ಗುರುಪುರ: ಕಳೆದ ವರ್ಷ ಸಂಭವಿಸಿದ ಭಾರೀ ಮಳೆಯಿಂದ ನೆರಹಾವಳಿ ಉಂಟಾಗಿ ಗುರುಪುರದಿಂದ ಕೈಕಂಬದವರೆಗಿನ ರಾಷ್ಟ್ರೀಯ ಹೆದ್ದಾರಿ 169 ರಸ್ತೆಯಲ್ಲಿ ಸೃಷ್ಟಿಯಾಗಿದ್ದ ಕೃತಕ ನೆರೆಹಾವಳಿಯ ಹೂಳೆತ್ತುವ ಕೆಲಸ ಆರಂಭವಾಗಿದೆ. ಕೆಲವು ಆಯ್ದ ಪ್ರದೇಶಗಳಲ್ಲಿ ಇನ್ನೂ ಹೂಳೆತ್ತದಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಡ್ಡೂರಿಗೆ ಹೋಗುವ ತಿರುವು ರಸ್ತೆ ಸಮೀಪ ಇನ್ನೂ ಚರಂಡಿ ನಿರ್ಮಿ ಸದಿರುವುದರಿಂದ ಈ ಬಾರಿಯೂ ಗುಡ್ಡದ ನೀರು ರಸ್ತೆಯ ಮೇಲೆಯೇ ಹರಿದುಹೋಗುವ ಸಂಭವವಿದೆ. ಕೆಲವು ಭಾಗಗಳಲ್ಲಿ ಮಾತ್ರ ಹೂಳೆತ್ತಿದ್ದು, ಕಾಟಾ ಚಾರಕ್ಕೆ ಮುಗಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
Advertisement
ಹಲವಾರು ವರ್ಷಗಳಿಂದ ಹೂಳೆತ್ತದ ಗುರುಪುರ-ಕೈಕಂಬದ ಮಾರುಕಟ್ಟೆ ರಸ್ತೆ ಯಲ್ಲಿ ಈ ಬಾರಿ ಹೂಳೆತ್ತಿದರೂ ತ್ಯಾಜ್ಯವನ್ನು ರಸ್ತೆಯ ಪಕ್ಕದಲ್ಲೇ ಹಾಕಲಾಗಿದೆ. ಈ ತ್ಯಾಜ್ಯ ಕೊಳೆತ ಸ್ಥಿತಿಯಲ್ಲಿದ್ದು ವಿಲೇಗೊಳಿಸದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೈಕಂಬದ ಒಳಚರಂಡಿಯನ್ನು ತೆರೆಯದಿರುವುದರಿಂದ ಅದರ ಮಣ್ಣು-ತ್ಯಾಜ್ಯದಿಂದ ಭರ್ತಿಯಾಗಿದೆ. ಭಾರೀ ಪ್ರಮಾಣದಲ್ಲಿ ಮಳೆಯೂ ಈ ಬಾರಿಯೂ ಬಂದರೆ ಮತ್ತೆ ಕೃತಕ ನೆರೆಹಾವಳಿ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಿದೆ. ಇದೆಲ್ಲ ಮಾರುಕಟ್ಟೆ ಸಮೀಪ ಶೇಖರಗೊಂಡು ಕೊಳೆಯುವ ಸಾಧ್ಯತೆ ಇದೆ. ಮೀನು ಮಾರುಕಟ್ಟೆಯ ಕೊಳಚೆ ನೀರು ಈಗಾಗಲೇ ಅಲ್ಲಿ ಸೇರು ತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಶೀಘ್ರವೇ ಕಾಮಗಾರಿ ಪೂರ್ಣ
ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಎಲ್ಲೆೆಲ್ಲಿ ಚರಂಡಿ ಸಮಸ್ಯೆ ಇದೆಯೋ ಅಲ್ಲಿ ಕಾಮಗಾರಿ ನಡೆಸಿ ಹೂಳೆತ್ತಲಾಗುತ್ತಿದೆ. ಅದೇ ರೀತಿ ಕೈಕಂಬದಲ್ಲೂ ಚರಂಡಿ ಸಮಸ್ಯೆ ಇದ್ದು, ತ್ಯಾಜ್ಯವನ್ನು ಮೇಲೆತ್ತಲಾಗುತ್ತಿದೆ. ಸದ್ಯಕ್ಕೆ ಗುರುಪುರದಲ್ಲಿ ಕೆಲಸ ನಡೆಯುತ್ತಿದೆ. ಕೆಲವೊಂದು ಸಮಯಗಳಲ್ಲಿ ಜೆಸಿಬಿಗಳು ಸಿಗದ ಕಾರಣ ಕೆಲಸ ನಿಧಾನವಾಗುತ್ತಿದೆ. ಆದರೆ ಒಂದು ತಿಂಗಳ ಒಳಗಡೆ ಸಮಸ್ಯೆ ಇರುವ ಕಡೆಗಳ ಚರಂಡಿಯನ್ನು ವಿಲೇವಾರಿಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಲಾಗುವುದು.
– ಮುರುಗೇಶ್, ಸಹಾಯಕ ಎಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಇಲಾಖೆ