Advertisement
ಮೃತ ಹುಲಿಯ ಛಾಯಚಿತ್ರವನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಸಿದ ಕ್ಯಾಮರಾ ಟ್ರ್ಯಾಪ್ ಹುಲಿಗಣತಿಯ ದತ್ತಾಂಶಕ್ಕೆ ಹೋಲಿಕೆ ಮಾಡಿದಾಗ ಹುಲಿ Bandipur 15_U1783 ಎಂದು ಗುರುತಿಸಿ ಇದು ಮೊದಲನೇ ಬಾರಿಗೆ 2015ರ ಮಾ.3ರಲ್ಲಿ ನಡೆದ ಕ್ಯಾಮರಾ ಟ್ರ್ಯಾಪ್ ಗಣತಿ ಕಾರ್ಯಕ್ರಮದಲ್ಲಿ ಗುಂಡ್ರೆ ವಲಯದಲ್ಲಿ ಸೆರೆಯಾಗಿದೆ. ನಂತರ 2019-20ನೇ ಸಾಲಿನ ಗಣತಿ ಕಾರ್ಯಕ್ರಮದಲ್ಲಿಯೂ ಸಹ ಗುಂಡ್ರೆ ವಲಯದಲ್ಲಿಯೇ ಸೆರೆಯಾಗಿರುತ್ತದೆ.
Related Articles
Advertisement
ಪಶು ವೈದ್ಯಾಧಿಕಾರಿ ಡಾ. ವಾಸೀಂ ಮಿರ್ಜಾ ಹುಲಿಯ ಮರಣೋತ್ತರ ಶವ ಪರೀಕ್ಷೆ ನಡೆಸಿದ್ದು, ಪ್ರಾಥಮಿಕ ಮರಣೋತ್ತರ ಪರೀಕ್ಷಾ ವರದಿಯ ಪ್ರಕಾರ ಮೃತ ಹುಲಿಯು ಅನೇಕ, ಆಂತರಿಕ ಖಾಯಿಲೆಗಳಿಂದ ಹಾಗೂ ಮೂತ್ರ ವಿಸರ್ಜನೆಯ ಭಾಗವು (ಗುದದ್ವಾರ) ಮುಚ್ಚಿ ಹೋಗಿರುವುದರಿಂದ ಜೊತೆಗೆ ಹುಲಿಗೆ ವಯಸ್ಸಾದ ಕಾರಣ ಮೃತಪಟ್ಟಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಮೃತ ಹುಲಿಯ ದೇಹವನ್ನು ಅರಣ್ಯ ಅಧಿಕಾರಿಗಳ ಹಾಗೂ ಸ್ಥಳೀಯರ ಸಮ್ಮುಖದಲ್ಲಿ ಸುಡಲಾಯಿತು. ಮೃತ ಹೆಣ್ಣು ಹುಲಿಯ ಸಾವಿಗೆ ನಿಖರವಾದ ಕಾರಣವನ್ನು ಪರೀಕ್ಷಾ ವರದಿ ಬಂದ ನಂತರ ಖಚಿತಪಡಿಸಲಾಗುವುದು ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದರು.