Advertisement

ಗುರುರಾಜ ಅವರಿಗೆ  “ಸೌರಭ ರತ್ನ’ರಾಜ್ಯ ಪ್ರಶಸ್ತಿ

04:10 PM Nov 10, 2018 | Team Udayavani |

ಮುಂಬಯಿ: ಮಾಟುಂಗ ಪೂರ್ವದ ಮುಂಬಯಿ ಕನ್ನಡ ಸಂಘ ಇದರ ಅಧ್ಯಕ್ಷ ಗುರುರಾಜ ಎಸ್‌. ನಾಯಕ್‌ ಅವರು ಮಂಗಳೂರಿನ ಕಥಾ ಬಿಂದು ಸಾಂಸ್ಕೃತಿಕ ವೇದಿಕೆಯ ವಾರ್ಷಿಕ “ಸೌರಭ ರತ್ನ’ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Advertisement

ಮುಂಬಯಿ ಕನ್ನಡ ಸಂಘದಲ್ಲಿ ಕಳೆದ 43 ವರ್ಷಗಳಿಂದ ವಿವಿಧ ಪದಾಧಿಕಾರಿಯಾಗಿ, ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಗರದಲ್ಲಿ ನಾಡು-ನುಡಿಯ ಸೇವೆಗಾಗಿ ಅವರು ಮಾಡುತ್ತಿರುವ ಗಣನೀಯ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡೊಂಬಿವಲಿಯ  ಅಲ್ಲಿನ ಶಿವರಂಜನಿ ಸಂಗೀತ ಸಭಾದ ಅಧ್ಯಕ್ಷರಾಗಿ, ಡೊಂಬಿವಲಿಯ ಮಲ್ಲಾರಿ ಕೃಪಾ ಕೊ. ಆಪರೇಟಿವ್‌ ಹೌಸಿಂಗ್‌ ಸೊಸೈಟಿ ಅಸೋ ಶಿಯೇಶನ್‌ನ ಇದರ ಗೌರವ ಕೋಶಾಧಿಕಾರಿ ಆಗಿ, ಮೈಸೂರು ಸಂಗೀತ ವಿದ್ಯಾಲಯ ಡೊಂಬಿವಲಿ ಇದರ ಸಲಹಾ ಸಮಿತಿಯ ಸದಸ್ಯರಾಗಿ, ಶ್ರೀ ಸುಕ್ರಕೇಂದ್ರ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ ಪ್ರಭಾದೇವಿ  ಇದರ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹಲವಾರು ಪ್ರಶಸ್ತಿ ಹಾಗೂ ಕನ್ನಡ ಸಂಘ ಸಂಸ್ಥೆಗಳಿಂದ, ಜಿಎಸ್‌.ಬಿ ಸಮಾಜದ ಸಂಸ್ಥೆಗಳಿಂದ ಸಮ್ಮಾನಗಳು ಇವರಿಗೆ ಲಭಿಸಿದೆ. “ಸೌರಭ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭವು ನ. 15 ರಂದು  ಮಂಗ ಳೂರು  ಮಂಗಳಾ ದೇವಿ ದೇವಸ್ಥಾನದ ಕಲಾ ಮಂದಿರದಲ್ಲಿ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next