Advertisement
ಚುನಾವಣಾಧಿಕಾರಿ ಸಂಗಮೇಶ ಜಿಡಗೆ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದಂತೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ ಪಾಪಣ್ಣ ಮನ್ನೆ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಖಾಜಾ ಮೈನೋದ್ಧೀನ್ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
Related Articles
Advertisement
ಜೆಡಿಎಸ್ ಅಭ್ಯರ್ಥಿ ಪಾಪಣ್ಣ ಮನ್ನೆ ಬಹುಮತ ಹೊಂದಿದ್ದನ್ನು ಖಚಿತ ಪಡಿಸಿಕೊಂಡ ಚುನಾವಣಾಧಿಕಾರಿ ಸಂಗಮೇಶ ಜಿಡಗೆ ಅಧ್ಯಕ್ಷರಾಗಿ ಪಾಪಣ್ಣ ಮನ್ನೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಭೀಮಮ್ಮ ಮುಕುಡಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧ ಆಯ್ಕೆಯಾಗಿರುವುದಾಗಿ ಘೋಷಿಸಿದರು.
ಇದನ್ನೂ ಓದಿ:ಹೈಡ್ರಾಮಾಗಳಿಗೆ ಅಂತ್ಯ: ಗಂಗಾವತಿ ನಗರಸಭೆ ಕೊನೆಗೂ ‘ಕೈ’ ವಶಕ್ಕೆ
ಅಸ್ತಿತ್ವ ಕಳೆದುಕೊಳ್ಳುತ್ತಿದೆ ಕಾಂಗ್ರೆಸ್… ಇಲ್ಲಿನ ಪುರಸಭೆಯ 23 ಜನ ಸದಸ್ಯರಲ್ಲಿ 12 ಸದಸ್ಯರ ಬಲವನ್ನು ಹೊಂದಿದ್ದ ಕಾಂಗ್ರೆಸ್ ಮೀಸಲಾತಿ ಪ್ರಕಟಗೊಂಡಾಗ ಅಧಾಕಾರ ತಮ್ಮಿಂದ ಎಲ್ಲೂ ಹೋಗಲ್ಲ, ಗಾದಿಗೇರುವ ಬಹುಮತವಿದೆ ಎಂದು ಬೀಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಸಿಎ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಮಹಿಳೆ ಮೀಸಲಾತಿ ನಿಗದಿಯಾಗುತ್ತಿದ್ದಂತೆ ಕೈ ಲೆಕ್ಕಾಚಾರ ಉಲ್ಟಾ ಹೊಡಿದು ಉಪಾಧ್ಯಕ್ಷ ಮೀಸಲಾತಿಯ ಅಭ್ಯರ್ಥಿಯಿಲ್ಲದೇ ಅಧ್ಯಕ್ಷ ಸ್ಥಾನವನ್ನು ಪಡೆಯಲೆಂಬ ಉದ್ದೇಶದಿಂದ ತಮ್ಮ ಸದಸ್ಯರಿಗೆ ವಿಪ್ ಜಾರಿ ಮಾಡಿತ್ತು. ಆದಾವುದನ್ನೂ ಲೆಕ್ಕಿಸದೆ ಮೂವರು ಕೈ ಸದಸ್ಯರು ಚುನಾವಣೆಗೆ ಗೈರಾಗಿದ್ದು ತೀವ್ರ ಮುಖಭಂಗ ಎದುರಿಸುವಂತಾಗಿದೆ. ಇನ್ನೊಂದು ಕಾಂಗ್ರೆಸ್ ದುರಂತವೆಂದರೇ ಸ್ವತಾ ಯಾದಗಿರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್ ಅವರಿಗೆ ತನ್ನ ಪಕ್ಷದ ಮೂವರು ಸದಸ್ಯರು ಸಂಪರ್ಕಕ್ಕೆ ಸಿಕ್ಕರೋ ಇಲ್ಲವೊ ಎನ್ನುವುದು ಐಡಿಯಾನೇ ಇಲ್ವಂತೆ… 2018 ರ ವಿಧಾನಸಭಾ ಚುನಾವಣೆಯಲ್ಲಿ ಕೈ ಭದ್ರಕೋಟೆಯನ್ನು ಜೆಡಿಎಸ್ ಛಿದ್ರಗೊಳಿಸಿ ಶಾಸಕ ನಾಗನಗೌಡ ಕಂದಕೂರ ಅವರು ಗೆಲುವು ಸಾಧಿಸಿದಾಗಿನಿಂದ ಕ್ಷೇತ್ರದಲ್ಲಿ ನಾಯಕತ್ವ ಕೊರತೆಯಿಂದ ಕಾಂಗ್ರೆಸ್ ಅವನತಿ ಆರಂಭವಾಗಿದೆ ಎಂದು ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದೆ.