Advertisement

Mangaluru: ಲೋಕಸಭಾ ಚುನಾವಣೆಯ ಹಿನ್ನೆಲೆ… ಮೂವರ ವಿರುದ್ಧ ಗೂಂಡಾ ಕಾಯಿದೆಯಡಿ ಪ್ರಕರಣ

08:35 PM Mar 19, 2024 | Team Udayavani |

ಮಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರು ಪೊಲೀಸ್‌ ಆಯುಕ್ತರು ಮೂವರು ಕ್ರಿಮಿನಲ್‌ಗ‌ಳ ವಿರುದ್ಧ ಗೂಂಡಾ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಉಳ್ಳಾಲ ಕೋಟೆಪುರದ ಮೊಹಮ್ಮದ್‌ ಕಬೀರ್‌ ಆಲಿಯಾಸ್‌ ಚಬ್ಬಿ (31), ಗುರುಪುರ ಮಠದಗುಡ್ಡೆಯ ನವಾಜ್‌(30) ಮತ್ತು ಶಕ್ತಿನಗರದ ಜಯ ಪ್ರಶಾಂತ್‌ (30) ವಿರುದ್ಧ ಗೂಂಡಾ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.

ಈ ಹಿಂದೆ ಮೊಹಮ್ಮದ್‌ ಕಬೀರ್‌ ಒಂದು ಕೊಲೆ ಪ್ರಕರಣ, 3 ಕೊಲೆಯತ್ನ ಪ್ರಕರಣ ಸೇರಿದಂತೆ 14 ಅಪರಾಧ ಪ್ರಕರಣಗಲ್ಲಿ ಭಾಗಿಯಾಗಿದ್ದ. ನವಾಜ್‌ ವಿರುದ್ಧ ಬಜಪೆ, ಕಾವೂರು, ಮಂಗಳೂರು ಗ್ರಾಮಾಂತರ, ಮಂಗಳೂರು ಪೂರ್ವ ಮತ್ತು ಬರ್ಕೆ ಠಾಣೆಗಳಲ್ಲಿ ಒಂದು ಕೊಲೆ, 1 ಕೊಲೆಯತ್ನ ಸೇರಿದಂತೆ 8 ಪ್ರಕರಣಗಳು ದಾಖಲಾಗಿವೆ. ಜಯಪ್ರಶಾಂತ್‌ ವಿರುದ್ಧ 3 ಗಲಭೆ, 1 ಕೊಲೆಯತ್ನ ಸೇರಿದಂತೆ 8 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

ಇದನ್ನೂ ಓದಿ: 2006ರ ನಕಲಿ ಎನ್‌ಕೌಂಟರ್ ಪ್ರಕರಣ: ಮುಂಬೈನ ಮಾಜಿ ಪೊಲೀಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next