ಚಂಡಿಗಢ: ಪಂಜಾಬಿನ ಖ್ಯಾತ ಸಂಗೀತ ಸಂಯೋಜಕ ಬಂಟಿ ಬೈನ್ಸ್ ಅವರ ಮೇಲೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಸೆಕ್ಟರ್ 79 ರಲ್ಲಿ ಮಂಗಳವಾರ(ಫೆ.27 ರಂದು) ನಡೆದಿರುವುದು ವರದಿಯಾಗಿದೆ.
ಬಂಟಿ ಬೈನ್ಸ್ ಮೊಹಾಲಿ ರೆಸ್ಟೋರೆಂಟ್‌ನಲ್ಲಿದ್ದಾಗ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ಅಪರಿಚಿತ ದುಷ್ಕರ್ಮಿಗಳು ಬೈನ್ಸ್ ಮೇಲೆ ಗುಂಡಿನ ದಾಳಿ ನಡೆಸಿದ್ದು, ಯಾವುದೇ ಗಾಯಗಳಿಲ್ಲದೆ ಪಾರಾಗಿರುವುದಾಗಿ ವರದಿಯಾಗಿದೆ.
“1ಕೋಟಿ ರೂ. ನೀಡುವಂತೆ ವ್ಯಕ್ತಿಯಿಬ್ಬರಿಂದ ಬೆದರಿಕೆ ಕರೆ ಬಂದಿತ್ತು. ಬೇಡಿಕೆ ಈಡೇರಿಸಲು ವಿಫಲವಾದರೆ ಸಾವಿಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು. ಅದರಂತೆ ಈ ಕೃತ್ಯ ನಡೆದಿದೆ” ಎಂದು ʼಇಂಡಿಯಾ ಟುಡೇʼ ಗೆ ಬಂಟಿ ಹೇಳಿದ್ದಾರೆ.
ಕೆನಡಾದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಎನ್ನಲಾದ ಕುಖ್ಯಾತ ಗ್ಯಾಂಗ್ ಸ್ಟರ್ ಲಕ್ಕಿ ಪಾಟಿಯಲ್ ಹೆಸರಿನಲ್ಲಿ ಬೆದರಿಕೆ ಹಾಕಲಾಗಿದೆ. ಪಂಜಾಬ್‌ನಾದ್ಯಂತ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಲಾರೆನ್ಸ್ ಬಿಷ್ಣೋಯ್ ಮತ್ತು ಬಾಂಬಿಹಾ ಗ್ಯಾಂಗ್‌ಗಳೊಂದಿಗಿನ ಈತ ಸಂಪರ್ಕ ಹೊಂದಿದ್ದಾನೆ ಎಂದು ವರದಿ ತಿಳಿಸಿದೆ.
2022 ರಲ್ಲಿ ಹತ್ಯೆಗೀಡಾದ ಖ್ಯಾತ ಗಾಯಕ ಸಿಧು ಮೊಸೆವಾಲ ಸೇರಿದಂತೆ ಇತರೆ ಗಾಯಕರೊಂದಿಗೆ ಬೈನ್ಸ್ ಕೆಲಸ ಮಾಡಿದ್ದಾರೆ.