Advertisement

ಭಗವಂತನ ಸಾಮೀಪ್ಯದಿಂದ ಜೀವನ ಪಾವನ: ಹೆಗ್ಗಡೆ

11:22 AM Apr 29, 2019 | Naveen |

ಮಹಾನಗರ: ಭಗವಂತನ ಸಾಮೀಪ್ಯದಿಂದ ಭವದ ದುರಿತ ದುಮ್ಮನಗಳು ದೂರವಾಗಿ ಜೀವನ ಪಾವನಗೊಳ್ಳುತ್ತದೆ. ಶ್ರೀನಿವಾಸ ಕಲ್ಯಾಣೋತ್ಸವದಂತಹ ಕಾರ್ಯಕ್ರಮಗಳು ಭಕ್ತರಿಗೆ ಭಗವಂತನ ಸಾಮೀಪ್ಯ ಒದಗಿÓ‌ುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ| ಡಿ. ವಿರೇಂದ್ರ ಹೆಗ್ಗಡೆ ಅವರು ಹೇಳಿದರು.

Advertisement

ಗುರುಪುರ ಶ್ರೀ ಸತ್ಯದೇವತಾ ಧರ್ಮ ದೇವತಾ ಮಹೋತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಸತ್ಯದೇವತಾ ಧರ್ಮದೇವತಾ ಮಂದಿರದ ಪುನಃ ಪ್ರತಿಷ್ಠಾ ರಜತ ಮಹೋತ್ಸವದ ನಾಲ್ಕನೇ ದಿನವಾದ ಶನಿವಾರ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಎಸ್‌ಬಿ ಸಮುದಾಯದ ಸಂಸ್ಕೃತಿ ಆಚಾರ ವಿಚಾರಗಳನ್ನು ಜತೆ ಸೇರಿಸಿ ಅತ್ಯುತ್ತಮ ಕಾರ್ಯಕ್ರಮವನ್ನು ಸಂಘಟಿಸುವಲ್ಲಿ ಎಲ್ಲರೂ ಯಶಸ್ವಿಯಾಗಿದ್ದಾರೆ. ಶ್ರೀನಿವಾಸ ಕಲ್ಯಾಣೋತ್ಸವ ಶ್ರದ್ಧಾ ಭಕ್ತಿ ಮತ್ತು ವಿಜೃಂಭಣೆಯಿಂದ ಜರಗಿ ಭಕ್ತ ಜನರನ್ನು ಪುನೀತಗೊಳಿಸಿದೆ. ಶ್ರೀ ಸತ್ಯದೇವತೆ ಗುರುಪುರ ಕ್ಷೇತ್ರದಲ್ಲಿ ಶ್ರೀ ಸತ್ಯದೇವತೆಯು ಧರ್ಮದೇವತೆಯು ನೆಲೆಸಿ ಭಕ್ತ ಜನರನ್ನು ಅನುಗ್ರಹಿಸುತ್ತಿದ್ದಾರೆ ಎಂದರು.

ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಗುರುಪುರ ಜಂಗಮ ಮಠದ ಶ್ರೀರುದ್ರಮುನಿ ಮಹಾಸ್ವಾಮಿ, ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕರಾದ ಲಕ್ಷ್ಮೀ ನಾರಾಯಣ ಆಸ್ರಣ್ಣ, ಹರಿ ಆಸ್ರಣ್ಣ ಅವರು ವಿಶೇಷ ಆಮಂತ್ರಿತರಾಗಿ ಉಪಸ್ಥಿತರಿದ್ದರು.

ಶ್ರೀಕಾಂತ್‌ ಭಟ್ ನಿರೂಪಿಸಿದರು. ಪುತ್ತೂರು ನರಸಿಂಹ ನಾಯಕ್‌ ಮತ್ತು ಬಳಗದವರಿಂದ ಸಂಗೀತ ಮತ್ತು ನಿರ್ವಹಣೆ ನಡೆಯಿತು.

Advertisement

ಶ್ರೀನಿವಾಸ ಕಲ್ಯಾಣಕ್ಕೂ ಮುನ್ನ ಶ್ರೀ ಸತ್ಯದೇವತಾ ಸಭಾಗ್ರಹದಿಂದ ಶ್ರೀ ವರ ವೆಂಕಟೇಶ ಸ್ವಾಮಿಯನ್ನು ವೇದಘೋಷ ಭಜನೆ, ವಾದ್ಯಘೋಷ, ಸಕಲ- ಬಿರುದಾವಳಿಗಳಿಂದ ಮಂಟಪಕ್ಕೆ ಕರೆತರಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next