Advertisement
ಮುಂದೆ 100 ಮೀ. ಉದ್ದಕ್ಕೆ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದ್ದು ಅದು ಮುಗಿಯುತ್ತಲೇ ಹೊಂಡ ಬಿದ್ದ ಮಣ್ಣಿನ ರಸ್ತೆಯಲ್ಲಿ ಸಾಗುವುದು ಅಸಾಧ್ಯದ. ಯಾವಾಗಲೇ ಹಾಕಲಾದ ಡಾಮಾರು ರಸ್ತೆಯ ಕಲ್ಲುಗಳು ಎದ್ದು ಬಂದಿದ್ದು ಮಳೆಗಾಲ ಮುಗಿದರೂ ಸಂಚರಿಸಲು ಸಾಧ್ಯವಿಲ್ಲದ ಸ್ಥಿತಿ ಇಲ್ಲಿದೆ. ಈ ರಸ್ತೆ ಮುಂದೆ ಗುಂಡಿಗೋಳಿಗೆ ಸಾಗಿ ಅಲ್ಲಿಂದ ಮೇರ್ಡಿಗೆ ತಲುಪುತ್ತದೆ. ಸ್ಥಳೀಯ ಕೆಲವು ಮಂದಿ ಈ ರಸ್ತೆಯ ದುಃಸ್ಥಿತಿಯ ಬಗ್ಗೆ ಪ್ರತಿಭಟನೆ ನಡೆಸಿದ್ದರು. ಆದರೆ ಗುಂಡಿಗೋಳಿ ರಸ್ತೆಗೆ ಇದುವರೆಗೂ ಕಾಯಕಲ್ಪಗೊಂಡಿಲ್ಲ.
ನಾನು ಪ್ರತಿದಿನ ಕುಂದಾಪುರಕ್ಕೆ ಉದ್ಯೋಗ ನಿಮಿತ್ತ ರಾಜ್ಯ ಹೆದ್ದಾರಿಗೆ ಬಂದು ಬಸ್ ಮೂಲಕ ಪ್ರಯಾಣಿಸುತ್ತಿದ್ದೇನೆ. ದ್ವಿಚಕ್ರ ವಾಹನ ಇದ್ದರೂ ಈ ರಸ್ತೆಯಲ್ಲಿ ಓಡಿಸಲು ಅಸಾಧ್ಯ. ಸ್ಕೂಟರ್ ಬಿಟ್ಟು ನಡೆದೇ ಸಾಗುವ ಎಂದರೆ ನಾನು ಕರ್ತವ್ಯ ನಿರ್ವಹಿಸು ತ್ತಿದ್ದ ಕಚೇರಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ
-ಸವಿತಾ, ಗುಂಡಿಗೋಳಿ ನಿವಾಸಿ.