Advertisement

ಗುಂಡೂರು ಹೊಳೆ ಡ್ಯಾಂನ ಸಾಧಕ –ಬಾಧಕ ಪರಿಶೀಲನೆ

03:35 PM Apr 26, 2017 | Team Udayavani |

ಕೊಲ್ಲೂರು:   ಕುಂದಾಪುರ ತಾಲೂಕು ಆಲೂರು ಸಮೀಪದ ಗುಂಡೂರು ಹೊಳೆಗೆ ನಿರ್ಮಿಸಲಾದ  ಡ್ಯಾಂನ ಸಾಧಕ – ಬಾಧಕಗಳ ವೀಕ್ಷಣೆಗೆ ಉಡುಪಿ ಜಿಲ್ಲಾ ರೈತ ಸಂಘ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿತು.

Advertisement

ಆಲೂರು ಎದ್ರುಬೈಲುವಿನಲ್ಲಿ ಹರಿಯುವ ಹೊಳೆಗೆ ಅಡ್ಡವಾಗಿ ಡ್ಯಾಂ ನಿರ್ಮಿಸಿ, ನೀರನ್ನು ಶೇಖರಿಸಿ ಕೆಳಭಾಗಕ್ಕೆ ಕಿಂಡಿ ಅಣೆಕಟ್ಟುಗಳ ಮೂಲಕ ನೀರು ನೀಡುವ ಯೋಜನೆ ಇದಾಗಿದ್ದು, ಈ ಯೋಜನೆ ರೈತರಿಗೆ ಎಷ್ಟರಮಟ್ಟಿಗೆ ತಲುಪುತ್ತದೆ ಎನ್ನುವುದನ್ನು ರೈತ ಸಂಘ ವೀಕ್ಷಿಸಿತು.

ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಪ್ರತಾಪಚಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ ರೈತರ ನಿಯೋಗ ಗುಂಡೂರು ಡ್ಯಾಂ, ಆಲೂರಿನಲ್ಲಿ ಕಿಂಡಿ ಅಣೆಕಟ್ಟು, ನೀರು ಹರಿದು ಹೋಗುವ ಅಚ್ಚುಕಟ್ಟು ಪ್ರದೇಶಗಳ ವೀಕ್ಷಣೆ ನಡೆಸಿತು.

ಈ ಸಂದರ್ಭದಲ್ಲಿ ಪ್ರತಾಪಚಂದ್ರ ಶೆಟ್ಟಿ ಅವರು ವಾರಾಹಿ ನೀರಾವರಿ ಯೋಜನೆಯ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು. ಸರಕಾರದ ಯೋಜನೆ ವ್ಯರ್ಥವಾಗಬಾರದು. ರೈತರಿಗೆ ನಿರಂತರ ನೀರು ಸಿಗುವಂತಾಗಬೇಕು. ಆ ನಿಟ್ಟಿನಲ್ಲಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಪ್ರಮುಖರಾದ ವಿಕಾಸ ಹೆಗ್ಡೆ,  ಉಡುಪಿ ಜಿಲ್ಲಾ ರೈತ ಸಂಘವು ಉಡುಪಿ ಜಿಲ್ಲೆಯ ಎಲ್ಲ ವೆಂಟೆಡ್‌ ಡ್ಯಾಂಗಳ ಕಾರ್ಯವೈಖರಿಯನ್ನು ಪರಿಶೀಲಿಸುತ್ತಿದೆ. ಸರಕಾರದ ಹಣ ಪೋಲಾಗಬಾರದು. ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕು ಎನ್ನುವ ನೆಲೆಯಲ್ಲಿ ಆಡಳಿತವನ್ನು ಎಚ್ಚರಗೊಳಿಸುವ ಕೆಲಸ ಮಾಡುತ್ತಿದ್ದೇವೆ. ಡ್ಯಾಂ ನಿರ್ಮಾಣದ ಅನಂತರ ಅದರ ನಿರ್ವಹಣೆ ಯಾವ ರೀತಿಯಲ್ಲಿ ಆಗುತ್ತಿದೆ ಎನ್ನುವುದು ಮುಖ್ಯ. ಡ್ಯಾಂ ನಿರ್ಮಾಣ ಆದರೆ ಸಾಲದು ನೀರು ರೈತರಿಗೆ ಸಿಗಬೇಕು ಎಂದರು.

Advertisement

ಈ ಸಂದರ್ಭದಲ್ಲಿ ರೈತ ಸಂಘದ ಪ್ರಮುಖರಾದ ಕೃಷ್ಣದೇವ ಕಾರಂತ ಕೋಣಿ, ಹರಿಪ್ರಸಾದ್‌ ಶೆಟ್ಟಿ, ಕೆದೂರು ಸದಾನಂದ ಶೆಟ್ಟಿ, ವಂಡಬಳ್ಳಿ ಜಯರಾಮ ಶೆಟ್ಟಿ, ವಂಡ್ಸೆ ಗ್ರಾ.ಪಂ. ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಅಡಿಕೆಕೊಡ್ಲು, ಸಂತೋಷ ಕುಮಾರ್‌ ಶೆಟ್ಟಿ ಬಲಾಡಿ, ಸಂತೋಷ ಕುಮಾರ್‌ ಶೆಟ್ಟಿ ಹಕ್ಲಾಡಿ, ತಾ.ಪಂ. ಸದಸ್ಯರಾದ ಉದಯ ಜಿ. ಪೂಜಾರಿ, ಸ್ಥಳೀಯ ಮುಖಂಡರಾದ ಡಾ| ಅತುಲ್‌ ಕುಮಾರ್‌ ಶೆಟ್ಟಿ,  ವಾಸುದೇವ ಪೈ, ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಸನ್ನ ಕುಮಾರ್‌ ಶೆಟ್ಟಿ, ಸಂಜೀವ ಪೂಜಾರಿ ವಂಡ್ಸೆ,  ಇಚ್ಚಿತಾರ್ಥ ಶೆಟ್ಟಿ, ಗೋವರ್ಧನ ಜೋಗಿ, ಹಾ.ಉ. ಸಹಕಾರಿ ಸಂಘದ ಅಧ್ಯಕ್ಷ ತ್ಯಾಂಪಣ್ಣ ಶೆಟ್ಟಿ,  ವಾರಾಹಿ ನೀರಾವರಿ ಯೋಜನೆ ಸಿದ್ಧಾಪುರ ಇದರ ಅಧೀಕ್ಷಕ ಅಭಿಯಂತರ ಪದ್ಮನಾಭ, ಎಇಇ ಪ್ರಮೀತ್‌, ನ್ಯಾಯವಾದಿ ಸರ್ವೋತ್ತಮ ಶೆಟ್ಟಿ, ಜಿ.ಪಂ. ಸದಸ್ಯ ಬಾಬು ಶೆಟ್ಟಿ, ತಾ.ಪಂ. ಉಪಾಧ್ಯಕ್ಷ ಪ್ರವೀಣ್‌ ಶೆಟ್ಟಿ, ಎ.ಪಿ.ಎಂ.ಸಿ. ಅಧ್ಯಕ್ಷ ಶರತ್‌ ಶೆಟ್ಟಿ, ಚಿತ್ತೂರು ಪಂಚಾಯತ್‌ ಅಧ್ಯಕ್ಷ ಸಂತೋಷ ಮಡಿವಾಳ, ಆಲೂರು ಪಂ. ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ತಾ.ಪಂ. ಮಾಜಿ ಸದಸ್ಯ ಹಕೂìರು ಮಂಜಯ್ಯ ಶೆಟ್ಟಿ, ತಾ.ಪಂ. ಮಾಜಿ ಅಧ್ಯಕ್ಷ ಬೆಳ್ಳಾಡಿ ಶಂಕರ ಶೆಟ್ಟಿ, ಚಿತ್ತೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಸುರೇಂದ್ರ ಶೆಟ್ಟಿ, ಶಂಕರನಾರಾಯಣ ಗ್ರಾ.ಪಂ. ಅಧ್ಯಕ್ಷ ಸದಾಶಿವ ಶೆಟ್ಟಿ, ವಿ.ಕೆ. ಶಿವರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next