Advertisement

Gundlupete: ಖಾಸಗಿ ಶಾಲಾ ವಾಹನದ ಚಕ್ರ ಹರಿದು ವಿದ್ಯಾರ್ಥಿಯ ಕಾಲಿಗೆ ತೀವ್ರ ಗಾಯ

01:34 PM Aug 17, 2024 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ಖಾಸಗಿ ಶಾಲಾ ವಾಹನದ ಚಕ್ರ ಹರಿದು ವಿದ್ಯಾರ್ಥಿಯೊರ್ವನ ಬಲಗಾಲು ನಜ್ಜುಗುಜ್ಜಾದ ಘಟನೆ ಗೋಪಾಲಪುರ ಗ್ರಾಮದಲ್ಲಿ ಆ.17ರ ಶನಿವಾರ ಬೆಳಿಗ್ಗೆ ನಡೆದಿದೆ.

Advertisement

ಗೋಪಾಲಪುರ ಗ್ರಾಮದ ಸಿದ್ದಪ್ಪ ಎಂಬವರ ಮಗ ಕನ್ನೇಗಾಲ ಗ್ರಾಮದ ಖಾಸಗಿ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಹೃತ್ವಿಕ್(8) ಕಾಲಿಗೆ ತೀವ್ರ ಗಾಯವಾಗಿದೆ.

ಘಟನೆ ವಿವರ: ಗೋಪಾಲಪುರ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ತರಗತಿಗೆ ತೆರಳಲು ತನ್ನ ಶಾಲಾ ವಾಹನಕ್ಕೆ ಕಾಯುತ್ತಾ ಸೇತುವೆ ಮೇಲೆ ಕುಳಿತಿದ್ದ. ಈ ವೇಳೆ ಖಾಸಗಿ ಶಾಲಾ ವಾಹನದ ಚಾಲಕ‌ ವಾಹನ ರಿವರ್ಸ್ ತೆಗೆಯುತ್ತಿದ್ದ ವೇಳೆ ರಸ್ತೆ ಕಿರಿದಾದ ಕಾರಣ ವಾಹನದ ಹಿಂಬದಿ ಚಕ್ರ ವಿದ್ಯಾರ್ಥಿಯ ಬಲಗಾಲಿನ ಮೇಲೆ ಹರಿದಿದೆ.

ಘಟನೆಯಲ್ಲಿ ಬಾಲಕನ‌ ಕಾಲು ನಜ್ಜುಗುಜ್ಜಾಗಿದೆ. ಕೂಡಲೇ ಸ್ಥಳೀಯರು ಹೃತ್ವಿಕ್  ನನ್ನು ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಿದ್ದಾರೆ.

ಘಟನಾ ಸ್ಥಳಕ್ಕೆ ಸಬ್ ಇನ್ಸ್ ಪೆಕ್ಟರ್ ಸಾಹೇಬಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿ, ಶಾಲಾ ವಾಹನವನ್ನು ‌ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಗುಂಡ್ಲುಪೇಟೆ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ‌ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next