Advertisement

ಗುರ್ಜಾಪುರ ಬ್ಯಾರೇಜ್ ಗೇಟ್ ಗಳು ಓಪನ್: ಸ್ಥಳೀಯರು ನಿರಾಳ

01:19 PM Jul 20, 2022 | Team Udayavani |

ರಾಯಚೂರು: ತಾಲೂಕಿನ ಗುರ್ಜಾಪುರ ಬಳಿಯ ಬ್ರಿಜ್ ಕಂ ಬ್ಯಾರೇಜ್ ನ ಗೇಟ್ ಗಳು ಕೊನೆಗೂ ತೆರೆದುಕೊಂಡಿದ್ದು, ನೀರು ಸರಾಗವಾಗಿ ಸಾಗಿದೆ. 194 ಗೇಟ್ ಗಳಲ್ಲಿ 90 ಗೇಟ್ ಗಳು ಮಾತ್ರ ತೆರೆದುಕೊಂಡಿದ್ದವು. ಗೇಟ್ ಗಳು ಓಪನ್ ಆಗದ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿತ್ತು.

Advertisement

ಬೇಸಿಗೆಯಲ್ಲಿ RTPS, YTPS ಘಟಕಗಳಿಗೆ ನೀರೊದಗಿಸುವ ಉದ್ದೇಶದಿಂದ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಲಾಗಿತ್ತು. ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ  1.62 ಲಕ್ಷ  ಕ್ಯೂಸೆಕ್ ನೀರು ಹರಿಸಲಾಗಿತ್ತು. ಈ ವೇಳೆ ಗೇಟ್ ಗಳು ಓಪನ್ ಆಗಿರಲಿಲ್ಲ.

ಇದನ್ನೂ ಓದಿ: ಬೇಳೂರು: ಉದಯವಾಣಿ ದಿನಪತ್ರಿಕೆಗಾಗಿ ಕಾಯುವ ಶ್ವಾನ; ವಿಡಿಯೋ ವೈರಲ್‌

ಇದರಿಂದ ಗುರ್ಜಾಪುರ, ಅರಿಷಿಣಿಗಿ ಸೇರಿದಂತೆ ಕೆಲ ಗ್ರಾಮಗಳಿಗೆ ಹಿನ್ನೀರು ನುಗ್ಗುವ ಭೀತಿ ಎದುರಾಗಿತ್ತು.  ಹೀಗಾಗಿ ಕೇರಳದ ತಜ್ಞರ ತಂಡ ಸತತ ಪ್ರಯತ್ನ ಮಾಡಿದರೂ ಒಂದೂ ಗೇಟ್ ಓಪನ್ ಆಗಿರಲಿಲ್ಲ.  ನಿನ್ನೆಯಿಂದ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಗೇಟ್ ಗಳು  ಓಪನ್ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next