Advertisement
ಇದೇ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚೈತ್ರಾ ಕುಂದಾಪುರ ಗುಂಪಿನ ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಯಿತು. ಮುಂದಿನ ವಿಚಾರಣೆಯನ್ನು ನ.5ಕ್ಕೆ ಮುಂದೂಡಲಾಗಿದೆ.
Related Articles
ನ್ಯಾಯಾಂಗ ಬಂಧನಕ್ಕೊಳಗಾಗಿ, ಅಸೌಖ್ಯ ಕಾರಣದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚೈತ್ರಾ ಕುಂದಾಪುರ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಅವರನ್ನು ಹಾಜರುಪಡಿಸದೆ ಇರುವುದಕ್ಕೆ ಕಾರಣ ನೀಡಿ ಮಂಗಳೂರು ಜೈಲು ಸೂಪರಿಂಟೆಂಡೆಂಟ್ ನ್ಯಾಯಾಲಯಕ್ಕೆ ನಿವೇದನೆ ಅರ್ಜಿ ಸಲ್ಲಿಸಿದ್ದರು. ಆಕೆ ಅಸೌಖ್ಯ ಕಾರಣದಿಂದ ವೆನಾÉಕ್ ಆಸ್ಪತ್ರೆಯಲ್ಲಿ ಅ.26ರಿಂದ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೂ ಚೇತರಿಸದ ಕಾರಣ ಈ ದಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿಲ್ಲ. ಮುಂದಿನ ವಿಚಾರಣೆ ದಿನ ಹಾಜರುಪಡಿಸಲಾಗುವುದು ಅವರು ತಿಳಿಸಿದ್ದರು. ಇದರಿಂದ ಕುಪಿತರಾದ ನ್ಯಾಯಾಧೀಶರು, ಆರೋಪಿಯನ್ನು ಈ ಹಿಂದೆ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅಂತಹ ಯಾವುದೇ ಕಾಯಿಲೆಗಳು ಇರಲಿಲ್ಲ. ಸುಳ್ಯದ ವೈದ್ಯರು ಕೂಡ ಆಕೆಯನ್ನು ಒಳರೋಗಿಯಾಗಿ ದಾಖಲಿಸಲು ಯಾವುದೇ ಕಾರಣ ಇಲ್ಲ ಎಂದು ನ್ಯಾಯಾಲಯಕ್ಕೆ ದೃಢೀಕರಣ ಪತ್ರ ನೀಡಿದ್ದರು.
Advertisement
ಹಾಗಿರುವಾಗ ಈಗಿನ ಸ್ಥಿತಿಗತಿ ಕುರಿತು ಸಂಪೂರ್ಣ ವಿವರಗಳನ್ನು ಮಂಗಳೂರಿನ ವೈದ್ಯಾಧಿಕಾರಿ ನ.5ರಂದು ಖುದ್ದು ಹಾಜರಿದ್ದು ನ್ಯಾಯಾಲಯಕ್ಕೆ ಸಲ್ಲಿಸಬೇಕು ಹಾಗೂ ಅಂದು ಜೈಲು ಸೂಪರಿಂಟೆಂಡೆಂಟ್ ಕೂಡ ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ಹೇಳಿದರು. ಚೈತ್ರಾಳನ್ನು ಸರಕಾರಿ ಆ್ಯಂಬುಲೆನ್ಸ್‌ನಲ್ಲಿ ತನ್ನ ಮುಂದೆ ಹಾಜರುಪಡಿಸುವಂತೆ ಸೂಚಿಸಿದರು.