Advertisement
ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಆಡಿಟೋರಿಯಂನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ವತಿಯಿಂದ ಮಂಗಳವಾರ ನಡೆದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ -2019ರಲ್ಲಿ ಭಾಗವಹಿಸಿ ಆಶಿರ್ವಚನ ನೀಡಿದರು.
Related Articles
Advertisement
ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಜಯಪುರದಲ್ಲಿ ನಡೆದ ನೃತ್ಯರೂಪಕದಲ್ಲಿ ಬಹುಮಾನ ವಿಜೇತ ನಾಟಕ ತಂಡದ ನಿರ್ದೇಶಕ ಅರವಿಂದ ಚೊಕ್ಕಾಡಿ ಹಾಗೂ ನೃತ್ಯರೂಪಕ ಪ್ರದರ್ಶಿಸಿದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.
ಹುಸೇನ್ ಕಾಟಿಪಳ್ಳ ಅವರು ನಾರಾಯಣಗುರು ಕುರಿತಾದ ಹಾಡನ್ನು ಬ್ಯಾರಿ ಭಾಷೆಯಲ್ಲಿ ಹಾಡಿದರು. ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ ಸ್ವಾಗತಿಸಿದರು.ಕನ್ನಡ ವಿಭಾಗ ಸಂಶೋಧನಾ ವಿದ್ಯಾರ್ಥಿ ಶಿವರಾಜು ಎಸ್. ನಿರೂಪಿಸಿ, ಡಾ| ರವಿರಾಜ್ ಬಿ.ವಿ. ವಂದಿಸಿದರು.
ನಾರಾಯಣಗುರುಗಳ ಸಂದೇಶ ಎಲ್ಲ ಕಾಲಕ್ಕೂ ಪ್ರಸ್ತುತಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಕಾಲಘಟ್ಟದಲ್ಲಿ ಬ್ರಿಟಿಷರ ಆಡಳಿತವಿತ್ತು. ಬಡತನ ಸಹಿಸಲಾರದಷ್ಟಿತ್ತು.
ಅಂತಹ ಕಾಲಘಟ್ಟದಲ್ಲಿಯೂ ಶಿಕ್ಷಣದ ಮೂಲಕವೇ ಅಭಿವೃದ್ಧಿ ಸಾಧ್ಯ ಎಂದು ನಾರಾಯಣ ಗುರುಗಳು ಪ್ರತಿಪಾದಿಸಿದ್ದು ಒಬ್ಬ ದಾರ್ಶನಿಕನಾಗಿ ಅವರು ಕೊಟ್ಟ ಸಂದೇಶ ಎಲ್ಲ ಕಾಲಕ್ಕೂ ಪ್ರಸ್ತುತ, ಕಾಲಾತೀತವಾಗಿದೆ ಎಂದು ಹೇಳಿದರು.