Advertisement

ನಾಲ್ಕು ದಿನಕ್ಕೊಮ್ಮೆ ನೀರು

11:43 AM May 06, 2019 | Naveen |

ಗುರುಮಠಕಲ್: ಕುಡಿಯುವ ನೀರಿನ ಬವಣೆ ತಪ್ಪಿಸಲು ನಡೆಸಿದ ಭಗೀರಥ ಪ್ರಯತ್ನ ವೈರ್ಥವಾದ ಕಾರಣ ಪ್ರಸ್ತುತ ನಾಲ್ಕು ದಿನಕ್ಕೊಮ್ಮೆ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜ ಆಗುತ್ತಿದೆ.

Advertisement

ಪಟ್ಟಣಕ್ಕೆ ನಲ್ಲಾ ಚೇರು ಕೆರೆಯಿಂದ ಈ ಹಿಂದೆ ಕುಡಿಯುವ ನೀರು ಪೂರೈಸಲಾಗುತಿತ್ತು. ಆದರೆ ಅಲ್ಲಿ ನೀರಿನ ಸಮಸ್ಯೆ ಎದುರಾದ್ದರಿಂದ 2008ರಲ್ಲಿ ಅಂದಿನ ಶಾಸಕ 32 ಕೋಟಿ ರೂ. ವೆಚ್ಚದಲ್ಲಿ ಯಾದಗಿರಿ ಭೀಮಾ ನದಿಯಿಂದ ಗುರುಮಠಕಲ್ಗೆ ನೀರು ತರುವ ಯೋಜನೆ ರೋಪಿಸಿ ಜಾರಿಗೊಳಿಸಿದ್ದರು. ಇದರಿಂದ 2008ರಲ್ಲಿ ಆರಂಭದಿಂದಲೇ ದಿನಕ್ಕೊಂದು ಸಮಸ್ಯೆ ಎದುರಿಸುತ್ತಿರುವ ಈ ಯೋಜನೆ ಸರಿಪಡಿಸಲು ಸರ್ಕಾರ ಮತ್ತೆ ಹೆಚ್ಚುವರಿಯಾಗಿ 5.5 ಕೋಟಿ ರೂ. ಬಿಡುಗಡೆ ಮಾಡಿತ್ತು. ಮೊದಲು ದಿನಕ್ಕೊಮ್ಮೆ ಪೂರೈಕೆಯಾಗುತ್ತಿದ್ದ ನೀರು ಈಗ ಸೂಕ್ತ ನಿರ್ವಹಣೆ ಕೊರತೆಯಿಂದ ನಾಲ್ಕು ದಿನಕ್ಕೊಮ್ಮೆ ಸರಬರಾಜು ಮಾಡಲಾಗುತ್ತದೆ. ಫಿಲ್ಟರ್‌ ಇರದ ಕಾರಣ ಪಟ್ಟಣ ಜನರು ಕಲುಷಿತ ನೀರು ಕುಡಿಯುವಂತಾಗಿದೆ.

ಈ ಯೋಜನೆಗೆ ಅರಕೇರಾ ಹಾಗೂ ಧರ್ಮಪೂರ ಗ್ರಾಮಗಳ ಸಮೀಪ ನಿರ್ಮಿಸಲಾದ ಪಂಪ್‌ ಹೌಸ್‌ನಲ್ಲಿ ಅಳವಡಿಸಿದ ವಿದ್ಯುತ್‌ ಮೋಟರ್‌ಗಳು ತೀರ ಕಳಪೆ ಮಟ್ಟದ್ದಾದ್ದರಿಂದ ಪದೇ ಪದೇ ಕೆಡುತ್ತ್ತಿವೆ. ಅವುಗಳ ರಿಪೇರಿಗೆ ಲಕ್ಷಾಂತರ ರೂ. ವೆಚ್ಚ ಮಾಡುತ್ತಿದ್ದರೂ ಸಮಸ್ಯೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ.

ಚೆನ್ನಕೇಶವುಲು ಗೌಡ

Advertisement

Udayavani is now on Telegram. Click here to join our channel and stay updated with the latest news.

Next