Advertisement

ಗ್ರಾಮೀಣ ಪ್ರದೇಶದಲ್ಲಿ ಎಲ್ಲರಿಗೂ ನೀರು ಒದಗಿಸಿ

03:18 PM May 01, 2020 | Naveen |

ಗುರುಮಠಕಲ್‌: ಭಾರತ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲರಿಗೂ ಶುದ್ದ ಕುಡಿಯುವ ನೀರು ಲಭ್ಯವಾಗುವಂತೆ ಪಿಡಿಒಗಳು ಕಾರ್ಯನಿರ್ವಹಿಸಬೇಕು ಎಂದು ಜಿಪಂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ತಾಕೀತು ಮಾಡಿದರು.

Advertisement

ಪಟ್ಟಣದ ಪುರಸಭೆ ಕಚೇರಿಯಲ್ಲಿ ನಡೆದ ಪಿಡಿಒಗಳ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಸಲು ಶ್ರಮವಹಿಸಬೇಕು ಮತ್ತು ಸಮಸ್ಯೆ ಇರುವ ಕಡೆ ಖಾಸಗಿ ಕೊಳವೆಬಾವಿ ಬಾಡಿಗೆ ಪಡೆಯಬೇಕು ಎಂದು ಸೂಚಿಸಿದರು. ತಾಪಂ ಇಒ ಬಸವರಾಜ ಶರಭಯ್ಯ ಮಾತನಾಡಿ, ಗ್ರಾಹಕರು ಖಾಸಗಿ ಮೆಡಿಕಲ್‌ ಶಾಪ್‌ಗ್ಳಲ್ಲಿ ಪ್ಯಾರಸಿಟಮಲ್‌
ಮಾತ್ರೆ ತೆಗೆದುಕೊಂಡಲ್ಲಿ ಅನ್‌ಲೈನ್‌ ವರದಿ ಮಾಡಬೇಕು. ಎಂಜಿಎನ್‌ಆರ್‌ಇಜಿ ಯೋಜನೆ ಸರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು. ಶರಣಪ್ಪ ವೈಲಾರಿ, ಭೀಮರಾಯ ಸೇರಿದಂತೆ ಗುರುಮಠಕಲ್‌ ತಾಲೂಕಿನ ಎಲ್ಲ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next