Advertisement
ಜು. 22 ರಂದು ಸಂಜೆ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಭಾಗವತ ಗಂಗಾಧರ ಸುವರ್ಣ ಮಾಂಟ್ರಾಡಿ ಅವರು ಆಯೋಜಿಸಿದ್ದ ಖ್ಯಾತ ಯಕ್ಷಗಾನ ಭಾಗವತ, ಪ್ರಸಂಗಕರ್ತ, ಯಕ್ಷಗುರು ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ ಅವರ ಗುರುವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ ಇತ್ಯಾದಿಗಳಲ್ಲಿ ಸಂಪೂರ್ಣವಾಗಿ ಪರಿಣಿತರು. ಸಂಪ್ರದಾಯ ಶೈಲಿಯ ಅವರನ್ನು ಗುರುವಾಗಿ ಪಡೆದ ಭಾಗವತ ಗಂಗಾಧರ ಸುವರ್ಣರು ಧನ್ಯರು. ಅವರ ಕಲಾಸೇವೆ ಸದಾ ಯಶಸ್ವಿಯಾಗಲಿ ಎಂದು ಹಾರೈಸಿದರು.
Related Articles
Advertisement
ಶ್ರೀ ಮಣಿಕಂಠ ಸೇವಾ ಸಮಿತಿ ವಸಾಯಿ ಗೌರವಾಧಯಕ್ಷ ಕರ್ನೂರು ಶಂಕರ ಆಳ್ವ ಅವರು ಮಾತನಾಡಿ, ಉತ್ತಮ ಸಂದೇಶದೊಂದಿಗೆ ಪೌರಾಣಿಕ ಕಥೆಗಳನ್ನು ಅರ್ಥೈಸಿಕೊಳ್ಳಬೇಕು. ಪ್ರತಿಯೊಂದು ಸಮಸ್ಯೆಗಳಿಗೂ ಯಕ್ಷಗಾನದಲ್ಲಿ ಪರಿಹಾರವಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅವರು ಮಾತನಾಡಿ, ಗುರುಶಿಷ್ಯರ ಪರಂಪರೆ ನಮ್ಮದು. ಶಿಷ್ಯಂದಿರು ಗುರುಗಳ ಬಗ್ಗೆ ಪೂಜ್ಯ ಭಾವದಿಂದರಬೇಕು. ಗುರುಗಳು ನೀಡಿದ ವಿದ್ಯೆಯನ್ನು ಸಂಪೂರ್ಣವಾಗಿ ಕರಗತ ಮಾಡಿಕೊಂಡು ಜನಮನ್ನಣೆಗಳಿಸಿದಾಗ ಗುರುವಿನ ಶ್ರಮ ಸಾರ್ಥಕವಾಗುತ್ತದೆ. ಗುರುವಂದನೆ ಅರ್ಥಪೂರ್ಣವಾಗುತ್ತದೆ ಎಂದರು.
ಹಿರಿಯ ಯಕ್ಷಗಾನ ಕಲಾವಿದ ಪ್ರಕಾಶ್ ಪಣಿಯೂರು ಅಭಿನಂದನ ಭಾಷಣಗೈದರು. ಲೇಖಕ ಅರುಣ್ ಕುಮಾರ್ ಎರ್ಮಾಳ್ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಉಮೇಶ್ ಕಾಂತಾವರ ವಂದಿಸಿದರು. ವೇದಿಕೆಯಲ್ಲಿ ಉದ್ಯಮಿಗಳಾದ ನಾರಾಯಣ ಪೂಜಾರಿ ಭಿವಂಡಿ, ದಾಮೋದರ ಕುಂದರ್ ಹಾಗೂ ಅತಿಥಿ-ಗಣ್ಯರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಮಿತಾ ಜತ್ತಿನ್ ಅವರ ನಿರ್ದೇಶನದಲ್ಲಿ ಭರತನಾಟ್ಯ ಹಾಗೂ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಸಾಂತಾಕ್ರೂಜ್ ಕಲಾವಿದರಿಂದ ಶ್ರೀ ಶನಿದರ್ಶನ-ನಳಚರಿತ್ರೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಯಕ್ಷಗಾನ ಕಲಾಭಿಮಾನಿಗಳು, ವಿವಿಧ ಯಕ್ಷಗಾನ ಮಂಡಳಿಗಳ ಕಲಾವಿದರು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಗರ್ವ, ದರ್ಪಗಳಿಂದ ದೂರವಿದ್ದು, ಸಹನೆಯಿಂದ ಸಾಧನೆಯನ್ನು ಮಾಡಬೇಕು. ಸಮಾಧಾನಕ್ಕೆ ದೇವರ ಆಶೀರ್ವಾದ ಸದಾಇದೆ ಎನ್ನುವುದಕ್ಕೆ ಪೂಂಜಾ ಅವರು ಸಾಕ್ಷಿ
– ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ (ಅಧ್ಯಕ್ಷರು : ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರ). ಹಲವಾರು ಕೆಲಸ, ಒತ್ತಡಗಳ ಮಧ್ಯೆಯೂ ಗುರುವಂದನೆಯಂತಹ ಮಹತ್ತರ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಶ್ಲಾಘನೀಯ. ಗುರುವನ್ನು ಉನ್ನತ ಸ್ಥಾನದಲ್ಲಿರಿಸಿ ಮಾಡುವ ಕಾರ್ಯಕ್ರಮ ಫಲಪ್ರದವಾಗುತ್ತದೆ
– ಪ್ರವೀಣ್ ಶೆಟ್ಟಿ ಪುತ್ತೂರು (ಅಧ್ಯಕ್ಷರು: ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ). ಸುಮಾರು 25 ಪ್ರಸಂಗಗಳ ಕೃತಿಕಾರರು, ಸಂಸ್ಕೃತ, ಛಂದಸ್ಸು, ಪ್ರಾಸಗಳ ಮೂಲಕ ಭಾಗವತಿಕೆ ಮಾಡುವ ಬೊಟ್ಟಿಕೆರೆ ಪುರುಷೋತ್ತಮ ಪೂಂಜಾರು ಯಕ್ಷಗಾನದ ಅನಘÂì ರತ್ನ
– ಶ್ರೀನಿವಾಸ ಪಿ. ಎಸ್. (ಅಧ್ಯಕ್ಷರು: ಶ್ರೀ ಶನೀಶ್ವರ ಮಂದಿರ ಕುರಾರ್ ವಿಲೇಜ್ ಮಲಾಡ್). ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಗೆ ಹಾಗೂ ಮುಂಬಯಿ ಮಹಾನಗರ ಉತ್ತಮ ಕಲಾವಿದರನ್ನು ನೀಡಿದ ಶ್ರೇಯಸ್ಸು ಬೊಟ್ಟಿಕೆರೆ ಪುರುಷೋತ್ತಮ ಪೂಂಜಾರಿಗೆ ಸಮ್ಮುತ್ತದೆ. ಅವರ ಆದರ್ಶಮಯ ಬದುಕು ಕಲಾವಿದರಿಗೆ ಆದರ್ಶವಾಗಲಿ
– ಎಲ್. ವಿ. ಅಮೀನ್ (ಮಾಜಿ ಅಧ್ಯಕ್ಷರು: ಬಿಲ್ಲವರ ಅಸೋಸಿಯೇಶನ್ ಮುಂಬಯಿ). ಮನೋರಂಜನೆಯ ಒಟ್ಟಿಗೆ ಧಾರ್ಮಿಕತೆಯ ಬೋಧನೆ ಯಕ್ಷಗಾನದಲ್ಲಿದೆ. ನಮ್ಮ ಪೂರ್ವಜರು ಯಕ್ಷಗಾನ ಬಯಲಾಟದ ಮೂಲಕ ರಾಮಾಯಣ, ಮಹಾಭಾರತದ ಕತೆಗಳನ್ನು ಅರಿತಿದ್ದರು. ಯಕ್ಷಗಾನ ವಿಜೃಂಭಣೆಯ ಕಲೆಯಾಗಿದೆ
– ದಯಾನಂದ ಪೂಜಾರಿ (ಕಾರ್ಯಾಧ್ಯಕ್ಷರು: ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ). ಚಿತ್ರ-ವರದಿ: ರಮೇಶ್ ಅಮೀನ್