Advertisement
ಅವರು ಸೆ. 2ರಂದು ಬೊರಿವಲಿ ಪಶ್ಚಿಮದ ಪ್ರಭೋಧನ್ಕರ್ ಠಾಕ್ರೆ ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಬೊರಿವಲಿ-ದಹಿಸರ್ ಸ್ಥಳೀಯ ಸಮಿತಿಯ ಬ್ರಹ್ಮಶ್ರೀ ನಾರಾಯಣ ಗುರುಗಳ ಗುರು ಮೂರ್ತಿ ಪ್ರತಿಷ್ಠಾಪನೆಯ 9ನೇ ವಾಷಿರಕ ದಿನಾಚರಣೆಯ ನಿಮಿತ್ತ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ಮಾತನಾಡುತ್ತಿದ್ದರು.
Related Articles
Advertisement
ಕಾರ್ಯಕ್ರಮದ ಪ್ರಾರಂಭದಲ್ಲಿ ಮಹಿಳಾ ಸದಸ್ಯರು ನಾರಾಯಣ ಗುರು ಸ್ಮರಣೆಯ ಪ್ರಾರ್ಥನೆ ಹಾಡಿದರು. ಅತಿಥಿ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಘದ ಕಾರ್ಯಾಧ್ಯಕ್ಷ ಎಂ. ಸುಂದರ್ ಪೂಜಾರಿ ಸ್ವಾಗತಿಸಿದರು. ಗೌರವ ಕೋಶಾಧಿಕಾರಿ ಶ್ರೀಧರ್ ವಿ. ಬಂಗೇರ, ಜೊತೆ ಕಾರ್ಯದರ್ಶಿ ಅಶೋಕ್ ಜಿ. ಸಾಲ್ಯಾನ್, ಉಪ ಕಾರ್ಯಾಧ್ಯಕ್ಷ ಕೃಷ್ಣರಾಜ್ ಸುವರ್ಣ ಗಣ್ಯರನ್ನು ಪರಿಚಯಿಸಿದರು.
ಉಪಾಧ್ಯಕ್ಷರಾದ ಶಂಕರ್ ಡಿ. ಪೂಜಾರಿ, ಪುರುಷೋತ್ತಮ ಕೋಟ್ಯಾನ್, ಕೇಂದ್ರ ಕಚೇರಿಯ ಗೌರವ ಕೋಶಾಧಿಕಾರಿ ಮಹೇಶ್ ಕಾರ್ಕಳ ಅತಿಥಿ ಗಣ್ಯರನ್ನು ಗೌರವಿಸಿದರು.
ವೇದಿಕೆಯಲ್ಲಿ ಕೇಂದ್ರ ಕಚೇರಿಯ ಜೊತೆ ಕಾರ್ಯದರ್ಶಿ ಪ್ರೇಮನಾಥ ಪಿ. ಕೋಟ್ಯಾನ್, ಭಾರತ್ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕರಾದ ದಾಮೋದರ್ ಸಿ. ಕುಂದರ್, ಮಾಜಿ ಕಾರ್ಯಾಧ್ಯಕ್ಷ ಜಿ. ಎಂ. ಕೋಟ್ಯಾನ್ ಉಪಸ್ಥಿತರಿದ್ದರು.
ಜೊತೆ ಕೋಶಾಧಿಕಾರಿ ಸುರೇಶ್ ಡಿ. ಸನಿಲ್, ಕಾರ್ಯಕಾರಿ ಸಮಿತಿಯ ದಯಾನಂದ ಪೂಜಾರಿ, ಆರ್. ಎಸ್. ಕೋಟ್ಯಾನ್, ವತ್ಸಲಾ ಕೆ. ಪೂಜಾರಿ, ಎಸ್. ಚಂದ್ರಹಾಸ್ ಸುವರ್ಣ, ಪಿ. ಎ. ಪೂಜಾರಿ, ಭಾರತಿ ಅಮೀನ್, ರಾಘು ಜಿ. ಪೂಜಾರಿ, ರತ್ನ ಯು. ಪೂಜಾರಿ ಸಹಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಮಿತಿಯ ಸದಸ್ಯರಿಂದ ಹಾಸ್ಯ ಪ್ರಹಸನ ಹಾಗೂ ಕೇವೀಸ್ ಎಂಟರ್‌ಟೈನ್‌ಮೆಂಟ್ ಮುಂಬಯಿ ಅವರಿಂದ “ಈ ರಾತ್ರೆಗ್ ಪಗೆಲ್Y ಯಾನ್’ ತುಳು ಹಾಸ್ಯಮಯ ನಾಟಕವು ಕೃಷ್ಣರಾಜ್ ಶೆಟ್ಟಿ ಮುಂಡ್ಕೂರು ನಿರ್ದೇಶನದಲ್ಲಿ ಪ್ರದರ್ಶಿಸಲ್ಪಟ್ಟಿತು.
ಅಧಿಕ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಿದರು. ಕೇಂದ್ರ ಕಚೇರಿಯ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಕಾರ್ಯದರ್ಶಿ ಮೋಹನ್ ಬಿ. ಅಮೀನ್ ವಂದಿಸಿದರು.
ಬಿಲ್ಲವರು ಪ್ರತಿ ಸಂದರ್ಭದಲ್ಲೂ ಉತ್ತಮ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ತಮ್ಮ ಸಂಘಟನಾ ಶಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ. ಇದೇ ಮನೋಭಾವದಿಂದ ನಾವೆಲ್ಲರೂ ಒಗ್ಗಟ್ಟನ್ನು ಬಲಪಡಿಸುವ ಮೂಲಕ ಗುರು ತಣ್ತೀಕ್ಕೆ ಪ್ರೇರಣೆಯಾಗೋಣ. ಪ್ರತಿಯೊಂದು ಸಂದರ್ಭದಲ್ಲಿ ನಮ್ಮ ಕಾರ್ಯಕ್ರಮಗಳಲ್ಲಿ ವೈವಿಧ್ಯವನ್ನು ತೋರ್ಪಡಿಸುವ ಜತೆಗೆ ಎಲ್ಲಾ ಸಮಾಜ ಬಾಂಧವರನ್ನು ಒಗ್ಗಟ್ಟಿನಿಂದ ಸಮಾಜದ ವೇದಿಕೆಗೆ ತರಬೇಕು. ಜಯ ಸಿ. ಸುವರ್ಣ ಅವರ ಚಿಂತನೆಯನ್ನು ನಾವೆಲ್ಲರೂ ಗೌರವಿಸಬೇಕು– ನಿತ್ಯಾನಂದ ಡಿ. ಕೋಟ್ಯಾನ್, ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ