Advertisement

ವಚನ ಸಾಹಿತ್ಯ ವಿಚಾರ ಕ್ರಾಂತಿಗೆ ಅಡಿಪಾಯ

04:13 PM Aug 26, 2019 | Naveen |

ಗುರುಮಠಕಲ್: ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಬಸವ ಯುಗ ಒಂದು ಮಹತ್ತರ ಘಟ್ಟ. ಸಮಷ್ಟಿ ಜಾಗೃತಿಗಾಗಿ ಈ ಕಾಲದ ಶರಣರು ಕನ್ನಡ ಭಾಷೆ ಬಳಸಿಕೊಂಡರು. ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ಬೀರಿದ ಪ್ರಭಾವ ಆ ಕಾಲದ ಯುಗ ಧರ್ಮವನ್ನು ರೂಪಿಸಿತು. ವಿಚಾರ ಕ್ರಾಂತಿಗೆ ಅಡಿಪಾಯ ಹಾಕಿತು. ವಚನವೆಂಬ ವಿಶಿಷ್ಟ ಪ್ರಕಾರವನ್ನು ಶರಣರು ಬಹು ಶಕ್ತಿಯುತವಾಗಿ ಬೆಳೆಸಿದರು. ಇಂತಹ ಶರಣ ಪರಂಪರೆಯಲ್ಲಿ ಪ್ರಮುಖರು ಬಸವಣ್ಣ ಎಂದು ಉಪನ್ಯಾಸಕ ಗುಂಡೇರಾವ ಮುಡುಬಿ ಹೇಳಿದರು.

Advertisement

ಗುರುಮಠಕಲ್ ಪಟ್ಟಣದ ಖಾಸಾ ಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದ ಅವರು, ಬಸವಣ್ಣ ಅನುಭಾವಿ, ಧಾರ್ಮಿಕ ಮುಖಂಡ, ಕ್ರಾಂತಿಕಾರಿ, ಕಾಯಕ ನಿಷ್ಠೆಯ ಪ್ರತಿಪಾದಕ, ಸಾಮಾಜಿಕ ಸಮಾನತೆಯನ್ನು ಸಾಧಿಸಿದ ಸಮಾಜ ಸುಧಾರಕ ಎಂದು ಬಣ್ಣಿಸುತ್ತಾರೆ ಎಂದರು.

ಅಸ್ಪೃಶ್ಯತೆ ನಿವಾರಣೆ ಹಾದಿಯಲ್ಲಿ ಪ್ರಜಾ ಪ್ರಭುತ್ವವಾದಿ ಸರ್ಕಾರಗಳು ಸಾಗುವುದಕ್ಕೆ ಬಹಳ ಮುಂಚೆಯೇ ರಾಜಪ್ರಭುತ್ವದಲ್ಲಿ ಅವರದ್ದು, ಜಾತಿ ಭೇದ ನಿರಸನ ಶಸ್ತ್ರ. ಇಲ್ಲಿ ಅವರಿಗೆ ಶಸ್ತ ್ರವಾದದ್ದು ವಚನಗಳು. ಸಮಗಾರ ಹರಳಯ್ಯ ಒಮ್ಮೆ ಶರಣು ಎಂದರೆ ಬಸವಣ್ಣ ‘ಶರಣು ಶರಣು’ ಎಂದು ನುಡಿದರು. ಬಸವ‌ಣ್ಣನವರ ಅನುಭವ ಮಂಟಪದ ಪ್ರಯೋಗದ ಫಲವಾಗಿ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸ್ವಾತಂತ್ರ್ಯ ಏಕಕಾಲಕ್ಕೆ ಬಹು ಸಂಖ್ಯೆಯ ಜನರಿಗೆ ನೀಡಿದವರಾಗಿದ್ದಾರೆ ಎಂದು ಹೇಳಿದರು.

ಭಾರತೀಯ ಸಾಂಪ್ರದಾಯಿಕ ಪರಂಪರೆಗೆ, ಅದರ ರೀತಿನೀತಿಗಳಿಗೆ ವಿರುದ್ಧವಾಗಿ ನಿಂತವರು ಮತ್ತು ನಡೆದವರು ಬಸವಣ್ಣ. ಅವರು ಬಾಳಿ ಬದುಕಿದ ಕಾಲ 12ನೇ ಶತಮಾನ. ಈ ಕಾಲವನ್ನು ಚಾರಿತ್ರಿಕ ಘಟ್ಟವಾಗಿಸಿದ್ದು ಶರಣ ಚಳವಳಿ. ಈ ಚಳವಳಿಯಲ್ಲಿ ಮೂಡಿ ಬಂದ ವಚನಗಳು ಕನ್ನಡ ಭಾಷೆಗೆ ನೀಡಿದ ಶಕ್ತಿ ಅಪೂರ್ವವಾದುದು. ಅವುಗಳ ಓದು, ಮರು ಓದು ಹೊಸ ಹೊಸ ಅರ್ಥಗಳನ್ನು, ವಿಚಾರಧಾರೆಗಳನ್ನು ಮುಖಾಮುಖೀಯಾಗಿಸುತ್ತದೆ ಎಂದರು.

ಗುರುತಿಸುವಿಕೆಗೆ ಸಂಬಂಧಿಸಿದ ಈ ವಚನ ಆಧುನಿಕ ಕಾಲಘಟ್ಟದಲ್ಲಿ ಪ್ರಮುಖ ರಾಜಕೀಯ ನಾಯಕರ ಭಾಷಣದಲ್ಲಿ ಪ್ರಸ್ತಾಪಿಸಲ್ಪಟ್ಟಿತ್ತು ಎಂದರೆ ಅದು ಆ ವಚನದ ಶಕ್ತಿ ಮತ್ತು ಸಾರ್ವಕಾಲಿಕ ಪ್ರಸ್ತುತತೆಗೆ ಒಂದು ಸಾಕ್ಷಿ. ಭಕ್ತಿ ಮತ್ತು ಕಾಯಕವನ್ನು ಮುಖ್ಯವಾಹಿನಿಗೆ ತಂದರು ಬಸವಣ್ಣ ಎಂದು ತಿಳಿಸಿದರು. ಬಸವಣ್ಣನವರ ವಚನಗಳ ಅಂಕಿತ ‘ಕೂಡಲಸಂಗಮದೇವ’ ಈ ವಚನಗಳು ಜೀವನದರ್ಶನವಾಗಿದ್ದವೇ ಹೊರತು ಸಾಹಿತ್ಯಕೃತಿ ಗಳಾಗಬೇಕು ಎಂದು ರಚಿತವಾದಂತಹವಲ್ಲ. ಈ ವಚನಗಳಿಗೆ ಅವರು ಬಳಸಿದ ಭಾಷೆ ಕನ್ನಡ. ನುಡಿದಂತೆ ನಡೆ ಎಂದರು. ಸಮಾನ ಅವಕಾಶದ ಆದರ್ಶ ಸಮಾಜ ರಚನೆಗೆ ಮುಂದಾದರು. ಅವರು ನಿರ್ದೇಶಿಸಿದ ಕಾಯಕ ಒಂದು ಮಟ್ಟದಲ್ಲಿ ಉದ್ಯೋಗದಲ್ಲಿ ಮೇಲು ಕೀಳಿಲ್ಲ ಎಂಬುದನ್ನು ಸಾರಲು ಶಕ್ತವಾಯಿತು ಎಂದರು.

Advertisement

ಖಾಸಾ ಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ನಾಗುರಾವ ನಾಮೋಜಿ ನಾರಾಯಣಪೇಟ್, ರತನ ಪಾಂಡುರಂಗರೆಡ್ಡಿ, ಸಿದ್ರಾಮಪ್ಪ ಜಾಜಾಪೂರ, ಡಾ| ಸಾಯಿಬಾಬಾ, ವಿಶ್ವನಾಥ ಮಾಟೂರ, ಸತ್ಯನಾರಾಯಣ ಎಲೆØೕರಿ, ಬೂಸಯ್ಯ ಸ್ವಾಮೀಜಿ, ನಂದೂ ನಾಮೋಜಿ, ಪ್ರಭಾಕರ ವರ್ಧನ, ಮನೋಹರಗೌಡ, ಸರಾಫ್‌ ಕೃಷ್ಣ, ಪವಾಡಿ ಮಲ್ಲಿಕಾರ್ಜುನ, ಸತ್ಯನಾರಾಯಣ, ಸೂರ್ಯಕಾಂತ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next