Advertisement

ಗಂಟುಮೂಟೆ: ರೂಪಾ ರಾವ್ ಸೃಷ್ಟಿಸಿದ ಪ್ರೇಮಕಾವ್ಯ!

11:14 AM Oct 17, 2019 | Naveen |

ಗಂಟುಮೂಟೆ ಎಂಬ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟ್ರೇಲರ್ ಮೂಲಕ ಕನ್ನಡದ ಪ್ರೇಕ್ಷಕರನ್ನೆಲ್ಲ ಥ್ರಿಲ್ ಆಗಿಸಿತ್ತು. ಬಹುತೇಕರು ಅದನ್ನು ನೋಡಿ ತಮ್ಮ ನೆನಪುಗಳನ್ನೆಲ್ಲ ಮತ್ತೆ ನೇವರಿಸಿ ನೋಡಿಕೊಂಡು ಪುಳಕಿತರಾಗಿದ್ದರು. ಅದರಲ್ಲಿನ ಹಶ್ಕೂಲು ಹುಡುಗ ಹುಡುಗಿಯ ಪ್ರೇಮ ಸಲ್ಲಾಪ, ಅದರಾಚೆಗಿನ ಕೆಲ ಅಂಶಗಳ ಹೊಳಹಿನಿಂದ ಪ್ರೇಕ್ಷಕರೆಲ್ಲ ಥ್ರಿಲ್ ಆಗಿದ್ದರು. ಒಂದು ಯಶಸ್ವಿ ಟ್ರೇಲರ್ ಎಂಥಾ ಲಕ್ಷಣಗಳನ್ನು ಹೊಂದಿರಬೇಕೋ ಅದನ್ನೆಲ್ಲ ಹೊಂದಿದ್ದ ಈ ಟ್ರೇಲರ್ ಯೂಟ್ಯೂಬ್‌ನಲ್ಲಿಯೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿತ್ತು.

Advertisement

ಈ ಚಿತ್ರದ ಮೂಲಕವೇ ರೂಪಾ ರಾವ್ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಷ್ಟಕ್ಕೂ ಇವರೇನು ಅಪರಿಚಿತರಲ್ಲ. ಈಗಾಗಲೇ ಒಂದಷ್ಟು ಕಿರು ಚಿತ್ರಗಳು ಮತ್ತು ವೆಬ್ ಸೀರೀಸ್ ಮೂಲಕ ಹೆಸರು ಮಾಡಿರುವವರು. ಕೇವಲ ಕನ್ನಡ ಮಾತ್ರವಲ್ಲದೇ ಇತರೇ ಭಾಷೆಗಳಲ್ಲಿಯೂ ಆ ವೆಬ್ ಸೀರೀಸ್ ಹೆಸರುವಾಸಿಯಾಗಿತ್ತು. ಅದರಲ್ಲಿಯೂ ಕೂಡಾ ರೂಪಾ ರಾವ್ ಹದಿಹರೆಯದ ಹೆಣ್ಣೊಬ್ಬಳ ಒಡಲ ಮರ್ಮರವನ್ನು ಧ್ವನಿಸುವಂಥಾ ರೀತಿಯಲ್ಲಿ ದೃಶ್ಯ ಕಟ್ಟಿದ್ದರು.

ಗಂಟುಮೂಟೆಯೊಳಗೂ ಸಹ ಅವರು ಅಂಥಾದ್ದೇ ಬೆರಗುಗಳನ್ನಿಟ್ಟಿದ್ದಾರೆ. ಇದು ತೊಂಬತ್ತರ ದಶಕದಲ್ಲಿ ನಡೆಯೋ ಹೈಸ್ಕೂಲು ದಿನಗಳ ಪ್ರೇಮ ಕಥಾನಕದ ಚಿತ್ರ. ತೀರಾ ಹೆಚ್ಚೆನೂ ಹಳೆಯದಲ್ಲವಾದರೂ ಆ ಕಾಲದ ಫೀಲಿಂಗ್ಸ್ಗೂ ಈ ಕಾಲದ್ದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅದು ಭಾವನೆಗಳೆಲ್ಲ ಬೆರಳ ಮೊನೆಗೆ ಬಾರದೆ ಹೃದಯದಲ್ಲಿಯೇ ಬೆಚ್ಚಗೆ ಉಳಿದುಕೊಂಡಿದ್ದ ಕಾಲ. ಅಂಥಾ ಹೊತ್ತಿನಲ್ಲಿ ಸಿನಿಮಾ ದೃಶ್ಯಗಳಿಗೂ ಬದುಕಿಗೂ ಥಳುಕು ಹಾಕಿಕೊಂಡ ಮನಸ್ಥಿತಿಯ ಹುಡುಗಿಯ ಕಣ್ಣಲ್ಲಿ ಪ್ರೇಮದ ಭಾವಗಳನ್ನು ನೋಡೋ ಪ್ರಯತ್ನ ಗಂಟುಮೂಟೆಯಲ್ಲಿದೆ. ಈ ಚಿತ್ರ ಈ ವಾರವೇ ತೆರೆಗಾಣಲಿದೆ.

Advertisement

Udayavani is now on Telegram. Click here to join our channel and stay updated with the latest news.

Next