Advertisement
1. ಭಾಳ ಒಳ್ಳೇವ್ರು ನಮ್ ಮಿಸ್ಸು
ಏನ್ ಹೇಳಿದ್ರೂ ಎಸ್ಸೆಸ್ಸು,
ನಗ್ತಾ ನಗ್ತಾ ಮಾತಾಡ್ತಾರೆ
ಸ್ಕೂಲಿಗೆಲ್ಲಾ ಫೇಮಸ್ಸು ಜಾಣಮರಿ ಅಂತಾರೆ
ಚಾಕ್ಲೇಟಿದ್ರೆ ಕೊಡ್ತಾರೆ,
ಬೆನ್ನು ತಟ್ಟಿ ಕೆನ್ನೆ ಸವರಿ
ಬೆಣ್ಣೆ ಕಂದ ಅಂತಾರೆ !
ಆಟಕ್ ಬಾ ಅಂತಾರೆ
ಆಟದ್ ಸಾಮಾನ್ ಕೊಡ್ತಾರೆ,
ಗೊತ್ತಿಲ್ದಂಗೆ ಆಟದ್ ಜೊತೆ
ಪಾಠಾನೂ ಕಲಿಸ್ತಾರೆ!
ನಮೊjತೇನೇ ಆಡ್ತಾರೆ
ಕೈ ಕೈ ಹಿಡಿದು ಹಾಡ್ತಾರೆ,
ಕೋತಿ ಕರಡಿ ಕಥೆ ಹೇಳಿ
ಸಿಕ್ಕಾ ಪಟ್ಟೆ ನಗಿಸ್ತಾರೆ.
Related Articles
ನಮ್ ಮಿಸ್ಸಂಥ ಮಿಸ್ಸಿಲ್ಲ.
ಅಮ್ಮನ್ ಹಾಗೇ ಅ ಅವ್ರುನೂ
ಬಿಟ್ ಬರಕ್ಕೇ ಮನಸ್ಸಿಲ್ಲ
– ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
Advertisement
2. ಸ್ವಾಮಿ ದೇವನೆ
ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ !ಪ್ರಮೇದಿಂದಲೇ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೇ!!
ಸ್ವಾಮಿ ದೇವನೆ
ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ!!
ಸ್ವಾಮಿ ದೇವನೆ
ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ
ಮನೆಯ ಮಕ್ಕಳ ಐಕ್ಯಗಾನವ ಲಾಲಿಸಿ ಪರಿಪಾಲಿಸೈ
ಸ್ವಾಮಿ ದೇವನೆ
– ಸೋಸಲೆ ಅಯ್ನಾ ಶಾಸ್ತ್ರಿಗಳು 3. ತಾಯೆ ಶಾರದೆ
ತಾಯೆ ಶಾರದೆ ಲೋಕ ಪೂಜಿತೆ ಜ್ಞಾನ ದಾತೆ ನಮೋಸ್ತುತೇ.
ಪ್ರೇಮದಿಂದಲಿ ಸಲುಹು ಮಾತೇ ನೀಡು ಸನ್ಮತಿ ಸೌಖ್ಯ ದಾತೆ
ತಾಯೆ ಶಾರದೆ
ಅಂಧಕಾರವ ಓಡಿಸೂ, ಜ್ಞಾನ ಜ್ಯೋತಿಯ ಬೆಳಗಿಸು
ಹೃದಯ ಮಂದಿರದಲ್ಲಿ ನೆಲೆಸು ಚಿಂತೆಯಾ ಅಳಿಸು, ಶಾಂತಿಯ ಉಳಿಸು
ತಾಯೆ ಶಾರದೆ
ನಿನ್ನ ಮಡಿಲಿನ ಮಕ್ಕಳಮ್ಮ, ನಿನ್ನ ನಂಬಿದ ಕಂದರಮ್ಮ
ನಿನ್ನ ಕರುಣೆಯ ಬೆಳಗಲಮ್ಮ ಬಾಳನೂ ಬೆಳಗಮ್ಮಾ ನಮ್ಮ ಕೋರಿಕೆ ಆಲಿಸಮ್ಮಾ,
ತಾಯ ಶಾರದೆ
ಒಳ್ಳೆ ಮಾತುಗಳಾಡಿಸು, ಒಳ್ಳೆ ಕೆಲಸವ ಮಾಡಸು
ಒಳ್ಳೆಯ ದಾರಿಯ ನಮ್ಮ ನಡೆಸು, ವಿದ್ಯೆಯಾ ಕಲಿಸು ಆಸೆ ಪೂರೈಸು
ತಾಯಿ ಶಾರದೆ
-ಚಿ. ಉದಯಶಂಕರ್ 4. ನಿನ್ನೊಲುಮೆ ನನಗಿರಲಿ ತಂದೆ.. ನಿನ್ನೊಲುಮೆ ನಮಗಿರಲಿ ತಂದೆ
ಕೈ ಹಿಡಿದು ನೀ ನಡೆಸು ಮುಂದೆ ತಾನುರಿದು ಜಗಕೆಲ್ಲ ಜೂತಿಯನು ನೀಡುವ
ದೀಪದೊಳು ನೀ ಎನ್ನ ಅನಗೊಳಿಸು ತಂದೆ
ಕಾನನದ ಸುಮವೊಂದು ಸೌರಭ ತಾ ಸೂಸಿ
ಸಫಲತೆಯ ಪಡೆವಂತೆ ಮಾಡೆನ್ನ ತಂದೆ.
ಸರಿಯು ಸಂಪದ ಬೇಡ, ಯಾವ ವೈಭವ ಬೇಡ
ನಿನ್ನ ಕರುಣೆಯು ಒಂದೆ ಸಾಕೆನಗೆ ತಂದೆ ನಿನ್ನ ಈ ಮಕ್ಕಳನು ಪ್ರೇಮದಲಿ ನೀ ನೋಡು
ಈ ಮನೆಯು ಎಂದೆಂದೂ ನಗುವಂತೆ ನೀ ಮಾಡು
ನಂಬಿದರೆ ಭಯವಿಲ್ಲ, ನಂಬದಿರೆ ಬಾಳಿಲ್ಲ ಅಂಬಿನೆ ನೀ ನಡೆಸು ಈ ಬಾಳ ನೌಕೆ
ಯಾವ ನೋವೇ ಬರಲಿ ಎದೆ ಗುಂದದಿರಲಿ, ಸತ್ಯ ಮಾರ್ಗವೆ ನಡೆವ ಶಕ್ತಿ ಕೊಡು ತಂದೆ
– ಆರ್.ಎನ್. ಜಯಗೋಪಾಲ್