ಹೊಸದಿಲ್ಲಿ: ಮೂರು ವರ್ಷದ ಅವಧಿಯಲ್ಲಿ ಐದು ಮರ್ಸಿಡಿಸ್ ಕಾರುಗಳನ್ನು ಕೊಂಡು ವೆಹಿಕಲ್ ಫೈನಾನ್ಸ್ ಕಂಪನಿಗೆ 2.18 ಕೋಟಿ ರೂ. ವಂಚಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಫೈನಾನ್ಸ್ ಕಂಪನಿಯ ದೂರಿನ ಮೇರೆಗೆ 2018 ರಲ್ಲಿ ಆರೋಪಿ ಪ್ರಮೋದ್ ಸಿಂಗ್ ವಿರುದ್ಧ ಗುರ್ಗಾಂವ್ ನಿವಾಸಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಪೊಲೀಸರ ಪ್ರಕಾರ, ಸಿಂಗ್ ಆರಂಭದಲ್ಲಿ ಮರ್ಸಿಡಿಸ್ ಬೆಂಜ್ ಕಾರನ್ನು ಖರೀದಿಸಲು ಸಂಸ್ಥೆಯಿಂದ 27.5 ರೂ ಲಕ್ಷ ಸಾಲ ಪಡೆದು ಆರಂಭಿಕ ಕಂತುಗಳನ್ನು ಪಾವತಿಸಿದ್ದಾರೆ. ಫೈನಾನ್ಸರ್ ನಂಬಿಕೆ ಗಳಿಸಿದ ನಂತರ, ಅವರು ಇನ್ನೂ ನಾಲ್ಕು ಸಾಲಗಳನ್ನು ಪಡೆದಿದ್ದರು. ಕಂತುಗಳನ್ನು ಸ್ವಲ್ಪ ಸಮಯದವರೆಗೆ ಪಾವತಿಸುವುದನ್ನು ಮುಂದುವರೆಸಿದ ನಂತರ ಪಾವತಿ ಮಾಡುವುದನ್ನು ನಿಲ್ಲಿಸಿದ್ದ.
ಇದನ್ನೂ ಓದಿ:ಒಂದೇ ಯೋಜನೆಗೆ ಸರ್ಕಾರದಿಂದ ಮೂರು ಜಿಲ್ಲೆ ಪ್ರಸ್ತಾವ ಏಕೆ?: ಉದ್ಯಮಿಗಳ ಅಸಮಾಧಾನ
ಸಾರಿಗೆ ಇಲಾಖೆಯ ಕೆಲವು ಅಧಿಕಾರಿಗಳು ಸಿಂಗ್ ಜೊತೆ ಕೈಜೋಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ದೂರುದಾರರ ಪ್ರಕಾರ, ಪ್ರಮೋದ್ ಸಿಂಗ್ ಸಂಸ್ಥೆಗೆ 2,18,34,853 ಬಾಕಿ ಉಳಿಸಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಸಿಂಗ್ ತಲೆಮರೆಸಿಕೊಂಡಿದ್ದ. ಈತನ ಮೇಲೆ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು.
ಪ್ರಮೋದ್ ಸಿಂಗ್ ಮೂರು ವರ್ಷಗಳಲ್ಲಿ ಐದು ಮರ್ಸಿಡಿಸ್ ಕಾರುಗಳನ್ನು ಖರೀದಿ ಮಾಡಿದ್ದ. ವಿಚಿತ್ರವೆಂದರೆ ಎಲ್ಲಾ ಕಾರುಗಳನ್ನು ಖರೀದಿಸುವಾಗಲೇ ಒಂದೇ ಕಡೆ ಸಾಲ ಮಾಡಿದ್ದ. ಸಾರಿಗೆ ಇಲಾಖೆಯ ಕೆಲವು ಅಧಿಕಾರಿಗಳು ವಾಹನಗಳ ಹೈಪೋಥೆಕೇಟೆಡ್ ಸ್ಥಿತಿಯನ್ನು ದಾಖಲೆಗಳಿಂದ ಅಳಿಸಿಹಾಕಿದ್ದಾರೆ. ಹೀಗಾಗಿ ಕಾರುಗಳನ್ನು ಮೋಸದಿಂದ ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್‌ಗಳಿಗೆ ಮಾರಾಟ ಮಾಡಬಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.