ಲಾಸ್ ಏಂಜಲೀಸ್: ಅಕಾಡೆಮಿ ಅವಾರ್ಡ್ಸ್ ನಲ್ಲಿ ಭಾರತ ಇತಿಹಾಸ ಬರೆದಿದೆ. ಗುನೀತ್ ಮೋಂಗಾ ಅವರ ‘ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರವು ಆಸ್ಕರ್ ಅವಾರ್ಡ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
41 ನಿಮಿಷದ ಈ ಡಾಕ್ಯುಮೆಂಟರಿಯು ನೆಟ್ ಫ್ಲಿಕ್ಸ್ ನಲ್ಲಿ ಲಭ್ಯವಿದೆ. ಹಾಲ್ ಔಟ್, ಹೌ ಡು ಯು ಮೆಷರ್ ಎ ಇಯರ್, ದಿ ಮಾರ್ಥಾ ಮಿಚೆಲ್ ಎಫೆಕ್ಟ್ ಮತ್ತು ಸ್ಟ್ರೇಂಜರ್ ಅಟ್ ದಿ ಗೇಟ್ ಜೊತೆಗೆ ಸಾಕ್ಷ್ಯಚಿತ್ರ ಕಿರುಚಿತ್ರ ವಿಭಾಗದಲ್ಲಿ ‘ದಿ ಎಲಿಫೆಂಟ್ ವಿಸ್ಪರರ್ಸ್‘ ನಾಮನಿರ್ದೇಶನಗೊಂಡಿತ್ತು.
‘ದಿ ಎಲಿಫೆಂಟ್ ವಿಸ್ಪರರ್ಸ್’ ಚಿತ್ರವನ್ನು ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿದ್ದಾರೆ ಮತ್ತು ಗುನೀತ್ ಮೊಂಗಾ ನಿರ್ಮಿಸಿದ್ದಾರೆ.
ಹಿಂದಿನ ಡಿಸೆಂಬರ್‌ನಲ್ಲಿ, ಕಿರುಪಟ್ಟಿ ಘೋಷಣೆಯಾದಾಗ, ನಿರ್ಮಾಪಕ ಗುನೀತ್ ಮೊಂಗಾ ಹಂಚಿಕೊಂಡಿದ್ದಾರೆ. ’ಎಲಿಫೆಂಟ್ ವಿಸ್ಪರರ್ಸ್’ ದಕ್ಷಿಣ ಭಾರತದ ಆನೆಗಳು ಮತ್ತು ಅದೇ ಜಾಗದಲ್ಲಿ ಅಸ್ತಿತ್ವದಲ್ಲಿರುವ ಸ್ಥಳೀಯ ಸಮುದಾಯಗಳ ಕಥೆಯಾಗಿದ್ದು, ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ 95 ನೇ ಅಕಾಡೆಮಿ ಪ್ರಶಸ್ತಿ ಪಡೆದಿದೆ.
Related Articles
‘ದಿ ಎಲಿಫೆಂಟ್ ವಿಸ್ಪರರ್ಸ್’ ಒಂದು ಕಿರು ಸಾಕ್ಷ್ಯಚಿತ್ರವಾಗಿದ್ದು, ಅನಾಥ ಆನೆ ರಘುವನ್ನು ನೋಡಿಕೊಳ್ಳುವ ದಂಪತಿಗಳ ಹೃದಯಸ್ಪರ್ಶಿ ಕಥೆಯ ಕುರಿತಾಗಿದೆ. ಆನೆ ರಘುವಿನ ಚೇತರಿಕೆಯ ನಡುವೆ ದಂಪತಿಗಳು ಮತ್ತು ರಘು ನಡುವಿನ ಪ್ರೀತಿ ಮತ್ತು ಬಾಂಧವ್ಯದ ಸುಂದರವಾದ ಕಥೆಯನ್ನು ಹೇಳುತ್ತದೆ.