Advertisement

24 ಗ್ರಾಮದಲ್ಲಿ ನೀರಿಗಾಗಿ ಜನ-ಜಾನುವಾರು ಪರದಾಟ

12:55 PM May 05, 2019 | Naveen |

ಕುರುಗೋಡು: ಬೇಸಿಗೆ ಬಂತೆಂದರೆ ಎಲ್ಲೆಂದರಲ್ಲಿ ಅಂತರ್ಜಲ ಕುಸಿತದಿಂದ ಜಲ ಮೂಲಗಳು ಬತ್ತಿ ಹೋಗಿ ಪಟ್ಟಣದ 24ಕ್ಕೂ ಹೆಚ್ಚು ಗ್ರಾಮಗಳ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾದ ಅನಿವಾರ್ಯತೆ ಉಂಟಾಗಿದೆ.

Advertisement

ಇದರಿಂದ ಬೇಸತ್ತ ಜನ ಶುದ್ಧ ಕುಡಿಯುವ ನೀರು ಬೇಕೆಂದರೆ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ತೆರಳಿ ಹಣ ಕೊಟ್ಟು ನೀರು ತಂದು ಸೇವಿಸಬೇಕಾದ ದುಸ್ಥಿತಿ ಎದುರಾಗಿದೆ. ಪಟ್ಟಣದ ಸುತ್ತಮುತ್ತಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದ್ದು, ಜನರು ನಿತ್ಯ ಇದರಿಂದ ಪರಿತಪಿಸುವಂತಾಗಿದೆ.

ಸರಕಾರ ಪಟ್ಟಣದ ಕೆಲ ಗ್ರಾಮಗಳಲ್ಲಿ ಕೆರೆಗಳು ನಿರ್ಮಿಸಿದ್ದು, ಅವುಗಳು ಜನರಿಗೆ ಉಪಯೋಗವಾಗದೆ ನಿರುಪಯುಕ್ತಗೊಂಡಿವೆ. ಇನ್ನೂ ಜಾನುವಾರುಗಳಿಗೆ ಹಾಗೂ ಮನೆ ಬಳಕೆಗೆ ನೀರು ಬೇಕೆಂದರೆ ಖಾಸಗಿ ಕೊಳವೆ ಬಾವಿ ನೀರು ತರಬೇಕಾದ ಸ್ಥಿತಿ ಮಹಿಳೆಯರಲ್ಲಿ ಉಂಟಾಗಿದೆ. ಪ್ರತಿಯೊಂದು ಹಳ್ಳಿಗಳಲ್ಲಿಯೂ ವಾರಕ್ಕೊಮ್ಮೆ ನೀರು ಒದಗಿಸುತ್ತಿರುವ ಸ್ಥಳೀಯ ಇಲಾಖೆ ಅಧಿಕಾರಿಗಳ ವಿರುದ್ಧ ನಿತ್ಯ ಶಾಪ ಹಾಕುತ್ತಾ ಸಮಸ್ಯೆ ಒಳಗೆ ಮುಳುಗಿರುವ ಜನರು, ದನಕರು, ಮನೆ ಬಳಕೆ, ಬಟ್ಟೆ ತೊಳೆಯಲು ನೀರಿಲ್ಲವಾಗಿದೆ. ಇದರಿಂದ ಜನರು ವಾರಕ್ಕೊಮ್ಮೆ ಜಳಕ ಮಾಡುವ ಪರಿಸ್ಥಿತಿ ಎದುರಾಗಿದೆ.

ಫ್ಲೋರೈಡ್‌ ನೀರೇ ಗತಿ; ಕುಡಿಯುವ ನೀರಿಗಾಗಿ ಹಳ್ಳಿ, ಗ್ರಾಮ, ಪಟ್ಟಣ ಸೇರಿದಂತೆ ವಿವಿಧ ಕಡೆ ಶುದ್ಧ ಘಟಕಗಳು ಸ್ಥಾಪಿಸಲಾಗಿದೆ. ಆದರೆ ಅನೇಕ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ದುರಸ್ತಿಗೆ ಬಂದಿದ್ದು, ಬೇಸಿಗೆಕಾಲದಲ್ಲಿ ಅವುಗಳನ್ನು ದುರಸ್ತಿಗೊಳಿಸಿ ಜನರಿಗೆ ನೀರು ಒದಗಿಸಲು ಅಧಿಕಾರಿಗಳು ಮುಂದಾಗದಿರುವುದು ನಿರ್ಲಕ್ಷ್ಯಕ್ಕೆ ಕಾರಣವಾಗಿದೆ.

12 ಹೆಚ್ಚು ಕೆರೆ: ಸರಕಾರ ಕೆಲ ವರ್ಷಗಳ ಹಿಂದೆ ಸಮಗ್ರ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಅಂದಾಜು ಒಂದು ಕೆರೆಗೆ 2 ಕೋಟಿ ವೆಚ್ಚದಲ್ಲಿ ಸುಮಾರು 12ಕ್ಕಿಂತ ಹೆಚ್ಚು ಕುಡಿಯುವ ನೀರಿನ ಕೆರೆಗಳು ನಿರ್ಮಿಸಿದೆ. ಆದರೆ ಅವುಗಳು ನಿರ್ಮಾಣವಾದ ಬಳಿಕ 2 ವರ್ಷ ಭರ್ತಿಯಾಗಿ ಜನರಿಗೆ ಅನುಕೂಲವಾಗಿದ್ದ ಕೆರೆಗಳು ಅಂದಿನಿಂದ ಇಂದಿನವರೆಗೂ ಸಂಪೂರ್ಣ ಬತ್ತಿ ಹೋಗಿವೆ. ತುಂಗಭದ್ರಾ ಮಂಡಳಿ ಕೃಷಿಗೆ ಬೇಸಿಗೆ ನೀರು ಒದಗಿಸಲು ಸ್ಥಗಿತಗೊಳಿಸಿದ ಕಾರಣ ಕೆರೆಗೆ ನೀರು ತುಂಬಿಸಲು ಅಗಿಲ್ಲ.

Advertisement

ಸಮಸ್ಯೆಗೆ ಒಳಗಾದ ಗ್ರಾಮಗಳು: ಎಚ್.ವೀರಾಪುರ, ಗೇಣಿಕೆಹಾಳ್‌, ಮುಷ್ಟಗಟ್ಟಿ, ಕಲ್ಲುಕಂಬ, ಕೆರೆಕೆರೆ, ಎಮ್ಮಿಗನೂರು, ಸಿದ್ದಮ್ಮನಹಳ್ಳಿ, ಏಳುಬೆಂಚಿ, ಯರ್ರಂಗಳ್ಳಿ, ವದ್ದಟ್ಟಿ, ಒರ್ವಾಯಿ, ಗುತ್ತಿಗೆನೂರು, ಪಟ್ಟಣಶೆರಗು, ಬೈಲೂರು, ಕೋಳೂರು, ದಮ್ಮೂರು, ಸೋಮಸಮುದ್ರ, ಸಿಂಗೇರಿ ಸೇರಿ 23 ಗ್ರಾಮಗಳಲ್ಲಿ ನೀರಿಗೆ ಸಮಸ್ಯೆಯಿದೆ.

ನೀರಿನ ಸಮಸ್ಯೆ ಇರುವುದು ಗಮನಕ್ಕೆ ಬಂದಿಲ್ಲ. ಹಳ್ಳಿಗಳಲ್ಲಿರುವ ನೀರಿನ ತೊಂದರೆ ಪರಿಶೀಲಿಸಿ ಆ ಗ್ರಾಮದ ಪಿಡಿಒ ಹತ್ತಿರ ಚರ್ಚೆ ನಡೆಸಿ ಪ್ರತಿಯೊಂದು ಗ್ರಾಮಗಳಿಗೆ ಸಮರ್ಪಕ ನೀರು ಒದಗಿಸುವ ಕಾರ್ಯ ಕೈಗೊಳ್ಳುತ್ತೇನೆ.
ಶಿವಾನಂದ ಕಲ್ಮನೆ, ತಾಪಂ ಇಒ

ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶದ ಜನರು ಪ್ರತಿ ವರ್ಷ ನೀರಿನ ತೊಂದರೆ ಎದುರಿಸು ತ್ತಿದ್ದಾರೆ. ಇದಕ್ಕೆ ಜಿಲ್ಲಾಡಳಿತವು ಸಂಬಂಧಿಸಿದ ಅಧಿ ಕಾರಿ ಗಳನ್ನು ಹಳ್ಳಿಗಳಿಗೆ ಕಳುಹಿಸಿ ತಕ್ಷಣವೇ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
•ದರೂರು ಪುರುಷೋತ್ತಮಗೌಡ.

ಸುಧಾಕರ ಮಣ್ಣೂರು

Advertisement

Udayavani is now on Telegram. Click here to join our channel and stay updated with the latest news.

Next