Advertisement

ಹ್ಯಾಕರ್‌ ಶ್ರೀಕಿ ಭದ್ರತೆಗಾಗಿ “ಗನ್‌ಮ್ಯಾನ್‌”ನಿಯೋಜನೆ

10:28 AM Nov 18, 2021 | Team Udayavani |

ಬೆಂಗಳೂರು: ಬಿಟ್‌ಕಾಯಿನ್‌ ಪ್ರಕರಣದ ಮಾಸ್ಟರ್‌ಮೈಂಡ್‌, ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಭದ್ರತೆಗಾಗಿ “ಗನ್‌ ಮ್ಯಾನ್‌’ ನಿಯೋಜಿಸಲಾಗಿದೆ. ಆದರೆ, ಆತ ಎಲ್ಲಿದ್ದಾನೆ ಎಂದು ಆತನ ಕುಟುಂಬ ಸದಸ್ಯರು ಮತ್ತು ಪೊಲೀಸರಿಗೇ ಮಾಹಿತಿ ಇಲ್ಲ! ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಜತೆ ರಾಜ್ಯದ ಪ್ರಭಾವಿ ನಾಯಕರು, ಅವರ ಮಕ್ಕಳು ಸಂಪರ್ಕ ಹೊಂದಿದ್ದು, ಈತನ ಮೂಲಕ ಬಿಟ್‌ಕಾಯಿನ್‌ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಬೆನ್ನಲ್ಲೇ ಆತನಿಗೆ ಜೀವ ಬೆದರಿಕೆ ಎಂದು ಹೇಳಲಾಗಿದೆ.

Advertisement

ಈ ಸಂಬಂಧ ಆತ ನಿಗೆ ಒಬ್ಬ ಗನ್‌ಮ್ಯಾನ್‌ ನಿಯೋ ಜಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಕೆಲ ದಿನಗಳ ಹಿಂದೆ ಶ್ರೀಕಿಗೆ ಪ್ರಾಣ ಭಯವಿ ದ್ದು, ಪೊಲೀಸರು ಭದ್ರತೆ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಇತರೆ ನಾಯಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ದ್ದರು.

ಇದನ್ನೂ ಓದಿ:- ಮರಳಿನ ಸಮಸ್ಯೆ ಪರಿಹರಿಸುವಂತೆ ಆಗ್ರಹ: ಘೋಟ್ನೇಕರ

ಈ ಸಂಬಂಧ ಹಿರಿಯ ಪೊಲೀಸ್‌ ಅಧಿಕಾರಿಗಳ ಸೂಚನೆಯ ಮೇರೆಗೆ ಗನ್‌ ಮ್ಯಾನ್‌ ನಿಯೋಜಿಸಲಾಗಿದೆ. ಜತೆಗೆ ಆತನ ಮನೆಯವರಿಗ ಭದ್ರತೆ ನೀಡಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.

ಎಲ್ಲಿದ್ದಾನೋ ಗೊತ್ತಿಲ್ಲ! ಪತ್ತೆಗಾಗಿ ಪಿಎಸ್‌ಐ ನೇಮಕ: ಮಂಗಳವಾರವೇ ಭದ್ರತೆಗೆ ಆದೇಶ ಹೊರಡಿಸಿದ್ದು, ಜಯನಗರದಲ್ಲಿರುವ ಮನೆಗೆ ತೆರಳಿ ಶ್ರೀಕಿ ಬಗ್ಗೆ ವಿಚಾರಿಸಲಾಗಿದೆ. ಆದರೆ, ಆತ ಎರಡು ದಿನಗಳಿಂದ ಮನೆಗೆ ಬಂದಿಲ್ಲ. ಎಲ್ಲಿದ್ದಾನೋ ಗೊತ್ತಿಲ್ಲ. ಸಂಪರ್ಕ ಸಂಖ್ಯೆಯೂ ಇಲ್ಲ ಎಂದು ಮನೆ ಸದಸ್ಯರು ಹೇಳಿದ್ದಾರೆ. ಹೀಗಾಗಿ ಆತನ ಪತ್ತೆಗಾಗಿ ಪಿಎಸ್‌ ಐವೊಬ್ಬರನ್ನು ನೇಮಿಸಲಾಗಿದೆ. ಆತ ಪತ್ತೆ ಯಾದ ಕೂಡಲೇ ಪ್ರಸ್ತುತ ಪರಿಸ್ಥಿತಿ ಬಗ್ಗೆ ವಿವರಿಸಿ ಗನ್‌ಮ್ಯಾನ್‌ ಮೂಲಕ ಭದ್ರತೆ ಪಡೆಯುವಂತೆ ಮನವೊಲಿಸಲಾಗುತ್ತದೆ ಎಂದು ಅಧಿಕಾರಿ ವಿವರಿಸಿದರು.

Advertisement

ಪೊಲೀಸರಿಗೆ ತಲೆನೋವು: ಶ್ರೀಕಿಗೆ ಎಲ್ಲಿದ್ದ? ಎಲ್ಲಿರುತ್ತಾನೆ ಎಂದು ಇದುವರೆಗೂ ಪತ್ತೆ ಸಾಧ್ಯವಾಗಿಲ್ಲ. ಡ್ರಗ್ಸ್‌ ಮತ್ತು ವೆಬ್‌ಸೈಟ್‌ ಹ್ಯಾಕಿಂಗ್‌ ಪ್ರಕರಣದಲ್ಲಿ ಬಂಧನಕ್ಕೂ ಮೊದಲು ಎರಡು ವರ್ಷಗಳ ಕಾಲ ಮನೆಗೆ ಹೋಗಿಲ್ಲ. ಪ್ರಕರಣ ದಲ್ಲಿ ಜಾಮೀನು ಪಡೆದು ಹೊರಬಂದರೂ ಮನೆಗೆ ಹೋಗದೆ ಹೋಟೆಲ್‌ವೊಂದರಲ್ಲಿ ತಂಗಿದ್ದ. ಹೀಗಾಗಿ ಆತ ಎಲ್ಲಿರುತ್ತಾನೆ ಎಂಬ ಊಹೆಯೂ ಇಲ್ಲ. ಮತ್ತೂಂದೆ ಆತ ಮೊಬೈಲ್‌ ಬಳಕೆ ಮಾಡದಿರುವುದೇ ದೊಡ್ಡ ತಲೆನೋವಾಗಿದೆ. ಆತನ ಮೇಲೆ ಯಾವುದಾದರು ದಾಳಿ ಯಾದರೆ ಆಗ ಪೊಲೀಸರನ್ನೇ ಹೊಣೆ ಮಾಡುತ್ತಾರೆ. ಹೀಗಾಗಿ ಆತನಿಗೆ ಭದ್ರತೆ ನೀಡಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದರು.

ಶ್ರೀಕಿ ಲ್ಯಾಪ್‌ಟಾಪ್‌ ಸಿಐಡಿ ಸೈಬರ್‌ಗೆ

ಕೆಲ ದಿನಗಳ ಹಿಂದೆ ಜೀವನ್‌ ಭೀಮಾನಗರ ಪೊಲೀಸರು ಹಲ್ಲೆ ಪ್ರಕರಣದಲ್ಲಿ ಶ್ರೀಕಿಯನ್ನು ಬಂಧಿಸಿದ್ದರು. ಈ ವೇಳೆ ಆತನ ಲ್ಯಾಪ್‌ಟಾಪ್‌, ಟ್ಯಾಬ್‌ ಹಾಗೂ ಇತರೆ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಜಪ್ತಿ ಮಾಡಿದ್ದರು. ಇದೀಗ ಅವುಗಳನ್ನು ಕೋರ್ಟ್‌ ಅನುಮತಿ ಮೇರೆಗೆ ಸಿಐಡಿ ಸೈಬರ್‌ ಕ್ರೈಂ ಪೊಲೀಸರಿಗೆ ನೀಡಿದ್ದು, ಅದರಲ್ಲಿ ಬಿಟ್‌ಕಾಯಿನ್‌, ಡ್ರಗ್ಸ್‌ ಹಾಗೂ ಯಾವುದಾದರೂ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿದ್ದಾನೆಯೇ ಎಂಬ ಬಗ್ಗೆ ಮಾಹಿತಿ ನೀಡಲು ಪೂರ್ವ ವಿಭಾಗ ಪೊಲೀಸರು ಕೋರಿದ್ದಾÃ

Advertisement

Udayavani is now on Telegram. Click here to join our channel and stay updated with the latest news.

Next