Advertisement

ಟ್ರಾಫಿಕ್‌ ಪೇದೆಗೆ ಢಿಕ್ಕಿ ಹೊಡೆದು ಕಾರಿನ ಬಾನೆಟ್ ಮೇಲೆ 100 ಮೀಟರ್ ಎಳೆದೊಯ್ದ ಚಾಲಕ

09:58 AM Apr 14, 2024 | Team Udayavani |

ಚಂಡೀಗಢ: ಕಾರು ಚಾಲಕನೊಬ್ಬ ಪೊಲೀಸ್‌ ಪೇದೆಗೆ ಢಿಕ್ಕಿ ಹೊಡೆದು ಬಾನೆಟ್‌ ಮೇಲೆ ಸುಮಾರು 100 ಮೀಟರ್ ವರೆಗೆ ಎಳೆದೊಯ್ದಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

Advertisement

ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಸೆಕ್ಟರ್ 4/7 ಚೌಕ್ ನಲ್ಲಿ ಈ ಘಟನೆ ನಡೆದಿದ್ದು, ಅಜಯ್ ಪಾಲ್ ಅವರನ್ನು ಟ್ರಾಫಿಕ್ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇದೇ ವೇಳೆ ಚೌಕ್‌ನಿಂದ ಸೆಕ್ಟರ್ 9ರ ಕಡೆಗೆ ಟಿಂಟೆಡ್ ಕಿಟಕಿಗಳನ್ನು ಹೊಂದಿರುವ ಬಿಳಿ ಕಾರೊಂದು ಹೋಗುತ್ತಿರುವುದು ಕಂಡುಬಂದಿದ್ದು, ಅದನ್ನು ನಿಲ್ಲಿಸುವಂತೆ ಅಜಯ್‌ ಪಾಲ್‌ ಅವರು ಹೇಳಲು ಮುಂದೆ ಬಂದಿದ್ದಾರೆ.

ಕಾರು ನಿಲ್ಲಿಸಲು ಚಾಲಕನನ್ನು ಕೇಳಿದಾಗ, ಚಾಲಕ ಪಾಲ್‌ ಅವರಿಗೆ ಢಿಕ್ಕಿ ಹೊಡೆದಿದ್ದಾನೆ. ಪರಿಣಾಮ ಬಾನೆಟ್‌ ನಲ್ಲಿ ಪೇದೆ ಸಿಲುಕಿದ್ದಾರೆ.  ಕಾರಿನ ಬಾನೆಟ್‌ನಲ್ಲಿದ್ದ ಪೇದೆಯನ್ನು ಸುಮಾರು 100 ಮೀಟರ್‌ಗಳವರೆಗೆ ಎಳೆದುಕೊಂಡು ಚಾಲಕ ಹೋಗಿದ್ದಾನೆ.

ಕಾರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ನಂತರ, ಚಾಲಕ ತನ್ನ ಕಾರನ್ನು ನಿಲ್ಲಿಸಿದ್ದಾನೆ ಮತ್ತು ಇತರ ಪೊಲೀಸರು ಅವನನ್ನು ಹಿಡಿದಿದ್ದಾರೆ.

ಘಟನೆಯಲ್ಲಿ ಕಾನ್‌ ಸ್ಟೇಬಲ್ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಪಾಲ್ ಅವರ ದೂರಿನ ಆಧಾರದ ಮೇಲೆ, ಆರೋಪಿ ಚಾಲಕನ ವಿರುದ್ಧ ಸೆಕ್ಷನ್ 279 (ಅತಿವೇಗದ ಚಾಲನೆ), 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯ), 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕ್ರಿಯೆಯಿಂದ ನೋವುಂಟು ಮಾಡುವುದು), 186 ಅಡಿಯಲ್ಲಿ ಎಫ್ಐಆರ್ ದಾಖಲಿಸಿ, ಸೋನಿಪತ್ ಜಿಲ್ಲೆಯ ಬರೌನಾ ಗ್ರಾಮದ ನಿವಾಸಿ ಅಮಿತ್ ಎಂದು ಗುರುತಿಸಲಾದ ಆರೋಪಿಯನ್ನು ಪೊಲೀಸರು ಬಂಧಿಸಲಾಗಿದೆ ಎಂದು ಎಸ್‌ಎಚ್‌ಒ ಅವತಾರ್ ಸಿಂಗ್ ಹೇಳಿದ್ದಾರೆ.

ಆರೋಪಿ ಕಾರು ಚಾಲಕ ಜಾಮೀನು ಪಡೆದಿದ್ದು, ಪೊಲೀಸರು ಚಾಲಕನಿಗೆ ಚಲನ್ ಜಾರಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next