Advertisement
ಗುರುಪೂಜೆಯಿಂದಾಗಿ ಸಮಸ್ತ ಸದ್ಭಕ್ತರಿಗೆ ಶ್ರೇಯಸ್ಸುಂಟಾಗಲಿ ಎಂದು ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.
Related Articles
Advertisement
ಚಾತುರ್ಮಾಸ್ಯ ವೃತ ನಿರ್ವಹಣಾ ಸಮಿತಿಯ ಗೌರವಾಧ್ಯಕ್ಷ ಕೆ. ಕೇಶವ ಆಚಾರ್ಯ ಮಂಗಳೂರು ಮಾತನಾಡಿ, ಶೀÅಗಳು ಹಿಂದಿನ 12 ಚಾತುರ್ಮಾಸ್ಯ ವ್ರತಾಚರಣೆಗಳಿಗಿಂತ ಭಿನ್ನವಾಗಿ ಪ್ರಥಮ ಬಾರಿಗೆ ಶ್ರೀ ಮಠದಲ್ಲಿ ಚಾತುರ್ಮಾಸ್ಯವನ್ನು ಕೈಗೊಳ್ಳುತ್ತಿದ್ದಾರೆ. ಸಮಸ್ತ ಹಿಂದುಗಳು ಜತೆಯಾಗಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸು, ಶ್ರೀ ಮಠದ ಅಭಿವೃದ್ಧಿ ಕಾರ್ಯಗಳಲ್ಲಿ ಸಹಭಾಗಿಗಳಾಗುವಂತೆ ಕರೆ ನೀಡಿದರು. ಪುರ ಪ್ರವೇಶೋತ್ಸವ ಸಾರ್ವಜನಿಕ ಸ್ವಾಗತ ಸಮಿತಿಯ ಗೌರವ ಉಪಾಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಕೆ. ಮುರಲೀಧರ ಪೈ, ಸಂಘಟನಾ ಕಾರ್ಯದರ್ಶಿ ಕುತ್ಯಾರು ಪ್ರಸಾದ್, ಮಾತƒ ಮಂಡಳಿ ಅಧ್ಯಕ್ಷೆ ಶಿಲ್ಪಾ ಜಿ. ಸುವರ್ಣ, ಗಂಗಾಧರ ಸುವರ್ಣ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಪದಾಧಿಕಾರಿಗಳು, ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಪದಾಧಿಕಾರಿಗಳು, ವಿಶ್ವಸ್ಥರು, ವಿವಿಧ ಸಮಿತಿಗಳ ಮುಖ್ಯಸ್ಥರು, ಭಕ್ತಾಧಿಗಳು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಗೌ| ಪ್ರ| ಕಾರ್ಯದರ್ಶಿ ಲೋಕೇಶ್ ಎಂ. ಬಿ. ಆಚಾರ್ ಕಂಬಾರು ಸ್ವಾಗತಿಸಿದರು. ಮಾಜಿ ಪ್ರಧಾನ ಕಾರ್ಯದರ್ಶಿ ವೈ. ಧರ್ಮೇಂದ್ರ ಆಚಾರ್ಯ ಕಾಸರಗೋಡು ಪ್ರಸ್ತಾವನೆ ಗೆ„ದರು. ಪ್ರ. ಕಾರ್ಯದರ್ಶಿ ನಾಗರಾಜ ಆಚಾರ್ಯ ಕಾಡಬೆಟ್ಟು ವಂದಿಸಿದರು. ಕೋಶಾಧಿಕಾರಿ ಪಿ. ವಿ. ಗಂಗಾಧರ ಆಚಾರ್ಯ ಉಡುಪಿ, ಕಾರ್ಯದರ್ಶಿ ಸುರೇಶ್ ಆಚಾರ್ಯ ಕಾರ್ಕಳ, ಕೆ. ಜಿ. ಆಚಾರ್ಯ ಹೆಬ್ರಿ ಕಾರ್ಯಕ್ರಮ ನಿರೂಪಿಸಿದರು.