣೆ ಪಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next