Advertisement

ಗುರುಪುರ ಸೇತುವೆ ಫೆಬ್ರವರಿಯಲ್ಲಿ ಲೋಕಾರ್ಪಣೆ

11:10 AM Jun 23, 2019 | Team Udayavani |

ಗುರುಪುರ: ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರ ಫಲ್ಗುಣಿ ನದಿಗೆ ಗುರುಪುರದಲ್ಲಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಜಿಲ್ಲೆಯಲ್ಲೇ ಅತಿ ಶೀಘ್ರ ಮುಕ್ತಾಯಗೊಳ್ಳಲಿರುವ ಕಾಮಗಾರಿ ಇದೆಂಬ ಹೆಗ್ಗಳಿಕೆ ಪಾತ್ರವಾಗಲಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದರು.

Advertisement

ಅವರು ಶನಿವಾರ ಗುರುಪುರದಲ್ಲಿ ಸೇತುವೆ ಕಾಮಗಾರಿಯ ಪ್ರಗತಿ ವೀಕ್ಷಿಸಿ, ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಸೇತುವೆ ಕಾಮಗಾರಿ 2019ರ ಫೆಬ್ರವರಿ 21ಕ್ಕೆ ಆರಂಭಗೊಂಡಿದ್ದು, 2021ರ ಫೆಬ್ರವರಿ 20ರಂದು ಪೂರ್ಣಗೊಳಿಸುವ ಕರಾರಿನ ಮೇರೆಗೆ ಕಾವೂರಿನ ಮೊಗರೋಡಿ ಕನ್‌ಸ್ಟ್ರಕ್ಷನ್‌ ಕಂಪೆನಿಗೆ ಗುತ್ತಿಗೆ ನೀಡಲಾಗಿತ್ತು. ಟೆಂಡರು ಪಡೆದ ತತ್‌ಕ್ಷಣ ಕಾಮಗಾರಿ ಆರಂಭಿಸಿರುವ ಕಂಪೆನಿ, ಬೇಸಗೆಯಲ್ಲಿ ಕ್ಷಿಪ್ರಗತಿಯಲ್ಲಿ ಪಿಲ್ಲರ್‌ ಹಾಕುವ ಕೆಲಸ ಮುಗಿಸಿದೆ. ಮಳೆಗಾಲದಲ್ಲಿ ಗರ್ಡರ್‌ ಮತ್ತು ಸ್ಲಾಬ್‌ ಅಳವಡಿಕೆ ನಡೆಯಲಿದೆ. ನಿಗದಿತ ಅವಧಿಯ ಒಳಗಡೆ ಲೋಕಾರ್ಪಣೆಗೊಳ್ಳಲಿದೆ ಎಂದರು.

39.420 ಕೋಟಿ ರೂ. ಅಂದಾಜು ವೆಚ್ಚದ ಹೊಸ ಸೇತುವೆ ಯೋಜನೆಯಲ್ಲಿ 25 ಮೀಟರ್‌ ಉದ್ದದ ಏಳು ಅಂಕಣಗಳಿವೆ. ಅಗಲ 16 ಮೀ. ಅಗಲದ ಸೇತುವೆಯು 11 ಮೀ. ಅಗಲ ರಸ್ತೆ, 2.50 ಮೀ. ಅಗಲದ ಕಾಲುದಾರಿ (ಎರಡೂ ಕಡೆ) ಇತ್ಯಾದಿ ಹೊಂದಿರುತ್ತದೆ. ಎರಡೂ ಕಡೆ 500 ಮೀ. ಉದ್ದಕೆ ಕೂಡುರಸ್ತೆ ನಿರ್ಮಾಣಗೊಳ್ಳಲಿದೆ ಎಂದರು.

ಮಂಗಳೂರು ಬೈಪಾಸ್‌ ರಸ್ತೆಗೆ ಸರಕಾರ ಒಪ್ಪಿಗೆ ನೀಡಿದೆ. ಈ ರಸ್ತೆ ಮೂಲ್ಕಿ – ಕಿನ್ನಿಗೋಳಿ-ಕಟೀಲು- ಬಜಪೆ – ಗುರುಪುರ ಕೈಕಂಬ – ಪೊಳಲಿ – ಬಿ.ಸಿ.ರೋಡ್‌- ಮೆಲ್ಕಾರು – ಮುಡಿಪು-ಕೊಣಾಜೆ ಮೂಲಕ ತಲಪಾಡಿ ಸಂಪರ್ಕಿಸಲಿದೆ. “ಭಾರತ್‌ ಮಾಲ’ ಯೋಜನೆಯಡಿ ಬೆ„ಪಾಸ್‌ ನಿರ್ಮಾಣಗೊಳ್ಳಲಿದೆ. ಪ್ರಸ್ತುತ ಗುರುಪುರ ಸೇತುವೆ ಗುರುಪುರಕ್ಕೆ ಬೈಪಾಸ್‌ ರಸ್ತೆಯಾಗಲಿದ್ದು, ಮಂಗಳೂರು ಕುಲಶೇಖರ ರಾಷ್ಟ್ರೀಯ ಹೆದ್ದಾರಿ ಅಡೂxರು ಮುಖಾಂತರ ಸಂಪರ್ಕ ಕಲ್ಪಿಸಲಿದೆ. ಅಡೂxರಿನಲ್ಲಿ ಫ್ಲೈ ಓವರ್‌ ನಿರ್ಮಾಣಗೊಳ್ಳಲಿದ್ದು, ಪ್ರಮುಖ ಜಂಕ್ಷನ್‌ ಆಗಲಿದೆ ಎಂದರು.

ಮಂಗಳೂರು ಉತ್ತರ ಶಾಸಕ ಡಾ| ಭರತ್‌ ಶೆಟ್ಟಿ ಮಾತನಾಡಿ, ಮೂಲರಪಟ್ಣ ರಸ್ತೆ ಪಿಡಬ್ಲ್ಯುಡಿಗೆ ಸೇರಿದ್ದು, ಇಲ್ಲಿ ಸೇತುವೆ ನಿರ್ಮಾಣ ಕ್ಕಾಗಿ ರಾಜ್ಯ ಸರಕಾರದ ಮೇಲೆ ನಾನು ಹಾಗೂ ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ ಉಳಿಪಾಡಿಗುತ್ತು ನಿರಂತರ ಒತ್ತಡ ಹೇರುತ್ತಿದ್ದೇವೆ. ಮಳೆಗಾಲದ ಒಳಗಡೆ ಟೆಂಡರ್‌ ಪ್ರಸ್ತಾವನೆ ಪೂರ್ಣ ಗೊಂಡು ಹೊಸ ಸೇತುವೆ ಮುಂದಿನ ವರ್ಷ ಆರಂಭಗೊಳ್ಳಲಿದೆ ಎಂದರು.

Advertisement

ರಾ.ಹೆ. ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎಚ್‌.ಪಿ. ರಮೇಶ್‌, ಸಹಾಯಕ ಎಂಜಿನಿಯರ್‌ ಕೀರ್ತಿ ಅಮೀನ್‌, ವಿಹಿಂಪ ಮುಖಂಡ ಜಗದೀಶ ಶೇಣವ, ಮೊಗರೋಡಿ ಕನ್‌ಸ್ಟ್ರಕ್ಷನ್‌ ಕಂಪೆನಿಯ ಮುಖ್ಯ ಎಂಜಿನಿಯರ್‌ ಸುಬ್ರಹ್ಮಣ್ಯ, ಸ್ಥಳೀಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

3 ಹಂತಗಳಲ್ಲಿ ರಸ್ತೆ ನಿರ್ಮಾಣ
ಕೇಂದ್ರ ಸರಕಾರವು ಫೇಸ್‌ ಒಂದು, ಫೇಸ್‌ ಎರಡು ಹಾಗೂ ಫೇಸ್‌ ಮೂರು ಹೀಗೆ ಮೂರು ಹಂತಗಳಲ್ಲಿ ರಸ್ತೆಗಳ ಅಭಿವೃದ್ಧಿ ನಡೆಸುತ್ತಿದ್ದು, ಜಿಲ್ಲೆಯ ಹಲವು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ.
ನಳಿನ್‌ ಕುಮಾರ್‌ ಕಟೀಲು

Advertisement

Udayavani is now on Telegram. Click here to join our channel and stay updated with the latest news.

Next