Advertisement
ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ 22ನೇ ಕಾಮನ್‌ವೆಲ್ತ್ ಗೇಮ್ಸ್‌ನ 61 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ 269 ಕೆಜಿ ಭಾರವೆತ್ತಿದ ಗುರುರಾಜ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಇದು ಅವರ ಎರಡನೇ ಕಾಮನ್‌ವೆಲ್ತ್ ಗೇಮ್ಸ್ ಪದಕವಾಗಿದೆ. ಕಳೆದ ಬಾರಿ ಗೋಲ್ಟ್ಕೋಸ್ಟ್‌ನಲ್ಲಿ ನಡೆದ ಪಂದ್ಯಾವಳಿಯಲ್ಲಿ 56 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ತಮ್ಮೂರಿನ ಪ್ರತಿಭೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಎರಡೆರಡು ಬಾರಿ ಪದಕ ಗೆದ್ದ ಸಾಧನೆಯನ್ನು ಇಲ್ಲಿನ ಜನರೆಲ್ಲ ಸಂಭ್ರಮಿಸಿದ್ದಾರೆ. ಈಗ ಪದಕದೊಂದಿಗೆ ಆಗಮಿಸುತ್ತಿರುವ ಅವರನ್ನು ಸ್ವಾಗತಿಸಲು ಇಡೀ ಊರು ಸಜ್ಜಾಗಿದೆ. ಜೂ. 7ರಂದು ಬೆಂಗಳೂರಿಗೆ, ಅಲ್ಲಿಂದ ವಿಮಾನದಲ್ಲಿ ಮಂಗಳೂರಿಗೆ ಬರಲಿದ್ದಾರೆ. ಬಳಿಕ ಉಡುಪಿ ಜಿಲ್ಲಾಡಳಿತದಿಂದ ಅಭಿನಂದನೆ ಸ್ವೀಕರಿಸಿ ಅಪರಾಹ್ನ 2.30ರ ಸುಮಾರಿಗೆ ಕುಂದಾಪುರಕ್ಕೆ ಆಗಮಿಸಲಿದ್ದಾರೆ. ನ್ಯೂ ಹಕ್ಯುಲಸ್ ಜಿಮ್‌ನಲ್ಲಿ ಸಮ್ಮಾನ ನಡೆಯಲಿದ್ದು, ಎಸಿ ಕೆ. ರಾಜು, ಡಿವೈಎಸ್‌ಪಿ ಶ್ರೀಕಾಂತ್, ಯುವಜನಾ ಸೇವಾ ಮತ್ತು ಕ್ರೀಡಾ ಇಲಾಖೆಯ ಕುಸುಮಾಕರ ಶೆಟ್ಟಿ, ಕಲಾಕ್ಷೇತ್ರ ಕುಂದಾಪುರದ ಕಿಶೋರ್ ಕುಮಾರ್, ರಾಜೇಶ್ ಕಾವೇರಿ, ಜಿಮ್‌ನ ಸತೀಶ್ ಖಾರ್ವಿ ಮತ್ತಿತರರು ಭಾಗವಹಿಸಲಿದ್ದಾರೆ. ಬಳಿಕ ನಗರದಲ್ಲಿ ಮೆರವಣಿಗೆ ನಡೆಯಲಿದೆ.
Related Articles
ಅಲ್ಲಿಂದ ಕೊಲ್ಲೂರು, ಮಾರಣಕಟ್ಟೆ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಹುಟ್ಟೂರಾದ ವಂಡ್ಸೆ ಸಮೀಪದ ಚಿತ್ತೂರಿನಲ್ಲಿ ಹುಟ್ಟೂರ ಸಮ್ಮಾನ ನಡೆಯಲಿದೆ.
Advertisement