Advertisement
ಉಡುಪಿ ದೊಡ್ಡಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ರವಿವಾರ ಗುರುಪೂರ್ಣಿಮೆ ಅಂಗವಾಗಿ ನಡೆದ ಗುರುವಂದನ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಸರ್ವರಿಗೂ ಜೀವನದಲ್ಲಿ ಗೆಲ್ಲಬೇಕೆಂಬ ಹೆಬ್ಬಯಕೆ ಇದ್ದೇ ಇರುತ್ತದೆ. ಆದರೆ ಬಯಸಿದಂತೆ ಎಲ್ಲವೂ ನಡೆಯದೇ ಹೋದಾಗ ದುಃಖವಾಗುವುದು ಸಹಜ. ಹಾಗಾದರೆ ನಾವೆಲ್ಲಿ ತಪ್ಪಿದ್ದೇವೆ? ಎಂದು ಅವಲೋಕಿಸಿ ಸುಗಮ ಹಾದಿಯನ್ನು ಸೃಷ್ಟಿಸಿಕೊಂಡು ದಿಟ್ಟ ಗುರಿಯೊಂದಿಗೆ ಮುನ್ನಡೆಯಲು ಗುರುವಿನ ಮಾರ್ಗದರ್ಶನ ಅತೀ ಮುಖ್ಯ. ಈ ನೆಲೆಯಲ್ಲಿ ಗುರುವಿನಲ್ಲಿ ಸಂಪೂರ್ಣಭರವಸೆಯಿಟ್ಟು ಅವರ ಆಂತರ್ಯಶಕ್ತಿ ಯನ್ನು ಗೌರವಿಸಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಗುರೂಜೀ ತಿಳಿಸಿದರು. ಸೌಹಾರ್ದ ಕೋ-ಆಪ್. ಸೊಸೈಟಿ ನಿರ್ದೇಶಕಿ ಮೀನಾ ದೇವೇಂದ್ರ ಅವರು ಮಾತನಾಡಿ, ಶ್ರೀ ದುರ್ಗಾ ಆದಿಶಕ್ತಿಯಿಂದ ಅನುಗ್ರಹಿತರಾದ, “ಮಾತನಾಡುವ ಶಕ್ತಿ ಎನಿಸಿದ’ ಶ್ರೀ ರಮಾನಂದ ಗುರೂಜೀ ಅವರ ಆಶೀರ್ವಾದ ನಂಬಿದ ಎಲ್ಲರಿಗೂ ಶ್ರೀರಕ್ಷೆಯಾಗಲಿದೆ ಎಂದರು. ಇದೇ ಸಂದರ್ಭ ಭಕ್ತರು ಗುರೂಜೀ ಅವರಿಗೆ ಗುರುವಂದನೆ ಸಲ್ಲಿಸಿದರು.
Related Articles
Advertisement
ಗುರುಪೂರ್ಣಿಮಾ ಪ್ರಯುಕ್ತ ಮನ್ಯುನಾಮಕ ಶ್ರೀ ಲಕ್ಷ್ಮೀನರಸಿಂಹ ಯಾಗ, ನವಗ್ರಹ ಶಾಂತಿ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು.