Advertisement
ವೈಎನ್‌ಪಿ ಎಂದೇ ಕರೆಯಲಾಗುತ್ತಿದ್ದ ಅವರು ಬೇರೆ ಬೇರೆ ತರಗತಿಗಳಲ್ಲಿ ಇಂಗ್ಲಿಷ್, ಗಣಿತ, ವಿಜ್ಞಾನಗಳನ್ನು ಬೋಧಿಸಿದವರು. ಅವರ ಪಾಠಗಳನ್ನು ಕೇಳುವುದೇ ಒಂದು ರೋಚಕ ಅನುಭವ. ಒಮ್ಮೆ ತರಗತಿಯಲ್ಲಿ ಕೇಳಿದರೆ ಸಾಕಾಗ್ತಿತ್ತು. ಮನದಲ್ಲಿ ಗಟ್ಟಿಯಾಗಿ ಕುಳಿತು ಬಿಡ್ತಿತ್ತು. ಅವರ ಪಾಠವೆಂದರೆ ಒಂದು ನಿಗೂಢ ಲೋಕದೊಳಗೆ ಹೊಕ್ಕು ಬರುವ ಒಂದು ಬೆರಗಿನ ಅನುಭವ. ಎಲ್ಲಕ್ಕಿಂತ ನನಗೆ ಇಷ್ಟವಾದದ್ದು ಅವರ ಇಂಗ್ಲಿಷ್ ಪಾಠ. ನನ್ನ ಬಗ್ಗೆ ವಿಶೇಷ ಪ್ರೀತಿ ಇದ್ದ ಅವರು, ಬಿಡುವಿನ ವೇಳೆಯಲ್ಲಿ, ಸ್ಟಾಫ್ ರೂಮಿನಲ್ಲಿ ಇಂಗ್ಲಿಷ್ ಕವಿತೆಗಳನ್ನು ವಾಚನ ಮಾಡೋದು ಹೇಗೆ, ಅವುಗಳ ಲಯವೈವಿಧ್ಯ ವನ್ನು ಹಿಡಿಯೋದು ಹೇಗೆ, ಅವನ್ನು ಅರ್ಥ ಮಾಡಿಕೊಳ್ಳೋದು ಹೇಗೆ ಎಂಬುದನ್ನು ತಿಳಿಸಿ, ಮನದಟ್ಟು ಮಾಡಿಬಿಡ್ತಿದ್ದರು.
Advertisement
Guru Purnima Spcl: ವೈಎನ್‌ಪಿ ಎಂಬ ಅಪರೂಪದ ಶಿಕ್ಷಕರು
06:01 PM Jul 21, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.