ಗುರುಮಠಕಲ್: ನಾರಾಯಣಪುರ ಮತ್ತು ಗಡಿ ಮೊಹಲ್ಲಾದಲ್ಲಿರುವ ಎರಡು ಕಮಾನುಗಳು ಶಿಥಿಲಾವ್ಯವಸ್ಥೆಗೆ ತಲುಪಿದ್ದು, ಜನರಿಗೆ ಆತಂಕ ಎದುರಾಗಿದೆ. ಎರಡು ಶತಮಾನಗಳ ಹಿಂದೆ ಗುರುಮಠಕಲ್ ಪಟ್ಟಣ ಆಳಿದ ರಾಜಾ ಲಕ್ಷ್ಮಣಪ್ಪ ದೊರೆ ಸೌಂದರ್ಯ ಹೆಚ್ಚಿಸಲು ಪ್ರಮುಖ ಬಡಾವಣೆಗಳಲ್ಲಿ ಕಾಮನುಗಳು ಕಟ್ಟಿಸಿದ್ದರು. ಪಟ್ಟಣದ ಗಡಿ ಮೊಹಲ್ಲಾ, ನಾರಾಯಣಪುರ, ಬಿಡಿಕೆ ಕಟ್ಟೆ ಬಡಾವಣೆಗಳಲ್ಲಿ ಒಟ್ಟು ಎಂಟು ಸುಂದರವಾದ ಕಾಮಾನುಗಳಿದ್ದವು. ಇವುಗಳಲ್ಲಿ ಈಗಾಗಲೇ 4 ಕಮಾನುಗಳು ನೆಲ ಸಮವಾಗಿವೆ. ನಾರಾಯಣಪುರ ಮತ್ತು ಗಡಿ ಮೊಹಲ್ಲಾದಲ್ಲಿರುವ ಎರಡು ಕಮಾನುಗಳು ಶಿಥಿಲಾವ್ಯವಸ್ಥೆಗೆ ತಲುಪಿವೆ.
Advertisement
ಎತ್ತಿನ ಗಾಣದಲ್ಲಿ ಸುಣ್ಣದ ಕಲ್ಲು, ಬೆಲ್ಲ, ಮರಳು ಮತ್ತಿತರ ಕಚ್ಛಾ ವಸ್ತು ಹಾಕಿ ಸಿದ್ಧಪಡಿಸಿದ ಗಚ್ಚು ಕಲ್ಲುಗಳನ್ನು ಬಳಸಿ ಪರ್ಷಿಯನ್ ಮಾದರಿಯಲ್ಲಿ ಕಮಾನು ನಿರ್ಮಿಸಲಾಗಿದೆ. ಕಮಾನುಗಳ ಬಗ್ಗೆ ಕಾಳಜಿ ವಹಿಸಿಲ್ಲ ಎಂಬಂತೆ ಕಾಣುತ್ತಿವೆ. ಹಾಗಾಗಿ ಶಿಥಿಲಾವ್ಯಸ್ಥೆಗೆ ತಲುಪಿವೆ. ಜೋರಾಗಿ ಸುರಿದ ಮಳೆಗೆ ಕಾಮಾನಿನ ಅರ್ಧ ಭಾಗ ಕುಸಿದಿದೆ. ಇನ್ನುಳಿದ ಅರ್ಧ ಭಾಗ ಬೀಳುವ ಹಂತಕ್ಕೆ ತಲುಪಿದೆ.