Advertisement

ರಾಮಪುರ ಶಾಲೆಗಿಲ್ಲ ಮೂಲ ಸೌಕರ್ಯ

12:46 PM Feb 05, 2020 | Naveen |

ಗುರುಮಠಕಲ್‌: ಶುದ್ಧ ಕುಡಿಯುವ ನೀರಿನ ಕೊರತೆ. ತಿಪ್ಪೆ ಗುಂಡಿ ದಾಟಿ ಶಾಲೆಯೊಳಗೆ ಪ್ರವೇಶ. ಶೌಚಾಲಯದ ಕೊರತೆ. ಹೆಚ್ಚುವರಿ ಕೊಠಡಿಗಳ ಕೊರತೆ ಮುಂತಾದ ಸೌಲಭ್ಯಗಳಿಂದ ರಾಮಪುರ ಶಾಲೆ ವಂಚಿತವಾಗಿದೆ.

Advertisement

ತಾಲೂಕಿನ ರಾಮಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 1958ರಲ್ಲಿ ಸ್ಥಾಪನೆಯಾಗಿದೆ. 1ರಿಂದ 7ನೇ ತರಗತಿ ವರಗೆ ಒಟ್ಟು 298 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಉತ್ತಮ ಶಾಲೆ ಎಂದು ತಾಲೂಕಿನಲ್ಲಿ ಗುರುತಿಸಲಾಗಿದೆ. ಶಾಲೆ ಅಂಗಳದಲ್ಲಿರುವ ಕೊಳವೆಬಾವಿಯಿಂದ ಉಪ್ಪಿನ ಅಂಶದಿಂದ ಕೂಡಿರುವ ನೀರು ಬರುತ್ತಿದೆ. ಹಾಗಾಗಿ ನೀರು ಕುಡಿಯಲು ಹಾಗೂ ಅಡುಗೆ ಮಾಡಲು ಉಪಯೋಗವಾಗಿಲ್ಲ. ಆದ್ದರಿಂದ ಶಾಲೆ ಮುಂಭಾಗದಲ್ಲಿರುವ ನೀರು ಶುದ್ಧೀಕರಣ ಘಟಕದಿಂದ ಒಂದು ಕ್ಯಾನ್‌ಗೆ 3 ರೂ. ರಂತೆ ಹಣ ನೀಡಿ ಒಟ್ಟು 6 ಕ್ಯಾನ್‌ ಖರೀದಿಸುತ್ತಾರೆ. ಸರಕಾರಿ ಶಾಲೆಯಲ್ಲಿ ದಿನನಿತ್ಯ ಹಣ ಎಲ್ಲಿಂದ ತಂದು ಪಾವತಿಸಬೇಕು. ಶಾಲೆ ಮಕ್ಕಳ ಅನುಕೂಲಕ್ಕಾಗಿ ಉಚಿತವಾಗಿ ಫಿಲ್ಟರ್‌ ನೀರು ಒದಗಿಸುವಂತೆ ಗ್ರಾಪಂ ಅಭಿವೃದ್ಧಿ ಅಧಿ ಕಾರಿಗಳಿಗೆ ಹಲವು ಸಲ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಮುಖ್ಯ ಶಿಕ್ಷಕರು ದೂರಿದ್ದಾರೆ.

ಶಾಲೆಯಲ್ಲಿ ಒಟ್ಟು 8 ಕೋಣೆಗಳಿವೆ. ಇನ್ನು ಎರಡು ಕೋಣೆಗಳು ನಿರ್ಮಾಣವಾಗಿವೆಯಾದರೂ ಇನ್ನೂ ಹಸ್ತಾಂತರವಾಗಿಲ್ಲ. ಮತ್ತೂಂದು ಕೋಣೆ ಶಿಥಿಲವಾಗಿದೆ. ಶಿಥಿಲವಾಗಿರುವ ಕಟ್ಟಡ ನೆಲಸಮ ಮಾಡಿ ಹೊಸ ಕೋಣೆ ನಿರ್ಮಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶಾಲೆ ಗೇಟ್‌ ಮುಂದಿರುವ ಖಾಲಿ ಸ್ಥಳವನ್ನು ಗ್ರಾಮಸ್ಥರು ತಿಪ್ಪೆ ಗುಂಡಿಗೆ ಗಳಾಗಿ ಬಳಸಿಕೊಡಿದ್ದಾರೆ. ವಿದ್ಯಾರ್ಥಿಗಳು ತಿಪ್ಪೆ ಗುಂಡಿ ದಾಟಿ ಮೂಗು ಮುಚ್ಚಿಕೊಂಡು ಶಾಲೆಯೊಳಗೆ ಪ್ರವೇಶಿಸುವ ಅನಿವಾರ್ಯತೆ ಎದುರಾಗಿದೆ .

ಶಾಲೆ ಮಕ್ಕಳು ದಿನನಿತ್ಯ ಕುಡಿಯಲು ಉಪ್ಪು ನೀರು ಅವಲಂಭಿಸಿರುವ ವಿಷಯವನ್ನು ಮುಖ್ಯ ಶಿಕ್ಷಕರು ನನ್ನ ಗಮನಕ್ಕೆ ತಂದಿದ್ದಾರೆ. ಹಣ ಪಾವತಿಸಿ ಶುದ್ಧೀಕರಣ ಘಟಕದಿಂದ ಕುಡಿಯಲು ನೀರು ತರುತ್ತಿರುವುದು ಗೊತ್ತಿದೆ. ಶಾಲೆ ಮಕ್ಕಳಿಗೆ ಉಚಿತವಾಗಿ ಕುಡಿಯಲು ನೀರು ಒದಗಿಸುವಂತೆ ಸೂಚಿಸುತ್ತೇನೆ.
ಮಹಾದೇವಪ್ಪ,
ಅಭಿವೃದ್ಧಿ ಅಧಿಕಾರಿ ಗಾಜರಕೋಟ್‌

Advertisement

ಕೋಣೆ ಶಿಥಿಲವಾಗಿರುವುದರಿಂದ ಮಕ್ಕಳಿಗೆ ಆತಂಕ ಎದುರಾಗಿದೆ. ಹಳೆ ಕೋಣೆ ಶೀಘ್ರ ದುರಸ್ತಿಗೊಳಿಸಬೇಕು ಶಾಲೆ ಗೇಟ್‌ ಮುಂದಿರುವ ತಿಪ್ಪೆಗುಂಡಿ ತೆರವುಗೊಳಿಸಬೇಕು ಮತ್ತು ಶೌಚಾಲಯಕ್ಕೆ ಅನುದಾನ ಬಿಡುಗಡೆ ಮಾಡಬೇಕು.
ನರಸಪ್ಪ,
ಸಹ ಶಿಕ್ಷಕರು ರಾಮಪುರ ಶಾಲೆ’

„ಚೆನ್ನಕೇಶವುಲು ಗೌಡ

Advertisement

Udayavani is now on Telegram. Click here to join our channel and stay updated with the latest news.

Next