Advertisement

ಗುಂಡ್ಲುಪೇಟೆ ಪುರಸಭೆ :ಶಾಸಕರ ಕೃಪಾಕಟಾಕ್ಷವಿದ್ದವರು ಅಧ್ಯಕ್ಷ, ಉಪಾಧ್ಯಕ್ಷ

02:51 PM Oct 11, 2020 | Suhan S |

ಗುಂಡ್ಲುಪೇಟೆ: ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿದ ಬೆನ್ನಲ್ಲೇ ಗದ್ದುಗೆ ಏರಲು ರಾಜಕೀಯ ಚಟುವಟಿಕೆ ಚುರುಕಾಗಿದೆ.

Advertisement

23 ವಾರ್ಡ್‌ಗಳಿರುವ ಗುಂಡ್ಲುಪೇಟೆ ಪುರಸಭೆಗೆ ಬಿಜೆಪಿ 13 ಸ್ಥಾನ,ಕಾಂಗ್ರೆಸ್‌ 8 ಸ್ಥಾನ, ಪಕ್ಷೇತರ ಹಾಗೂ ಎಸ್‌ಡಿಪಿಐ ತಲಾ ಒಂದೊಂದು ಸ್ಥಾನಗಳಿಸಿವೆ. ಇದಲ್ಲದೇ ಶಾಸಕರ ಒಂದು ಮತ ಮತ್ತು ಸಂಸದರಒಂದು ಮತಇದೆ.ಇವರು ಕೂಡ ಬಿಜೆಪಿಯವರೇ ಆಗಿದ್ದಾರೆ.ನಿಚ್ಚಳ ಬಹುಮತ ವಿರುವ ಬಿಜೆಪಿ ಆಡಳಿತ ನಡೆಸುವುದು ಖಚಿತ. ಇದೇ ಮೊದಲ ಬಾರಿಗೆ ತಾಲೂಕಿನಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದು,ಈ ಬಾರಿ ಗದ್ದುಗೆಗೇರಲು ಆಕಾಂಕ್ಷಿಗಳು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.

ಈ ಹಿಂದೆ ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ-ಬಿ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ನಿಗದಿಯಾಗಿತ್ತು. ಆದರೆ, ಇತ್ತೀಚೆಗೆ ಸರ್ಕಾರ ಹೊಸ ಮೀಸಲಾತಿ ಪಟ್ಟಿ ಪ್ರಕಟಿಸಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಿದೆ. ಇದರಿಂದ ಬಿಜೆಪಿಯ ಬಹುತೇಕ ಎಲ್ಲಾ ಸದಸ್ಯರಿಗೂ ಹುದ್ದೆ ಗೇರುವ ಆಕಾಂಕ್ಷೆ ಹೊಂದಿದ್ದು, ಶಾಸಕ ಸಿ.ಎಸ್‌. ನಿರಂಜನ ಕುಮಾರ್‌ ಮೇಲೆ ತಮ್ಮ ಪ್ರಭಾವ ಬೀರಲು ಆರಂಭಿಸಿದ್ದಾರೆ.

ಈನಡುವೆ ಮೂರು ಬಾರಿ ಸದಸ್ಯರಾಗಿ ಒಮ್ಮೆ ಅಧ್ಯಕರಾ‌ಗಿ ಅನುಭವ ಹೊಂದಿರುವ ಪಿ.ಗಿರೀಶ್‌, ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ರಮೇಶ್‌, ಬಿಜೆಪಿ ಹಿರಿಯ ಕಾರ್ಯಕರ್ತ ನಾಗೇಶ್‌ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಹಾಗೆಯೇ ಉಪಾಧ್ಯಕ್ಷ ಸ್ಥಾನಕ್ಕೆ ವೀಣಾ ಮಂಜುನಾಥ್‌ ಮತ್ತು ದೀಪಿಕಾ ಅಶ್ವಿ‌ನ್‌ ಪ್ರಯತ್ನಿಸುತ್ತಿದ್ದಾರೆ. ಏನೇ ಆದರೂ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಅವರು ನಿರ್ಧಾರವೇ ಅಂತಿಮ ಆಗಿರುವುದರಿಂದ ಹುದ್ದೆಗಳ ಆಕಾಂಕ್ಷಿಗಳು ಶಾಸಕರ ಮೇಲೆ ತಮ್ಮ ಪ್ರಭಾವ ಬೀರುತ್ತಿದ್ದಾರೆ.ಈಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯ ಪಿ.ಗಿರೀಶ್‌,ಈಹಿಂದೆಪಟ್ಟಣದ ಅಭಿವೃದ್ಧಿಗಾಗಿ ತಾವು ಸಾಕಷ್ಟು ಶ್ರಮಿಸಿದ್ದು, ಜನರ ಬೆಂಬಲ ಹಾಗೂ ಹಲವು ಸದಸ್ಯರ ವಿಶ್ವಾಸವಿದೆ. ಏನೇ ಆದರೂ ಶಾಸಕರ ತೀರ್ಮಾನ ಅಂತಿಮ ಎಂದಿದ್ದಾರೆ. ಇದೇ ರೀತಿಯಾಗಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ರಮೇಶ್‌ ಪ್ರತಿಕ್ರಿಯಿಸಿದ್ದು, ಶಾಸಕರ ನಿರ್ಧಾರವೇ ಇಲ್ಲಿ ಅಂತಿಮವಾಗಲಿದೆ ಎಂದಿದಾರೆ.

ಸಮರ್ಥರನ್ನು ಆಯ್ಕೆ ಮಾಡಿ : ಪಟ್ಟಣದ ಪ್ರಮುಖರಸ್ತೆಗಳು ಗುಂಡಿ ಬಿದ್ದಿದ್ದು, ಮೂಲಸೌಲಭ್ಯಗಳಕೊರತೆ ಇದೆ. ರಸ್ತೆ ದುರಸ್ತಿ, ಕೆಟ್ಟುನಿಂತ ಬೀದಿ ದೀಪಗಳ ನಿರ್ವಹಣೆ, ಅಪೂರ್ಣ ಯುಜಿಡಿ ಹಾಗೂ ಜೋಡಿ ರಸ್ತೆ ಕಾಮಗಾರಿ ವಿಳಂಬ, ಹೆಚ್ಚಾಗುತ್ತಿರುವ ಬೀದಿನಾಯಿಗಳು,ಬೀಡಾಡಿ ದನಗಳ ಹಾವಳಿ, ಅಸಮರ್ಪಕ ಕುಡಿಯುವ ನೀರಿನ ಸರಬರಾಜುಮತ್ತು ಕಸ ವಿಲೇವಾರಿ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಹೀಗಾಗಿ ಸಮರ್ಪಕವಾಗಿ ಮೂಲ ಸೌಕರ್ಯವನ್ನು ಒದಗಿಸುವ ಮತ್ತು ಸಾಮಾಜಿಕ ಕಳಕಳಿಯನ್ನು ಹೊಂದಿದ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡುವಂತಾಗಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.

Advertisement

 

-ಸೋಮಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next