Advertisement

ವಿದ್ಯುತ್‌ ಟ್ರಾನ್‌ಫಾರ್ಮರ್‌ಗಳಿಗಿಲ್ಲ ತಂತಿಬೇಲಿ

12:56 PM Dec 04, 2019 | Naveen |

ಚೆನ್ನಕೇಶವುಲು ಗೌಡ
ಗುರುಮಠಕಲ್‌:
ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಗಳಿಗೆ ಸೂಕ್ತ ತಂತಿ ಬೇಲಿ ಇಲ್ಲದ ಪರಿಣಾಮ ಹಲವು ಪ್ರಾಣಿಗಳ ಜೀವ ಹಾನಿಯಾಗುತ್ತಿದ್ದರೂ ಜೆಸ್ಕಾಂ ಅಧಿಕಾರಿಗಳು ಸಮಸ್ಯೆ ಪರಿಹರಿಸುವಲ್ಲಿ ಮುಂದಾಗುತ್ತಿಲ್ಲ.

Advertisement

ಪಟ್ಟಣದ ಕೆಲವು ಕಡೆ ಟ್ರಾನ್ಸ್‌ಫಾರ್ಮರ್‌ ಗಳಿಗೆ ತಂತಿ ಬೇಲಿ ಅಳವಡಿಸಿಲ್ಲ. ಅದರ ಸುತ್ತಮುತ್ತ ಹಸಿರು ಬಳ್ಳಿ ಮತ್ತು ಜಾಲಿಕಂಟಿ ಬೆಳೆದಿವೆ. ದನಕರುಗಳು, ಮೇಕೆ-ಕುರಿಗಳು ಮೇಯಲು ಹೋಗಿ ವಿದ್ಯುತ್‌ ಸ್ಪರ್ಶವಾಗಿ ಮೃತಪಟ್ಟಿರುವ ಘಟನೆಗಳು ನಡೆದಿದೆ. ಜೀವಹಾನಿ ಆಗಿರುವ ಮಾಲೀಕರು ಪರಿಹಾರ ಮತ್ತು ಸೂಕ್ತ ಕ್ರಮ ಕೈಗೊಳ್ಳಲು ಜೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿದರೂ ಸ್ಪಂದಿಸುತ್ತಿಲ್ಲ. ಇದರಿಂದ ಜನರು ಆಕ್ರೋಶಗೊಂಡಿದ್ದಾರೆ.

ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಅಳವಡಿಸಲು ವೈಜ್ಞಾನಿಕ ಮತ್ತು ಸುರಕ್ಷಿತ ಕ್ರಮ ಕೈಗೊಳ್ಳುವಲ್ಲಿ ಜೆಸ್ಕಾಂ ಸಿಬ್ಬಂದಿ ಮುತುವರ್ಜಿ ಏಕೆ ವಹಿಸುವುದಿಲ್ಲ ಎಂದು ಜನರು ಪ್ರಶ್ನಿಸಿದ್ದಾರೆ.

ರಸ್ತೆ ಮಧ್ಯದಲ್ಲಿರುವ ವಿದ್ಯುತ್‌ ಬಾಕ್ಸ್‌ಗಳು ತೆರೆದಿರುತ್ತವೆ. ಮುಖ್ಯರಸ್ತೆಯಲ್ಲಿರುವ ಕಂಬಗಳ ಜೋಡಣೆಯಲ್ಲಿರುವ ವೈರ್‌ಗಳು ಜೋತು ಬಿದ್ದಿರುತ್ತವೆ. ರಸ್ತೆ ಮಧ್ಯ ಅವೈಜ್ಞಾನಿಕವಾಗಿ ಕಂಬ ಜೋಡನೆ ಮಾಡಲಾಗಿದೆ. ಪಟ್ಟಣದಲ್ಲಿ ಒಂದೇ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗೆ ನುಗ್ಗಿರುವ 10ಕ್ಕಿಂತ ಹೆಚ್ಚು ಕುರಿ-ಮೇಕೆಗಳು  ವುನ್ನಪ್ಪಿವೆ. ಕುರಿ-ಮೇಕೆ ಸಾಕಿ ಉಪಜೀವನ ಮಾಡುವ ಬಡ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಮುಂದೆ ಜೆಸ್ಕಾಂ ಅಧಿಕಾರಿಗಳು ಎಚ್ಚೆತ್ತು ಎಲ್ಲೆಲ್ಲಿ ವಿದ್ಯುತ್‌ ಟ್ರನ್ಸ್‌ ಫಾರ್ಮರ್‌ಗಳಿಗೆ ತಂತಿ ಬೇಲಿ ಇಲ್ಲವೋ ಅಲ್ಲಿ ವ್ಯವಸ್ಥೆ ಮಾಡಬೇಕು. ಕಂಬಗಳ ಮಧ್ಯೆ ವೈರ್‌ಗಳು ಜೋತು ಬೀಳದಂತೆ ತಡೆಯಬೇಕು.

ರಸ್ತೆಯಲ್ಲಿರುವ ವಿದ್ಯುತ್‌ ಬಾಕ್ಸ್‌ಗಳನ್ನು ಮುಚ್ಚಬೇಕು. ಪಟ್ಟಣದಲ್ಲಿ ಈ ರೀತಿ ಅವವ್ಯಸ್ಥೆ ಇದೆ. ಇನ್ನು ಹಳ್ಳಿಗಳ ಪರಿಸ್ಥಿತಿ ಇನ್ನಷ್ಟು ಬಿಗಾಡಯಿಸಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಟ್ರಾನ್ಸ್ ಫಾರ್ಮರ್‌ಗಳ ಸುತ್ತ ಮುತ್ತಲಿನ ಕಸ-ಕಡ್ಡಿ ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ಅನೇಕ ಸೂಕ್ತ ವ್ಯವಸ್ಥೆ ಕಲ್ಪಿಸಿ ಜೀವಹಾನಿಯಾಗದಂತೆ ತಡೆಯಬೇಕು ಎಂಬುದು ಜನರ ಆಗ್ರಹವಾಗಿದೆ.

Advertisement

ಪ್ರಾಣಗಳ ಜೀವಹಾನಿ ಆಗುತ್ತಿರುವ ವಿಷಯ ಕುರಿತು ನಮ್ಮ ಗಮನಕ್ಕೆ ಬಂದಿಲ್ಲ. ಯಾವ ಅವಘಡಗಳು ಸಂಭವಿದಂತೆ ಇನ್ನು ಮುಂದೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ.
ಪವನಕುಮಾರ,
ಜೆಇ ಗುರುಮಠಕಲ್‌

ಜೆಸ್ಕಾಂ ಅಧಿಕಾರಗಳ ನಿರ್ಲಕ್ಷ್ಯದಿಂದ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗಳಿಗೆ ತಂತಿ ಬೇಲಿ ಇಲ್ಲದೆ ಹಲವು ಜೀವಹಾನಿಗಳು ಸಂಭವಿಸಿವೆ. ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಇನ್ನು ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ.
ಬಾಲಪ್ಪ ಪ್ಯಾಟಿ, ಪುರಸಭೆ ಮಾಜಿ
ಉಪಾಧ್ಯಕ್ಷ ಗುರುಮಠಕಲ್‌

Advertisement

Udayavani is now on Telegram. Click here to join our channel and stay updated with the latest news.

Next