Advertisement
ತ್ಯಾಜ್ಯ ನೀರು ಹೆದ್ದಾರಿಯ ಪಕ್ಕದಲ್ಲಿಯೇ ಶೇಖರಣೆ ಚರಂಡಿಯಲ್ಲಿ ತುಂಬಿ ತುಳುಕುವ ತ್ಯಾಜ್ಯ ನೀರು ರಾಷ್ಟ್ರೀಯ ಹೆದ್ದಾರಿಯ ಒಂದು ಬದಿ ಯಿಂದ ಹರಿದು ಹೆದ್ದಾರಿ ಇನ್ನೊಂದು ಬದಿ ಯಲ್ಲಿ ಶೇಖರಣೆಯಾಗಿದೆ. ಇದು ಸೊಳ್ಳೆ ಉತ್ಪತ್ತಿಗೆ ಕಾರಣವಾಗಲಿದೆ. ಮಧ್ಯಾಹ್ನ 11ರ ವೇಳೆ ಮತ್ತು ಸಂಜೆ ವೇಳೆಗೆ ತ್ಯಾಜ್ಯ ನೀರಿನ ಪ್ರಮಾಣ ಜಾಸ್ತಿಯಾಗಿರುತ್ತದೆ. ಪ್ರಮಾಣ ಜಾಸ್ತಿಯಾದಂತೆ ವಾಹನ ಸಂಚರಿಸುವಾಗ ತ್ಯಾಜ್ಯ ನೀರು ದೂರದವರೆಗೆ ಎರಚಲ್ಪಡುತ್ತದೆ.
ಚರಂಡಿಯಲ್ಲಿ ಹೊಟೇಲ್ ಹಾಗೂ ವಸತಿ ಸಮುಚ್ಚಯ, ಅಂಗಡಿಗಳ ತ್ಯಾಜ್ಯ ನೀರು ಹರಿಯುತ್ತಿದೆ. ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂಗು ಗುಂಡಿ ತೆಗೆದು ಅದರಲ್ಲಿ ಬಿಡಬೇಕು. ತಾತ್ಕಾಲಿಕವಾಗಿ ವ್ಯವಸ್ಥೆಯನ್ನು ಹೆದ್ದಾರಿ ಇಲಾಖೆ ಮಾಡಬೇಕು. ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ಗಮನಿಸಿ ಶೀಘ್ರ ಕಾರ್ಯವೆಸಗಬೇಕು ಎಂದು ಸಾರ್ವಜನಿಕರು ಅಗ್ರಹಿಸಿದ್ದಾರೆ. ಈ ಬಗ್ಗೆ ಹೆದ್ದಾರಿ ಇಲಾಖೆಯ ಎಂಜಿನಿಯರ್‌ಗೆ ತಿಳಿಸಲಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.