ಕೊಟ್ಟೂರು: ಕೊಟ್ಟೂರು ಪಟ್ಟಣದ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಲಕ್ಷದೀಪೋತ್ಸವ ನಾಳೆ (ಡಿಸೆಂಬರ್ 20) ರಂದು ವಿಜೃಂಭಣೆಯಿಂದ ಜರಗಲಿದೆ.
ಮೂರನೇ ಭೀತಿಯಲ್ಲಿ ಓಮೈಕ್ರಾನ್ ರಾಜ್ಯದಲ್ಲಿ ಆವರಿಸಿರುವುದರಿಂದ ಸರ್ಕಾರದ ನಿಯಮಾವಳಿ ಪ್ರಕಾರ ಶ್ರೀ ಸ್ವಾಮಿಯ ಲಕ್ಷದೀಪೋತ್ಸವ ಜನಸ್ತೋಮ ಸೇರಿದಂತೆ ಅತಿ ಸರಳ ರೀತಿಯಲ್ಲಿ ಜರುಗಿಸಬೇಕೆಂದು ಹೇಳಿದರು.
ಶ್ರೀ ಶಕೆ 1941 ನೇ ವಿಕಾರಿನಾಮ ಸಂವತ್ಸರ ಮಾರ್ಗಶಿರ ಮಾಸ ಬಹುಳ ಪಂಚಮಿಯಂದು ಪಂಚಮಿಯಂದು ಹಿರೇಮಠ ದಿಂದ ಗಚ್ಚಿನಮಠದ ವರೆಗೆ ಅಡ್ಡಪಲ್ಲಕ್ಕಿಯಲ್ಲಿ ಶ್ರೀ ಸ್ವಾಮಿಯ ಮೆರವಣಿಗೆ ಪ್ರತಿ ಸೋಮವಾರ ಗುರುವಾರದಂದು ಜರುಗುತ್ತದೆ ಈ ಕಾರ್ಯಕ್ರಮ ದೀಪಾವಳಿ ಅಮಾವಾಸ್ಯೆ ಮರುದಿನದಿಂದ ಪ್ರಾರಂಭವಾಗಿ ಶ್ರೀ ಸ್ವಾಮಿಯ ಕಾರ್ತಿಕೋತ್ಸವ ಕೊನೆಯ ದಿನದಂದು ಶ್ರೀ ಬೆಳ್ಳಿ ರಥೋತ್ಸವ ದೊಂದಿಗೆ ಕೊನೆಗೊಳ್ಳುತ್ತದೆ ಆನಂತರ ಶ್ರೀ ಸ್ವಾಮಿಯ ರಥೋತ್ಸವ ಇಂದು ಸೋಮವಾರದಂದು ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದವರೆಗೆ ವಿಜೃಂಭಣೆಯಿಂದ ಜರುಗುತ್ತದೆ ಈ ಬೆಳ್ಳಿ ರಥೋತ್ಸವಕ್ಕೆ ಪ್ರತಿವರ್ಷವೂ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯ ಮಾಲೆಯನ್ನು ಧರಿಸಿ ಭಕ್ತಾದಿಗಳು ವಿವಿಧ ಕಡೆಯಿಂದ ಆಗಮಿಸಿ ದರ್ಶನ ಪಡೆದುಕೊಡು ಹೋಗುತ್ತಾರೆ.
ಆನಂತರ ಪ್ರತಿವರ್ಷದಂತೆ ಈ ವರ್ಷವೂ ಬದಿ ಬೀದಿಗಳಲ್ಲಿ ದೀಪವನ್ನು ಅಲಂಕರಿಸಿ ಭಕ್ತಾದಿಗಳು ಸರಳ ರೀತಿಯಾಗಿ ಆಚರಣೆ ವೃತ ಎಣ್ಣೆಹಾಕಿ ಪೋಲು ಮಾಡದೆ ಎಣ್ಣೆ ಹಾಕಿರುವ ಹಣತೆಗಳನ್ನು ಬೆಳಗಿಸಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಂಡು ಶ್ರೀ ಸ್ವಾಮಿಯ ದರ್ಶನ ಪಡೆದು ಮುಂದಾಗಬೇಕು ಎಂದು ಪ್ರಧಾನ ಧರ್ಮಕರ್ತರಾದ ಸಿ .ಹೆಚ್ ಎಂ.ಗಂಗಾಧರ್ ಅವರು ತಿಳಿಸಿದರು.
ಪೊಲೀಸ್ ಬಿಗಿ ಭದ್ರತೆ ಒದಗಿಸಿದ್ದು ಒಟ್ಟು 130 ರಿಂದ 150 ವರಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ ಹಾಗೂ ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದರೆ ಠಾಣೆಗೆ ದೂರು ನೀಡುವಂತೆ ಈ ಸಂದರ್ಭದಲ್ಲಿ ಹೇಳಿದರು.