Advertisement
ಶಿಕ್ಷಕರಿಗೆ ಸುಸಜ್ಜಿತವಾದ ಗುರುಭವನ ನಿರ್ಮಾಣ ಮಾಡಬೇಕು ಎಂದು ಕನಸು ಕಂಡ ಸಾವಿರಾರು ಮಂದಿ ಶಿಕ್ಷಕರು ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಅನೇಕ ಅಧಿಕಾರಿ, ಶಾಸಕ, ಸಚಿವರು, ಸ್ಥಳೀಯ ಜನ ಪ್ರತಿನಿಧಿಗಳು ಸಾಕಷ್ಟು ಭರವಸೆಗಳ ನೀಡಿದ್ದಾರೆ. ಆದರೂ, ಗುರುಭವನ ನಿರ್ಮಾಣವಾಗದಿರುವುದು ಶಿಕ್ಷಕರ ಬೇಸರಕ್ಕೆ ಕಾರಣವಾಗಿದೆ.
Related Articles
Advertisement
ಮತ್ತೂಂದು ಶಿಲಾನ್ಯಾಸ: ಕಳೆದ 2022 ಡಿಸೆಂಬರ್ ನಲ್ಲಿ ಕೋಲಾರ ಗುರುಭವನಕ್ಕೆ ಇದೇ ಕೊನೆಯ ಶಿಲಾನ್ಯಾಸವಾಗಬೇಕೆಂದು ಆಗಿನ ಶಾಸಕ, ಸಂಸದ, ಉಸ್ತುವಾರಿ ಮಂತ್ರಿ, ವಿಧಾನಸಪರಿಷತ್ ಸದಸ್ಯರು ಮತ್ತೂಮ್ಮೆ ಗುದ್ದಲಿಪೂಜೆ ನೆರವೇರಿಸಿದ್ದರು. ಯಥಾ ಪ್ರಕಾರ ಸಾಕಷ್ಟು ಅನುದಾನವನ್ನು ಘೋಷಿಸಿದ್ದರು. ಇದಕ್ಕಾಗಿ ಹಳೆಯ ನಿವೇಶನ ಬದಲಿದೆ ಅದೇ ಆವರಣದಲ್ಲಿರುವ ಮತ್ತೂಂದು ಹಳೆಯ ಶಾಲಾ ಕಟ್ಟಡವ ನ್ನು ಕೆಡವಿ ನಿವೇಶನ 145-90 ನಿವೇಶನ ಗುರುತಿಸಲಾಯಿತು. ಇದೇ ನಿವೇಶನದಲ್ಲಿ 79-130 ಅಡಿಯಲಿ ನಿವೇಶನವನ್ನು ಬಹು ಅಂತಸ್ತುಗಳಲ್ಲಿ ನಿರ್ಮಾಣ ಮಾಡಬೇಕೆಂದು ನಿರ್ಧರಿಸಲಾಗಿತ್ತು. ಆದರೂ, ಕಾಮಗಾರಿ ಆರಂಭವಾಗಲೇ ಇಲ್ಲ.
ಗುಂಪುಗಾರಿಕೆ: ಮೂರು ದಶಕಗಳಿಂದಲೂ ಶಿಕ್ಷಕರ ಸಂಘಗಳಲ್ಲಿನ ಗುಂಪುಗಾರಿಕೆ, ಶಿಕ್ಷಕರ ದಿನಾಚರಣೆ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಬಣದ ಹೆಸರು ಇರಬೇಕೆಂಬ ವಿಚಾರಕ್ಕೆ ಶಿಕ್ಷಕ ಪ್ರತಿನಿಧಿಗಳು ನೀಡಿದಷ್ಟು ಗಮನವನ್ನು ಶಿಕ್ಷಕರ ಭವನ ಕಾಮಗಾರಿ ಆರಂಭಿಸಲು ನೀಡಿದ್ದರೆ ಈ ವೇಳೆಗಾಗಲೇ ಶಿಕ್ಷಕರ ಭವನ ಪೂರ್ಣ ಗೊಳ್ಳುತ್ತಿತ್ತು ಎಂಬ ಭಾವನ ಶಿಕ್ಷಕರ ವಲಯದಲ್ಲಿದೆ. ಗುರುಭವನ ನಿರ್ಮಾಣ ಮಾಡದಿದ್ದರೆ ಶಿಕ್ಷಕರ ದಿನಾಚರಣೆಗೆ ಬರುವುದಿಲ್ಲವೆಂದು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹಿಂದಿನ ವರ್ಷದ ಕಾರ್ಯಕ್ರಮಕ್ಕೂ ಗೈರಾಗಿದ್ದರು. ಈಗ ಶಿಕ್ಷಕರ ಸಂಘದ ಪದಾಧಿಕಾರಿಗಳು ಕಾಮಗಾರಿ ಆರಂಭಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ನಿರ್ಮಿತಿ ಕೇಂದ್ರದ ಪ್ಲ್ರಾನ್ ಅಂತಿ ಮಗೊಂಡ ನಂತರ ಕಾಮಗಾರಿಯನ್ನು ಆರಂಭಿಸುತ್ತೇವೆ ಎನ್ನುತ್ತಿದ್ದಾರೆ. ಆದರೆ, ಈಗ ಆಗಿರುವ ವಿಳಂಬವನ್ನು ಗಮನಿಸಿದ ಶಿಕ್ಷಕರ ವಲಯವು ಗುರುಭವನ ಕಾಮಗಾರಿ ಕುರಿತು ಆಸಕ್ತಿ ಕಳೆದುಕೊಂಡಿದೆ.
ಈಗಿನ ತೊಡಕು ಏನು?: ಹಿಂದಿನ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಶಿಕ್ಷಕರ ಭವನದ ಕಾಮಗಾರಿ ಯನ್ನು ಲೋಕೋಪಯೋಗಿಇಲಾಖೆ ಮೂಲಕ ಆರಂಭಿಸಬೇಕೆಂದು ತಾಕೀತು ಮಾಡಿದ್ದರು. ಆದರೆ, ಲೋಕೋಪಯೋಗಿ ಇಲಾಖೆ 2 ಕೋಟಿ ರೂ.ಮುಂಗಡವಾಗಿ ಕೊಟ್ಟರೆ ಮಾತ್ರವೇ ಕಾಮಗಾರಿ ಆರಂಭಿ ಸುವುದಾಗಿ ಷರತ್ತು ಹಾಕಿತ್ತು. ಇದರಿಂದ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲು ನಿರ್ಧರಿಸಲಾಯಿತು. ಇದೀಗ ನಿರ್ಮಿತಿ ಕೇಂದ್ರವು ಪ್ಲ್ರಾನ್ ತಯಾರಿಸುವ ಹಂತದಲ್ಲಿದೆ. ಪ್ಲ್ರಾನ್ ತಯಾರಾದ ನಂತರ ಸಂಸದ ನಿಧಿಯಿಂದ ಘೋಷಿಸಿರುವ 50 ಲಕ್ಷ ರೂ. ಬಳಸಿಕೊಂಡು ಕಾಮಗಾರಿ ಆರಂಭಿಸುವ ಚಿಂತನೆಯಲ್ಲಿ ಶಿಕ್ಷಕರ ಸಂಘವಿದೆ.
ಶಿಕ್ಷಕರ ಸಂಘದ ಪದಾಧಿಕಾರಿಗಳು ಗುರುಭವನ ನಿರ್ಮಾಣ ಮಾಡಲು ಆಸಕ್ತಿ ತೋರಿಸುತ್ತಿದ್ದು, ಪಿಡಬ್ಲೂಡಿ ಇಲಾಖೆಯಿಂದ ಕಾಮಗಾರಿ ಜವಾಬ್ದಾರಿಯು ನಿರ್ಮಿತಿ ಕೇಂದ್ರಕ್ಕೆ ವರ್ಗಾಯಿಸಲಾಗಿದೆ. ಪ್ಲ್ರಾನ್ ತಯಾರಿಸಲಾಗುತ್ತಿದ್ದು, ಫ್ಲ್ಯಾನ್ ಕೈಗೆ ಸಿಕ್ಕ ನಂತರ ಕಾಮಗಾರಿ ಆರಂಭಿಸಲಾಗುವುದು. ಗುರುಭವನಕ್ಕೆ ಇದ್ದ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ಶ್ರಮಿಸಿದ್ದೇವೆ. – ಅಪ್ಪೇಗೌಡ, ಅಧ್ಯಕ್ಷರು, ಜಿಲ್ಲಾ ಪ್ರಾಥಮಿಕಶಾಲಾ ಶಿಕ್ಷಕರ ಸಂಘ, ಕೋಲಾರ.
ಕೋಲಾರ ಜಿಲ್ಲೆಯ ಶಿಕ್ಷಕರ ಅಗತ್ಯಕ್ಕೆ ತಕ್ಕಂತೆ ಭವನವನ್ನು 3 ಅಂತಸ್ತುಗಳಲ್ಲಿ ನಿರ್ಮಾಣ ಮಾಡಲು ನೀಡಿರುವ ಸಲಹೆ ಸೂಚನೆಗಳ ಪ್ರಕಾರ ಪ್ಲ್ರಾನ್ ತಯಾರಾಗು ತ್ತಿದೆ. ನೆಲ ಹಂತಸ್ತಿನಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೂ ಅವಕಾಶ ಕಲ್ಪಿಸಿ ಸಂಘದ ಆದಾಯ ಉತ್ಪಾದನೆಗೂ ಒತ್ತು ನೀಡಲಾಗುತ್ತಿದೆ. – ನಾಗರಾಜ್, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,ಕೋಲಾರ
– ಕೆ.ಎಸ್.ಗಣೇಶ್