Advertisement

ಜಿಲ್ಲೆಯ ಶಿಕ್ಷಕರ ಕೊರತೆ ನೀಗಿಸಿ

11:47 AM Jun 17, 2019 | Naveen |

ಗುರುಮಠಕಲ್: ಜೂನ್‌ 21ರಂದು ಚಂಡರಕಿ ಗ್ರಾಮದ ಶಾಲೆಯಲ್ಲಿ ವಾಸ್ತವ್ಯ ಮಾಡುತ್ತಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಿಜೆಪಿ ಸ್ವಾಗತಿಸುತ್ತದೆ ಜತೆಗೆ ಜಿಲ್ಲೆಯಲ್ಲಿ ಕೊರತೆ ಇರುವ ಶಿಕ್ಷಕರನ್ನು ನೇಮಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ ಮಾಗನೂರ ಆಗ್ರಹಿಸಿದರು.

Advertisement

ನಗರದ ಅಥಿತಿ ಗೃಹದಲ್ಲಿ ರವಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರ ಸಾಲ ಮನ್ನಾ, ಹೈಕ ಭಾಗದ ಕೈಗಾರಿಕೆ ಅಭಿವೃದ್ಧಿ ಮತ್ತು ಶಾಲೆಗಳಲ್ಲಿ ಶಿಕ್ಷಕರನ್ನು ನೇಮಿಸುವ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ತಿಳಿಸಿದರು.

ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶರಣಗೌಡ ಬಾಡಿಯಾಳ ಮಾತನಾಡಿ, ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಲೋಕಪಯೋಗಿ ಇಲಾಖೆ ಎಸ್‌ಸಿಪಿ ಹಾಗೂ ಟಿಎಸ್‌ಪಿ ಅಡಿ ಹಲವಾರು ಕಾಮಗಾರಿಗಳ ಟೆಂಡರ್‌ ಕರೆಯಲಾಗಿತ್ತು. ನಿಯಮಾವಳಿ ಪ್ರಕಾರ ಟೆಂಡರ್‌ ಪಡೆದ ಗುತ್ತಿಗೆದಾರರಿಗೆ ಅಧಿಕಾರಿಗಳು ಕೆಲಸ ಮಾಡಲು ಅವಕಾಶ ನೀಡದೆ ಒತ್ತಡಕ್ಕೆ ಮಣಿದು ನಿಯಮ ಉಲ್ಲಂಘಿಸಿ ಬೇರೆಯವರಿಗೆ ಕೆಲಸ ಮಾಡಲು ಅವಕಾಶ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಗುರುಮಠಕಲ್ ತಾಲೂಕು ರಚನೆಯಾಗಿ ವರ್ಷ ಕಳೆದರೂ ಇಲ್ಲಿ ಯಾವುದೇ ಇಲಾಖೆಗಳ ಕಚೇರಿ ಪ್ರಾರಂಭವಾಗಿಲ್ಲ. ಇದ್ದ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದರಲ್ಲಿ ಶಾಸಕರು ಮಗ್ನರಾಗಿದ್ದಾರೆ. ಮುಖ್ಯಮಂತ್ರಿ ಜಿಲ್ಲೆಗೆ ಬರುವಾಗ ಜಿಲ್ಲೆಯ ರೈತರ ಪೂರ್ತಿ ಸಾಲ ಮನ್ನಾದ ಪಟ್ಟಿ ಬಿಡುಗಡೆ ಮಾಡಬೇಕು. ಸುಮಾರು 8 ವರ್ಷಗಳಿಂದ ಕಡೆಚೂರು-ಬಾಡಿಯಾಳ್‌ ಕೈಗಾರಿಕ ಪ್ರದೇಶದಲ್ಲಿ ಕೈಗಾರಿಕೆಗಳು ಬರದಿರುವುದಕ್ಕೆ ಕಾರಣ ತಿಳಿಸಬೇಕು ಎಂದರು.

ಅಂತಾರಾಜ್ಯ ಸಮಸ್ಯೆ ಆದ ಸಂಗಮ ಬಂಡ ಡ್ಯಾಂನ ಹಿನ್ನಿರಿನಿಂದ ಗುರುಮಠಕಲ್ ಕ್ಷೇತ್ರದ ಚೇಲ್ಹೇರಿ ಸುತ್ತಮುತ್ತಲಿನ ಹತ್ತು ಗ್ರಾಮಗಳ ರೈತರ ಬೆಳೆಗಳು ಪ್ರತಿವರ್ಷ ನಷ್ಟವಾಗುತ್ತಿವೆ. ಇದಕ್ಕೆ ಪರಿಹಾರ ಸೂಚಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಶರಣಗೌಡ ಕಾಳಬೆಳಗುಂದಿ, ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಘಟಕ ಉಪಾಧ್ಯಕ್ಷ ವೆಂಕಟಪ್ಪ ಅವುಂಗಾಪುರ್‌, ಬಿಜೆಪಿ ಬ್ಲಾಕ್‌ ಅಧ್ಯಕ್ಷ ನರಸಿಂಹುಲು ನಿರೇಟಿ, ನಗರ ಬಿಜೆಪಿ ಅಧ್ಯಕ್ಷ ಚಂದುಲಾಲ್ ಚೌದ್ರಿ, ಮಹೇಂದ್ರರೆಡ್ಡಿ ಕಂದಕೂರು, ರಾಜೇಂದ್ರ ಕಲಾಲ್, ನರೇಶ ಗೊಂಗ್ಲೆ, ನೀಲಯ್ಯ ಸ್ವಾಮಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next