Advertisement
ಗುರುಗಳು ಜ್ಞಾನಿಗಳಿರ್ತಾರ. ಆದರ, ಸಮಾಜಕ್ಕಾಗಿ ನಿಸ್ವಾರ್ಥ ಸೇವಾ ಮಾಡಿದವರು ಕಡಿಮಿ. ನಮ್ಮ ಗುರುಗಳು ಪುಟ್ಟರಾಜ ಗವಾಯಿಗಳು ತಮಗಾಗಿ ಏನನ್ನೂ ಬಯಸಲಿಲ್ಲ. ಇಂಥ ಗುರುಗಳು ಸಿಕ್ಕಿದ್ದು ಶಿಷ್ಯರಾದ ನಮ್ಮ ಭಾಗ್ಯ.
Related Articles
Advertisement
ನನಗ ಭಾಳ ಸಲ ಭೂಪಾಲಿ, ಶುದ್ಧ ಕಲ್ಯಾಣಿ, ದೇಸಕರ್ ಈ ಮೂರು ರಾಗದೊಳಗ ಸ್ವರ ಹಚ್ಚೋದರ ಬಗ್ಗೆ ಭಾಳ ಗೊಂದಲ ಆಗ್ತಿತ್ತು. ಅದಕ್ಕ ಗುರುಗಳ ಕಡೆ ಹೋಗಿ “ಅಜ್ಜಾರ, ನನಗ ಭೂಪಾಲಿ ಹಾಡಲಿಕ್ಕೆ ಯಾಕೊ ವಿಶ್ವಾಸ ಬರಲ್ತು’ ಅಂತ ಅಂದೆ. “ಇಷ್ಟು ವರ್ಷ ಆತು, ಇನ್ನ ಭೂಪ್ ಬರಂಗಿಲ್ಲ..? ಈಗ ನಿನಗ ಸಂಗೀತ ತಿಳಿಲಿಕತ್ತದ. ಸಂಗೀತ ಅಂದ್ರ ಹಂಗ. ಅಭ್ಯಾಸ ಮಾಡ್ತಾ ಮಾಡ್ತಾ 60ನೇ ವರ್ಷಕ್ಕ ಸ್ವರ ಹಚ್ಚೋದು ಗೊತ್ತಾಗ್ತದ’ ಅಂತ ಹೇಳಿದ್ರು.
“ನ ಗುರೋರ್ ಅಧಿಕಂ’ ಅಂತ ಸಂಸ್ಕೃತದೊಳಗ ಒಂದು ಮಾತು ಅದ. ಇದರರ್ಥ “ಗುರುವಿನ ಮುಂದ ಜಗತ್ತಿನ್ಯಾಗ ಯಾವುದೂ ದೊಡ್ಡದಲ್ಲ’. ಅವರು ನಮಗೆ ಮುಖ್ಯವಾಗಿ ಕಲಿಸಿದ್ದು ಸಂಸ್ಕಾರ. “ಆಚಾರ ಕಲಿರಿ, ಅಂದ್ರ ವಿಚಾರ ಹೊಳಿತದ. ಸದಾ ಒಳ್ಳೆದು ಮಾಡ್ರಿ…’ ಇದನ್ನ ಒತ್ತಿ ಒತ್ತಿ ಹೇಳ್ತಿದ್ರು. ನನ್ನ ಗುರುಗಳಿಂದನ ಇವತ್ತು ನಾನು ಸ್ವಾವಲಂಬಿ ಜೀವನ ಮಾಡಲಿಕತ್ತೇನಿ. ನನ್ನ ತಾಯಿ ನನಗ ಜನ್ಮ ಕೊಟ್ಟಳು, ಗುರು ಪುನರ್ಜನ್ಮ ಕೊಟ್ಟರು. ನನಗ ಅವರ ದೇವರು
-ಪಂ. ಎಂ. ವೆಂಕಟೇಶ್ ಕುಮಾರ್, ಖ್ಯಾತ ಗಾಯಕರು