Advertisement

Gundlupete; ಓಣಂ ಆಚರಣೆ ಹಿನ್ನೆಲೆ ಕೇರಳ ಗಡಿಯಲ್ಲಿ ಅಬಕಾರಿ ಪೊಲೀಸರ ತಪಾಸಣೆ ಬಿಗಿ

04:58 PM Aug 25, 2023 | Team Udayavani |

ಗುಂಡ್ಲುಪೇಟೆ: ಆ.28ರಂದು ಕೇರಳದಲ್ಲಿ ಓಣಂ ಆಚರಣೆ ಹಿನ್ನಲೆ ಅಕ್ರಮ ಮದ್ಯ ಸೇರಿದಂತೆ ಇನ್ನಿತರ ಚಟುವಟಿಕೆ ಮೇಲೆ ತೀವ್ರ ನಿಗಾವಹಿಸುವ ಉದ್ದೇಶದಿಂದ ಕರ್ನಾಟಕ ಹಾಗೂ ಕೇರಳ ಅಬಕಾರಿ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿ, ಕೇರಳ ಗಡಿಯಲ್ಲಿ ವಾಹನ ತಪಾಸಣೆ ಬಿಗಿಗೊಳಿಸಿದ್ದಾರೆ.

Advertisement

ಬಿಸಿ ಮುಟ್ಟಿಸುತ್ತಿದ್ದಾರೆ: ಗುಂಡ್ಲುಪೇಟೆ ತಾಲೂಕಿನ ಗಡಿಗೆ ಹೊಂದಿಕೊಂಡತ್ತಿರುವ ಮುತ್ತಂಗ ಚೆಕ್‌ ಪೋಸ್ಟ್‌ನಲ್ಲಿ ಚಾಮರಾಜನಗರದ ಅಬಕಾರಿ ಪೊಲೀಸ್‌ ನಿರೀಕ್ಷಕರು ಹಾಗೂ ಕೇರಳದ ವೈನಾಡಿನ ಅಬಕಾರಿ ಪೊಲೀಸರು ಜಂಟಿ
ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕಾರ್ಯಾಚರಣೆ ವೇಳೆ, ಕೇರಳ ಪ್ರವೇಶಿಸುವ ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸಿ, ಅಕ್ರಮ ಮದ್ಯ ಸಾಗಾಟ ಸೇರಿದಂತೆ ಇನ್ನಿತರ ವಸ್ತು ಸಾಗಣೆ ಕಂಡು ಬಂದರೆ ಬಿಸಿ ಮುಟ್ಟಿಸುತ್ತಿದ್ದಾರೆ. ಆದರೆ, ತಪಾಸಣೆ ವೇಳೆ ಯಾವುದೇ ಮದ್ಯ ಸಾಗಾಟ ಕಂಡುಬಂದಿಲ್ಲ. ಆದರೂ, ಓಣಂ ಮುಗಿಯುವವರೆಗೆ ಹದ್ದಿನ ಕಣ್ಣಿಡಲಾಗಿದೆ ಎಂದು ಗುಂಡ್ಲುಪೇಟೆ ಅಬಕಾರಿ ನಿರೀಕ್ಷಕರಾದ ತನ್ವೀರ್‌ ಮಾಹಿತಿ ನೀಡಿದ್ದಾರೆ.

ಅಕ್ರಮ ಲಾಟರಿಗೂ ಕಡಿವಾಣ  ಹಾಕಿ: ಕೇರಳ ಲಾಟರಿ ತಾಲೂಕಿನ ಗಡಿ ಮೂಲೆ ಹೊಳೆ ಚೆಕ್‌ ಪೋಸ್ಟ್‌ ಮೂಲಕ ಎಗ್ಗಿಲ್ಲದೆ
ಗುಂಡ್ಲುಪೇಟೆಗೆ ಬಂದು ಸೇರುತ್ತಿದೆ. ಇದರಿಂದ ಚಾಮರಾಜನಗರದಾದ್ಯಂತ ಕೇರಳ ಲಾಟರಿ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಕರ್ನಾಟಕ ಪ್ರವೇಶ ಮಾಡುವ ಪ್ರತಿಯೊಂದು ವಾಹನಗಳನ್ನು ತಪಾಸಣೆಗೆ ಒಳಪಡಿಸಬೇಕೆಂದು ಪಟ್ಟಣದ ನಿವಾಸಿ ಶಿವಕುಮಾರ್‌ ಒತ್ತಾಯಿಸಿದ್ದಾರೆ.

*ಕೇರಳದಲ್ಲಿ ಆ.28ರಂದು ಓಣಂ ಆಚರಣೆ
*ಅಕ್ರಮ ಮದ್ಯ ಸೇರಿ ಇನ್ನಿತರ ಚಟುವಟಿಕೆ ಮೇಲೆ ತೀವ್ರ ನಿಗಾ
* ಕರ್ನಾಟಕ-ಕೇರಳ ಅಬಕಾರಿ ಜಂಟಿಯಾಗಿ ಕಾರ್ಯಾಚರಣೆ
*ಕೇರಳ ಗಡಿಯಲ್ಲಿ ವಾಹನ ತಪಾಸಣೆ ಬಿಗಿ
* ಗುಂಡ್ಲುಪೇಟೆ ಮುತ್ತಂಗ ಚೆಕ್‌ ಪೋಸ್ಟ್‌ನಲ್ಲಿ ತಪಾಸಣೆ
* ಚಾ.ನಗರ ಅಬಕಾರಿ ಪೊಲೀಸರು-ಕೇರಳ ವೈನಾಡಿನ ಅಬಕಾರಿ ಪೊಲೀಸರಿಂದ ಹೆಚ್ಚಿದ ಪರಿಶೀಲನೆ
*ಕೇರಳ ಪ್ರವೇಶಿಸುವ ಪ್ರತಿ ವಾಹನ ತಪಾಸಣೆ
*ಓಣಂ ಮುಗಿಯುವವರೆಗೆ ಪೊಲೀಸರಿಂದ ಹದ್ದಿನ ಕಣ್ಣು
* ಗುಂಡ್ಲುಪೇಟೆಗೆ ಸೇರುವ ಕೇರಳ ಲಾಟರಿ ನಿಷೇಧಕ್ಕೂ ಸ್ಥಳೀಯರಿಂದ ಹೆಚ್ಚಿದ ಆಗ್ರಹ.

Advertisement
Advertisement

Udayavani is now on Telegram. Click here to join our channel and stay updated with the latest news.

Next