Advertisement

Mantralaya ಗುರು ರಾಯರ ಪಾದುಕೆ ಪಟ್ಟಾಭಿಷೇಕ ಮಹೋತ್ಸವ

09:46 PM Mar 12, 2024 | Team Udayavani |

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುರಾಯರ 403ನೇ ಪಟ್ಟಾಭಿಷೇಕ ಮಹೋತ್ಸವ ಮಂಗಳವಾರ ಅದ್ಧೂರಿಯಾಗಿ ಜರುಗಿತು.

Advertisement

ಈ ಪ್ರಯುಕ್ತ ಮಠದ ಜಗಲಿ ಮೇಲೆ ಸ್ವರ್ಣಸಿಂಹಾಸನದಲ್ಲಿ ರಾಯರ ಮೂಲ ಪಾದುಕೆಗಳನ್ನು ಇರಿಸಿ ಶ್ರೀಮಠದ ಪೀಠಾಧಿ ಪತಿ ಶ್ರೀಸುಬುಧೇಂದ್ರ ತೀರ್ಥರು ಕನಕಾಭಿಷೇಕ, ಪುಷ್ಪಾಭಿಷೇಕ, ರತ್ನಾಭಿಷೇಕ ಸೇರಿ ವಿವಿಧ ಪೂಜೆ ನೆರವೇರಿಸಿದರು. ಬಳಿಕ ಚಿನ್ನದ ರಥದಲ್ಲಿ ಪಾದುಕೆಗಳನ್ನಿರಿಸಿ ಮಠದ ಪ್ರಾಂಗಣದಲ್ಲಿ ರಥೋತ್ಸವ ನೆರವೇರಿಸಲಾಯಿತು. ಈ ಪ್ರಯುಕ್ತ ಶ್ರೀಗಳು ರಾಯರ ಬೃಂದಾವನಕ್ಕೆ ವಿಶೇಷ ಪೂಜೆ, ಅಲಂಕಾರ ಸೇವೆ ನೆರವೇರಿಸಿದರು.

ಬೃಂದಾವನವನ್ನು ಚಿನ್ನದ ಪ್ರಭಾವಳಿ ಮೂಲಕ ಅಲಂಕರಿಸಲಾಗಿತ್ತು. ಶ್ರೀ ಮೂಲ ರಾಮದೇವರಿಗೆ ಸಂಸ್ಥಾನ ಪೂಜೆ ನೆರವೇರಿಸಿದರು.

ಈ ವೇಳೆ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ಪ್ರಹ್ಲಾದರಾಜರ ಅವತಾರವಾದ ಶ್ರೀ ರಾಘವೇಂದ್ರ ಸ್ವಾಮಿಗಳು ಪೀಠಾರೋಹಣವಾಗಿ ಇಂದಿಗೆ 403 ವರ್ಷಗಳಾಗಿದೆ. ಇದರ ಪ್ರಯುಕ್ತ ರಾಯರ ಮೂಲ ಪಾದುಕೆಗಳನ್ನು ಸ್ವರ್ಣ ಸಿಂಹಾಸನದಲ್ಲಿರಿಸಿ ಕನಕಾಭಿಷೇಕ ನೆರವೇರಿಸಲಾಗಿದೆ. ರಾಯರು ಭಕ್ತರ ಹೃದಯ ಸಿಂಹಾಸನದಲ್ಲಿ ಸದಾ ವಿರಾಜಮಾನರಾಗಿದ್ದಾರೆ. ಆಸ್ತಿಕರು ಮಾತ್ರವಲ್ಲದೆ ನಾಸ್ತಿಕರನ್ನೂ ಪರಿವರ್ತಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಮಠದ ಮುಂದಿನ ಯೋಗೀಂದ್ರ ಸಭಾಮಂಟಪದಲ್ಲಿ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next