Advertisement

ಗುಂಡಿಬೈಲು- ಅಂಬಾಗಿಲು : ಕಾಮಗಾರಿ ಮತ್ತೆ ಆರಂಭ

03:01 PM Mar 12, 2022 | Team Udayavani |

ಉಡುಪಿ : ಗುಂಡಿಬೈಲು- ಅಂಬಾಗಿಲು ಮುಖ್ಯರಸ್ತೆಯಲ್ಲಿ ಯುಜಿಡಿ ಮತ್ತು ವಾರಾಹಿ ಕಾಮಗಾರಿ ನಡೆಯು ತ್ತಿದ್ದು, ಇಲ್ಲಿನ ನಾಗಬನ ಸಮೀಪ, ಹಾಲಿನ ಅಂಗಡಿ ಮುಂಭಾಗ ಕಳೆದ ಆರೇಳು ದಿನಗಳಿಂದ ಕೆಲಸ ಸ್ಥಗಿತಗೊಂಡಿತ್ತು.

Advertisement

ಪರಿಣಾಮ ಅರ್ಧಕ್ಕೆ ಕಾಮಗಾರಿ ನಡೆಸಿ ಬಿಟ್ಟಿರುವುದರಿಂದ ಸ್ಥಳೀಯರ ಓಡಾಟಕ್ಕೆ, ವ್ಯಾಪಾರಿಗಳಿಗೆ, ವಾಹನ ಸವಾರರಿಗೆ ಸಮಸ್ಯೆಯಾಗಿ ಪರಿಣಮಿಸಿತ್ತು. ಹಗಲಿಡೀ ಧೂಳಿನ ಸಮಸ್ಯೆ, ಟ್ರಾಫಿಕ್‌ ಜಾಮ್‌ ಜನರನ್ನು ಕಾಡುತ್ತಿತ್ತು. ಈ ಬಗ್ಗೆ ಉದಯವಾಣಿ ಸುದಿನ ಮಾ. 10 ರಂದು ವಿಸ್ತೃತ ವರದಿ ಪ್ರಕಟಿಸಿದ್ದು, ನಗರಸಭೆ ಮತ್ತು ಕುಡ್ಸೆಂಪ್‌ ಅಧಿಕಾರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ. ನಗರಸಭೆ ಎಇಇ ಯಶವಂತ್‌, ಕುಡ್ಸೆಂಪ್‌ (ವಾರಾಹಿ ಕುಡಿಯುವ ನೀರು ಯೋಜನೆ) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೈಪ್‌ಲೈನ್‌ ಕಾಮಗಾರಿ ವೇಳೆ ಕೆಲವು ಕಡೆಗಳಲ್ಲಿ ಸೇತುವೆಗಳ ಕಾಂಕ್ರೀಟ್‌ ತಡೆಗೋಡೆಗಳು ಸಿಗುತ್ತಿರುವ ಸಮಸ್ಯೆ ಬಗ್ಗೆ ಅಧಿಕಾರಿಗಳು ತಿಳಿಸಿದ್ದರು.

ಗುಂಡಿಬೈಲಿನಲ್ಲಿ ಕೆಲಸ ತಡವಾಗಲು ಕಾರಣವಾಗಿದ್ದ ಕಾಂಕ್ರೀಟ್‌ ತಡೆ ಗೋಡೆಯನ್ನು ಕೊರೆಯುವ ಕಾರ್ಯ ಶುಕ್ರವಾರದಿಂದ ಮತ್ತೆ ಆರಂಭಗೊಂಡಿದೆ. ನಾಗರಿಕರಿಗೆ ತೊಂದರೆಯಾಗದಂತೆ ವಿಳಂಬ ಮಾಡದೆ ಕಾಮಗಾರಿ ಮುಂದುವರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಇದನ್ನೂ ಓದಿ : ನಗರಸಭೆಗೆ ನೂತನ ಕಟ್ಟಡ ಭಾಗ್ಯ :ಹಳೆಯ ತಾಲೂಕು ಕಚೇರಿ ಕಟ್ಟಡದ ಜಾಗದಲ್ಲಿ ನಿರ್ಮಿಸಲು ಪ್ರಸ್ತಾವ

Advertisement

Udayavani is now on Telegram. Click here to join our channel and stay updated with the latest news.

Next