Advertisement

ಗುರುಗ್ರಾಮ ಬಾಲಕನ ಹತ್ಯೆ: ಸರಕಾರಗಳಿಗೆ ಸುಪ್ರೀಂ ನೋಟಿಸ್‌

08:10 AM Sep 12, 2017 | Team Udayavani |

ಗುರುಗ್ರಾಮ/ಹೈದರಾಬಾದ್‌: ಹರ್ಯಾಣದ ಗುರುಗ್ರಾಮದಲ್ಲಿ 2ನೇ ತರಗತಿ ಬಾಲಕನ ಕತ್ತು ಸೀಳಿ ಹತ್ಯೆಗೈದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೋರಿ ಆತನ ತಂದೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಪ್ರಕರಣ ಸಂಬಂಧ 3 ವಾರಗಳೊಳಗೆ ವರದಿ ನೀಡುವಂತೆ ಸೂಚಿಸಿ ಕೇಂದ್ರ ಸರಕಾರ, ಹರ್ಯಾಣ ಸರಕಾರ ಹಾಗೂ ಸಿಬಿಎಸ್‌ಇಗೆ ನೋಟಿಸ್‌ ಜಾರಿ ಮಾಡಿದೆ. ಇದೇ ವೇಳೆ, ರ್ಯಾನ್‌ ಇಂಟರ್‌ನ್ಯಾಷನಲ್‌ ಶಾಲೆಯ ಸಿಇಒ ಮತ್ತು ನಿರ್ದೇಶಕರನ್ನು ಪೊಲೀಸರು ಬಂಧಿಸಿದ್ದಾರೆ. 

Advertisement

ಟಾಯ್ಲೆಟ್‌ನಲ್ಲಿ ನಿಲ್ಲುವ ಶಿಕ್ಷೆ: ಗುರುಗ್ರಾಮ ಘಟನೆ ಆಕ್ರೋಶ ಹುಟ್ಟಿಸಿರುವ ನಡುವೆಯೇ ಹೈದರಾಬಾದ್‌ನ ಶಾಲೆಯೊಂದರಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಸಮವಸ್ತ್ರ ಧರಿಸಿಕೊಂಡು ಬರಲಿಲ್ಲ ಎಂದು 5ನೇ ತರಗತಿ ವಿದ್ಯಾರ್ಥಿನಿಯನ್ನು ಹುಡುಗರ ಟಾಯ್ಲೆಟ್‌ನಲ್ಲಿ ನಿಂತುಕೊಳ್ಳುವ ಶಿಕ್ಷೆಯನ್ನು ನೀಡಲಾಗಿದೆ. ಘಟನೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹೆತ್ತವರು ಮತ್ತು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next