Advertisement
ಮೇ 26ರಂದು ಸಂಜೆ ಸಾಂತಾಕ್ರೂಜ್ ಪೂರ್ವ ಬಿಲ್ಲವರ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮುಖವಾಣಿ ಅಕ್ಷಯ ಮಾಸಿಕದ ಮಾಜಿ ಗೌರವ ಪ್ರಧಾನ ಸಂಪಾದಕ ಎಂ. ಬಿ. ಕುಕ್ಯಾನ್ ಪ್ರಾಯೋಜಿತ ಶ್ರೀ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ-2018ನ್ನು ಸ್ವೀಕರಿಸಿ ಅವರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭಕ್ಕೆ ಚೊಕ್ಕಾಡಿ ದೀಪ ಬೆಳಗಿಸಿ ಚಾಲನೆಯನ್ನಿತ್ತರು. ಬಿಲ್ಲವರ ಮಹಾಮಂಡಲ ಅಧ್ಯಕ್ಷ ಜಯ ಸಿ. ಸುವರ್ಣ ಪ್ರಧಾನ ಅಭ್ಯಾಗತರಾಗಿದ್ದು ಚೊಕ್ಕಾಡಿ ಅವರಿಗೆ 25,000 ರೂ. ನಗದು, ಪ್ರಶಸ್ತಿ ಫಲಕ, ಸಮ್ಮಾನ ಪತ್ರದೊಂದಿಗೆ ಪ್ರಶಸ್ತಿಯನ್ನು ಪ್ರದಾನಿಸಿ ಅಭಿನಂದಿಸಿದರು.
ನನ್ನನ್ನು ಸಾಹಿತಿಯಾಗಿಸಿದ್ದೇ ಜಯ ಸುವರ್ಣರು. ಅವರಿಂದಾಗಿ ಸರಸ್ವತಿಯನ್ನು, ಸ್ವಂತಿಕೆಯಿಂದ ಲಕ್ಷ್ಮೀಯನ್ನು ಒಲಿಸಿಕೊಂಡಿ ದ್ದೇನೆ. ಅಕ್ಷಯದೊಂದಿಗೆ ನಾನೂ ಬೆಳೆದಿದ್ದೇನೆ. ನಾರಾಯಣ ಗುರುಗಳಿಂದ ಪ್ರೇರಿತನಾಗಿ ನಾನು ಬಹಳಷ್ಟು ಸಂಪಾದಿಸಿದ್ದೇನೆ. ಅದ್ದ ರಿಂದ ಈ ಪ್ರಶಸ್ತಿಯನ್ನು ನಾನು ಗುರು ಗಳಿಗೆ ಸಮರ್ಪಿಸಿದ್ದೇನೆ ಎಂದು ಪ್ರಶಸ್ತಿ ಯ ಪ್ರಾಯೋಜಕ ಎಂ. ಬಿ. ಕುಕ್ಯಾನ್ ಅಭಿಪ್ರಾಯಿಸಿದರು. ಈ ಬಾರಿಯೂ ಯೋಗ್ಯ ವ್ಯಕ್ತಿಗೆ ಈ ಪ್ರಶಸ್ತಿ ಸಂದಿದೆ ಎಂದ ಸುನೀತಾ ಶೆಟ್ಟಿ ಅವರು, ಚೊಕ್ಕಾಡಿಯವರ ಬರಹ, ಕವಿತೆಗಳ ಬಗ್ಗೆ ಮೆಲುಕು ಹಾಕಿದರು. ಅಂತೆಯೇ ಎಂ. ಬಿ. ಕುಕ್ಯಾನ್ ಬಗ್ಗೆ ಅಲೆವೂರು ಬರೆದ ಕೃತಿಯೂ ಶ್ಲಾಘನೀಯವಾಗಿದೆ. ಸಮಾಜದಲ್ಲಿ ಸರ್ವೋತ್ಕೃಷ್ಟ ಸೇವೆಗೈದ ಮಹಾನೀಯರನ್ನು ಗುರುತಿಸುವ ಅಗತ್ಯವಿದೆ ಎಂದು ನುಡಿದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಬಿಲ್ಲವರ ಭವನದಲ್ಲಿ ಈ ಹಿಂದೆ ಸೇವಾನಿರತರಾಗಿದ್ದು, ಇತ್ತೀಚೆಗೆ ಮುಂಬಯಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಡಾ| ಮೋಹನ್ ಬೊಳ್ಳಾರು ಅವರನ್ನು ಅಭಿನಂದಿಸಿ ಗೌರವಿಸಿದರು.
ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾ ದ ನ್ಯಾಯವಾದಿ ರಾಜ ವಿ. ಸಾಲ್ಯಾನ್, ಶಂಕರ ಡಿ. ಪೂಜಾರಿ, ಡಾ| ಯು. ಧನಂಜಯ ಕುಮಾರ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ. ಕಾರ್ಕಳ, ಮಹಿಳಾ ವಿಭಾಗಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಮತಾ ಆರ್. ನಾಯಕ್ ಪ್ರಾರ್ಥನೆಗೈದರು. ಅಸೋಸಿಯೇಶನ್‌ನ ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಜಯರಾಮ ಜಿ. ನಾಯಕ್ ಪುರಸ್ಕೃತರನ್ನು ಪರಿಚಯಿಸಿದರು. ಅಕ್ಷಯ ಸಹ ಸಂಪಾದಕ ಹರೀಶ್ ಹೆಜ್ಮಾಡಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ ಸತೀಶ್ ಎನ್.ಬಂಗೇರ ವಂದಿಸಿದರು.
Related Articles
Advertisement
ಗುರುನಾರಾಯಣ ಅವರ ತತ್ವಾನುಸಾರ ಮುನ್ನಡೆಯುವ ಬಿಲ್ಲವ ಸಮಾಜ ಗುರುಗಳ ಅನುಗ್ರಹದಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡು ಅರ್ಹ ಸಾಹಿತಿಗಳನ್ನು ಗುರುತಿಸಿ ಗೌರವಿಸುತ್ತಿದೆ. ಇಂತಹ ಪ್ರಶಸ್ತಿ ಒಂದು ಉತ್ತಮ ಮತ್ತು ಆದರ್ಶವಾದ ಕಾಯಕವಾಗಿದೆ. ಭವಿಷ್ಯತ್ತಿನುದ್ದಕ್ಕೂ ಈ ಪ್ರಶಸ್ತಿ ಯೋಗ್ಯವ್ಯಕ್ತಿಗಳಿಗೆ ಪ್ರಾಪ್ತಿಯಾಗಲಿ. ಇದು ಯುವ ಪೀಳಿಗೆಯೂ ಮಾದರಿಯಾಗಬೇಕು. ಬಿಲ್ಲವ ಸಂಸ್ಥೆಯೂ, ಸಮಾಜವು ಸಾಹಿತ್ಯಕವಾಗಿಯೂ ಸಾಮರಸ್ಯವಾಗಿ ಮುನ್ನಡೆಯುತ್ತಿರಲಿ – ನಿತ್ಯಾನಂದ ಡಿ. ಕೋಟ್ಯಾನ್ ಚಿತ್ರ-ವರದಿ : ರೋನ್ಸ್ ಬಂಟ್ವಾಳ್